ಕಲ್ಯಾಣ ಕರ್ನಾಟಕದ ಇತಿಹಾಸವನ್ನು ತಿಳಿದುಕೊಳ್ಳಿರಿ

0
12

ಕಲಬುರಗಿ: ಕಲ್ಯಾಣ ಕರ್ನಾಟಕದ ಇತಿಹಾಸ ಹಾಗೂ  ಇದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ  ನಾವು ತಿಳಿದುಕೊಳ್ಳಬೇಕು ಎಂದು ಸರಕಾರಿ ಮಹಾವಿದ್ಯಾಲಯ ಪ್ರಾಶುಂಪಾಲ ಡಾ.ಶಂಕ್ರೇಪ್ಪ ಹತ್ತಿ ಹೇಳಿದರು.

ಶುಕ್ರವಾರದಂದು ನಗರದ ಸರಕಾರಿ ಮಹಾವಿದ್ಯಾಲಯದ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ, ಬಳ್ಳಾರಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೆಂಟ್ರಲ್ ಬ್ಯೂರೋ ಕಮ್ಯುನಿಕೇಶನ್ (ಸಿಬಿಸಿ) ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ವಿಶೇಷ ಕಾರ್ಯಕ್ರಮವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಹೈದ್ರಾಬಾದ್ ಕರ್ನಾಟಕವು ಎಷ್ಟೊಂದು ಸಂಪದ್ಭರಿತವಾಗಿತ್ತು ಎಂದರೆ, ಬೇರೆ ಯಾವ ಸಂಸ್ಥಾನದಲ್ಲೂ ಇಂತಹ ಸಂಪತ್ತು ಇರಲಿಲ್ಲ. ಆದರೆ ಸರಿಯಾದ ಸದ್ಭಳಕೆಯಾಗಿದ್ದರೆ ಇಂದು ಹಿಂದುಳಿದ ಜಿಲ್ಲೆಗಳು ಎನ್ನುವ ಹಣೆಪಟ್ಟಿ ಸಿಗುತ್ತಿರಲಿಲ್ಲ.  ಇವತ್ತಿನ ದಿನಮಾನಗಳಲ್ಲಿ ಒಡೆದು ಅಳುವ ನೀತಿಯನ್ನು ತರುವುದು ಬೇಡ, ನಾವೆಲ್ಲರೂ ಒಂದು ಎನ್ನು ಭಾವನೆಯಿಂದ ಹಿಂದುಳಿದ ಹಣೆಪಟ್ಟಿಯನ್ನು ಹೋಗಲಾಡಿಸಬೇಕು ಎಂದು ಅವರು ಕರೆ ನೀಡಿದರು.

ಬಳ್ಳಾರಿ ಕೇಂದ್ರ ಸಂವಹನ ಇಲಾಖೆಯ ಉಪ ನಿರ್ದೇಶಕ ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಾಡುವ ಉದ್ದೇಶ ಕಲ್ಯಾಣ ಕರ್ನಾಟಕದ ಇತಿಹಾಸದ ಹಾಗೂ ಸ್ವಾತಂತ್ರ್ಯದ ಮಜುಲುಗಳ ಕುರಿತು ನಿಮ್ಮೆಲ್ಲರಿಗೂ ಅರಿವು ಮೂಡಿಸಬೇಕು ಎಂದು ಕೇಂದ್ರದ ಆಸೆಯಾಗಿದೆ.

ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಪ್ರದರ್ಶಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮಜುಲು, ಹಂತಗಳು ಕುರಿತಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಒಂದು ಸೆಲ್ಫಿ ಬೂತ್ ಇಡಲಾಗಿದ್ದು, ಅಲ್ಲಿ ಪೋಟೋ ತೆಗೆದುಕೊಂಡು ಟ್ವಿಟರ್ ಮಾಡಿ ಎಂದರು.

ಇಂದಿನ ಯುವ ಜನತೆ ಸ್ವಾತಂತ್ರ್ಯ ಯಾವ ರೀತಿ ಪಡೆದಿದ್ದೇವೆ ಎಷ್ಟೋ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಅವುಗಳನ್ನು ಮರಿತಿದ್ದೇವೆ, ಸರ್ಕಾರದ ಯೋಜನೆಗಳಲ್ಲಿ ನೀವೂ ತಿಳಿದುಕೊಂಡು ಸಾಧ್ಯವಷ್ಟು ಹಳ್ಳಿಯಲ್ಲಿರುವ ಜನರಿಗೆ ನಿಮ್ಮ ಅಕ್ಕ ಪಕ್ಕದಲ್ಲಿರುವವರಿಗೆ ತಿಳಿಸಬೇಕುÉಂದರು.

ಪ್ರಮುಖ ಯೋಜನೆ: ಪಿ.ಎಮ್ ಆವಾಸ್ ಯೋಜನೆ, ಸ್ವಚ್ಛ ಭಾರತ ಅಭಿಯಾನ,  ಹರ್ ಘರ್ ಜಲ್, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ರಾಷ್ಟ್ರಿಯ ಶಿಕ್ಷಣ ನೀತಿ 2020, ಏಕ ಭಾರತ ಶ್ರೇಷ್ಠ ಭಾರತ, ಪ್ರಧಾನಮಂತ್ರಿ ಜನ ಧನ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಉಪನ್ಯಾಸಕರಾದ ಡಾ.ಶಂಭುಲಿಂಗ ಎಸ್.ವಾಣಿ ಅವರು ವಿಶೇಷ ಉಪನ್ಯಾಸ ನೀಡಿ, ಈ ದೇಶದಲ್ಲಿ ಹಲವಾರು ಜನರ ಬಲಿದಾನ, ತ್ಯಾಗ ಹಾಗೂ ಅವರ ತನು-ಮನ-ಧನದ ಅರ್ಪಣೆಯಿಂದ ಬಂದಂತಹ ಸ್ವಾತಂತ್ರ್ಯ ನಮ್ಮದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಡಿ.ಕೆ ರಾಜರತ್ನ, ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ದತ್ತಾ ಸೋಮನಾಥ್   ರೆಡ್ಡಿ ಪಾಟೀಲ್ ಸೇರಿದಂತೆ ಉಪನ್ಯಾಸಕರು , ವಿದ್ಯಾರ್ಥಿಗಳು, ಉಪಸ್ಥಿತಿರಿದ್ದರು.

ನಶಂಕರಿ ಜನಪದ ಕಲಾ ತಂಡದಿಂದ ಬೀದಿ ನಾಟಕ, ಜನಪದ ಗೀತೆಗಳು ಹಾಗೂ ನೃತ್ಯ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಲಾಗಿದ್ದು ಅದರಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here