ಕಲಬುರಗಿ: ಸುಳ್ಳು ಭರವಸೆ ನೀಡಿದಕ್ಕೆ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ: ಸರದಾರ್ ರಾಯಪ್ಪ

0
132

ಕಲಬುರಗಿ: ಮುಖ್ಯಮಂತ್ರಿಗಳು ಕೊಟ್ಟ ಬರವಸೆ ಈಡೇರಿಸದೆ ಇರುವುದರಿಂದ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡದಿರುವುದನ್ನು ವಿರೋಧಿಸಿ ಇಂದು ಕರ್ನಾಟಕ ರಾಜ್ಯ ತಳವಾರ ಎಸ್. ಟಿ ಹೋರಾಟ ಸಮಿತಿಯ ಹೋರಾಟಗಾರರು ಮುಖ್ಯಮಂತ್ರಿಗಳವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದೆ ಎಂದು ಹೋರಾಟಗಾರರ ರಾಜ್ಯಧ್ಯಕ್ಷರಾದ ಡಾ. ಸರದಾರಾಯಪ್ಪ ತಿಳಿಸಿದ್ದಾರೆ.

ಶನಿವಾರ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನದ ನಂತರ ಭದ್ರ ಪಡೆಗಳು ಹೋರಾಟಗಾರರನ್ನು ಬಂಧಿಸಿದ ಬಂದನಕೊಳಾದ ನಂತರ ಇ-ಮೀಡಿಯಾ ಲೈನ್ ಜೊತೆ ಮಾತನಾಡಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಹಿಂದೆ ಮುಖ್ಯಮಂತ್ರಿಗಳು ಸಿಂದಗಿ ಉಪಚುನಾವಣೆ ಮಸ್ಕಿ ಉಪಚುನಾವಣೆ ಹಾಗೂ ಬಸವಕಲ್ಯಾಣ ಮತ್ತು ಕಲಬುರ್ಗಿಯಲ್ಲಿ 48 ಗಂಟೆಗಳಲ್ಲಿ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತೇನೆ . ಒಂದು ವೇಳೆ ನೀಡದಿದ್ದರೆ ಮತ್ತೊಮ್ಮೆ ನನಗೆ ಕಲಬುರಗಿಗೆ ಬರಲು ಬಿಡಬೇಡಿ ಎಂದು ಹೇಳಿದ್ದರು.

ಆದರಿಂದ ಇಂದು ನಗರಕ್ಕೆ ಆಗಮಿಸಿದ ಮುಖ್ಯಂತ್ರಿಗಳನ್ನು ಸಮುದಾಯದ ಮುಖಂಡರು ನಗರದ ಸರದಾರ್ ವಲ್ಲಭಾಯಿ ಪಟೇಲ್ ವೃತದಲ್ಲಿ ಪ್ರತಿಭಟನೆ ನಡೆಸಿ ಕಪ್ಪು ಬಟ್ಟೆ ಪ್ರದರ್ಶಿಲಾಗಿದೆ ಎಂದರು.

ಹೋರಾಟಗಾರರ ಪ್ರಧಾನ ಕಾರ್ಯದರ್ಶಿಗಳದ ರಾಜೇಂದ್ರ ರಾಜ್ವಾಳ್ ಜೆರಿ, ತಾಲೂಕ್ ಅಧ್ಯಕ್ಷರಾದ ಗಿರಿ ತುಂಬಿ, ಸುನಿತಾ ಎಂ ತಳವಾರ್, ದಿಗಂಬರ್, ಮುದುಕಣ್ಣ, ಪ್ರೇಮ್ ಕಾಲಿ, ಸಂತೋಷ್ ತಳವಾರ್ ,ಸೈಬಣ್ಣ ತಳವಾರ್, ಜೈ ಶಂಕರ್ ರಾಯಪ್ಪ ಈ ಹೋರಾಟಗಾರರು ಪೊಲೀಸರು ವಶಕ್ಕೆ ಪಡೆದು ವಿಶ್ವವಿದ್ಯಾಲಯದ ತಾಣದಲ್ಲಿ ಇರಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here