ಓರಿಯಂಟ್ ಸಿಮೆಂಟ್ ಕಂಪನಿಯಿಂದ ಹಲವರಿಗೆ ಅನ್ಯಾಯ: ಕ್ರಮಕ್ಕೆ ರೈತ ಸಂಘ ಸಿಎಂಗೆ ಮನವಿ

0
24

ಕಲಬುರಗಿ: ಚಿತ್ತಾಪುರ ತಾಲೂಕಿನ  ಓರಿಯಂಟ್ ಸಿಮೆಂಟ್ ಕಂಪನಿ ಗಣಿಗಾರಿಕೆಯಿಂದ ಇಟಗಾ ಗ್ರಾಮದಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಕೆಲವು ಮನೆಗಳು ಉರುಳಿ ಬಿದ್ದಿವೆ. ಕಂಪನಿ ಧೂಳಿನಿಂದ  ರೈತರ ಬೆಳೆಗಳು ನಾಶವಾಗಿವೆ ತಕ್ಷಣ ಸ್ಥಳೀರಿಗೆ ಮತ್ತು ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಶನಿವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ಅವರು ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ನಿಮಿತ್ತ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಕಂಪನಿಯಿಂದ ಅಗುತ್ತಿರುವ ಅನ್ಯಾಯವನ್ನು ತಕ್ಷಣವೇ ತನಿಖೆ ನಡೆಸಿ ಬೆಳೆ ನಷ್ಟ ಪರಿಹಾರ ಹಾನಿಗೊಳಗಾದ ಕುಟುಂಬಸ್ಥರಿಗೆ ಮನೆ ನಿರ್ಮಿಸಿ ಕೊಡಲು ಒತ್ತಾಯಿಸಿ ಕಂಪನಿ ಎದುರುಗಡೆ ಅಹೊರಾತ್ರಿ ಧರಣಿ ಸತ್ಯಾಗ್ರಹ ಇವತ್ತಿಗೂ 25 ನೆ ದಿನಕ್ಕೆ ಕಾಲಿಟ್ಟದೆ ಎಂದು ತಿಳಿಸಿದರು.

Contact Your\'s Advertisement; 9902492681

ಮನವಿ ಪತ್ರದಲ್ಲಿ ಏನಿದರು: ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ  ಕೆಲಸದಿಂದ ತೆಗೆದ 13 ಜನ ಕಾರ್ಮಿಕರಿಗೆ ಪುನಃ ಕೆಲಸಕ್ಕೆ ಸೇರಿಸಿ ಕೊಳ್ಳಬೇಕು.ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಂಬಳ ಕೊಡಲಾರದೆ ಕುಂಟ ನೆಪ ಹೇಳಿ ಸಂಬಳಕ್ಕಾಗಿ ಸತಾಯಿಸುವ ಕಾರ್ಮಿಕ ವಿರೋಧಿ ನೀತಿ ಕೈ ಬಿಟ್ಟು ತಕ್ಷಣವೇ ಅರ್ಧಕ್ಕೆ ನಿಂತ ಕಾರ್ಮಿಕರ ಸಂಬಳ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದರು.

ಓರಿಯಂಟ್ ಸಿಮೆಂಟ್ ಕಾರ್ಖಾನೆಯ ಗಣಿಗಾರಿಕೆಯನ್ನು ಇಟಗಾ ಗ್ರಾಮದ 200 ಮೀಟರ ದೂರದಲ್ಲಿಯೆ ನಡೆಯುತ್ತಿದ್ದು ತುರ್ತಾಗಿ ಸ್ಥಳಾಂತರ ಮಾಡಿ ಭಯದಲ್ಲಿ ಬದುಕುತ್ತಿರುವ ಮಕ್ಕಳು ಗರ್ಭಿಣಿಯರು ಮತ್ತು ವಯೊ ವೃದ್ಧರು ಜನ ಸಾಮಾನ್ಯರಿಗೆ ಸಹಜ ಬದುಕಲು  ಅವಕಾಶ ನೀಡಬೇಕು ಬಿರುಕು ಬಿಟ ಕುಟುಂಬಸ್ಥರಿಗೆ ಹೊಸದಾಗಿ ಮನೆ ಕಟ್ಟಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಓರಿಯಂಟ ಸಿಮೆಂಟ್ ಕಂಪನಿ ರೈತರಿಗೆ ವಂಚಿಸಿ ಭೂಮಿ ಖರೀದಿ ಮಾಡಿ ರೈತರಿಗೆ ಮೊಸ ಮಾಡಿದ್ದಾರೆ ಕೂಡಲೇ ಎಲ್ಲರಿಗೂ ಸಮಾನವಾಗಿ ಒಂದೇ ರೆಟ್ ಫಿಕ್ಸ್ ಮಾಡಿ ಪ್ರತಿ ಎಕರೆಗೆ  ಎಲ್ಲರಿಗೂ ಸಮಾನವಾಗಿ ಒಂದೆ ರೆಟ್ ಫಿಕ್ಸ್ ಮಾಡಿ ಇನ್ನೂ ಉಳಿದ ರೈತರ ಜಮಿನು ಖರೀದಿ ಮಾಡಿ ಇಟಗಾ ರೈತರಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಬಿ ಸಜ್ಜನ, ಸಾಯಿಬಣ್ಣ ಗುಡುಬಾ, ರಾಯಪ್ಪಾ ಹುರಮುಂಜಿ, ನಾಗಿಂದ್ರಪ್ಪಾ ಡಿಗ್ಗಿ, ಸಿದ್ದಣ್ಣಾ ಮಾಲಿ ಪಾಟೀಲ, ಮಹಾದೇವಪ್ಪ ಡಿಗ್ಗಿ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here