ಸುರಪುರ ವಿಮೋಚನಾ ಉತ್ಸವ ಎಂದೂ ಇದನ್ನು ಕರೆಯಬೇಕು-ವೇಣುಗೋಪಾಲ ಜೆ

0
14

ಸುರಪುರ: ಇಂದು ನಾವೆಲ್ಲ ಆಚರಿಸುತ್ತಿರುವುದು ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ಮಾತ್ರವಲ್ಲ,ಇದನ್ನು ಸುರಪುರ ವಿಮೋಚನಾ ಉತ್ಸವ ಎಂದೂ ಇದನ್ನು ಕರೆಯಬೇಕು ಎಂದು ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿದರು.

ತಾಲೂಕು ಆಡಳಿತ ದಿಂದ ನಗರದ ಸರದಾರ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು ೧೯೪೭ರ ಆಗಸ್ಟ್ ೧೫ ರಂದಾದರು ಅಂದಿನ ನಮ್ಮ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆತಿದ್ದು ೧೯೪೮ರ ಸಪ್ಟೆಂಬರ್ ೧೭ ರಂದು.ಆದ್ದರಿಂದ ಈ ದಿನವನ್ನು ಕಲ್ಯಾಣ ಕರ್ನಾಟಕ ಭಾಗದ ಜನರು ನಿಜವಾದ ಸ್ವಾತಂತ್ರ್ಯ ದಿನವನ್ನಾಗಿ ಈ ದಿನ ಆಚರಿಸಬೇಕು.ಆದರೆ ಸರಕಾರಗಳು ಇದನ್ನು ಮರೆಮಾಚಲು ಈ ಕಾರ್ಯಕ್ರಮ್ಕಕೆ ಹೆಚ್ಚು ಮಹತ್ವ ನೀಡುತ್ತಿಲ್ಲ ಇದನ್ನು ನಾನು ವಿರೋಧಿಸುತ್ತೇನೆ.ಅಲ್ಲದೆ ಈ ಭಾಗದ ಜನರು ಈ ದಿನವನ್ನು ಹಬ್ಬದ ದಿನವನ್ನಾಗಿ ಆಚರಿಸಬೇಕು.ಅದರಲ್ಲೂ ವಿಶೇಷವಾಗಿ ಸುರಪುರ ತಾಲೂಕಿನ ಜನರು ನಮ್ಮ ಸುರಪುರ ಅರಸರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು ವಿಮೋಚನೆಯ ವರೆಗೂ ನಿರಂತರ ಹೋರಾಟ ನಡೆಸಿದ್ದಾರೆ.

Contact Your\'s Advertisement; 9902492681

ಅಲ್ಲದೆ ಅಂದು ಇಲ್ಲಿಯ ಗಂಡು ಮಕ್ಕಳನ್ನು ಸಂಪೂರ್ಣ ನಾಶ ಮಾಡಲು ಗೂಟಗಳನ್ನು ಕೆತ್ತಿಸಿ ಅವುಗಳಿಂದ ಹತ್ಯೆಗೆ ಮುಂದಾಗಿರುವುದನ್ನು ತಡೆದ ಕಾರಣದಿಂದ ಈ ದಿನವನ್ನು ನಾವು ಸುರಪುರ ವಿಮೋಚನಾ ದಿನವೆಂದು ಆಚರಿಸಬೇಕು.ಅದರಲ್ಲಿ ಇಲ್ಲಿಯ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ,ರಾಜಾ ಪಿಡ್ಡ ನಾಯಕರ ಹೋರಾಟ ಹಾಗೂ ಸರದಾರ ವಲ್ಲಭಬಾಯ್ ಅವರ ದಿಟ್ಟ ನಿರ್ಧಾರವನ್ನು ಸದಾಕಾಲ ಸ್ಮರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ವಿಮೋಚನಾ ದಿನಾಚರಣೆಯ ಹಿನ್ನೆಲೆ ಕುರಿತು ಮಾತನಾಡಿದರು.ನಂತರ ರಾಜ್ಯ ಸರಕಾರದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ಪಡೆದಿರುವ ಟಿಹೆಚ್‌ಓ ಡಾ:ಆರ್.ವಿ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸರದಾರ್ ವಲ್ಲಭಬಾಯ್ ಪಟೇಲ್ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಲಾಯಿತು.

ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ, ತಾ.ಪಂ ಇಒ ಚಂದ್ರಶೇಖರ ಪವರ್,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಸಿಡಿಪಿಒ ಅನಿಲ್ ಕಾಂಬ್ಳೆ ಇದನ್ನು ಶಿಕ್ಷಣ ಲಕ್ಷ್ಮಣ ನಾಯಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು,ಪೊಲೀಸ್,ಗೃಹರಕ್ಷಕ ದಳ ಸೇರಿದಂತೆ ಅನೇಕ ಜನ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here