ಸುರಪುರ:ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಗರಸಭೆ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ಆಚರಿಸಲಾಯಿತು.ಆರಂಭದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಹಾಗೂ ಸರದಾರ್ ವಲ್ಲಭಾಬಾಯ್ ಪಟೇಲ್,ಡಾ:ಬಿ.ಆರ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ನಂತರ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಧ್ವಜಾರೋಹಣ ನೆರವೇರಿಸಿದರು.
ನಂತರ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ಆಚರಿಸಲಾಯಿತು.ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಧ್ವಜಾರೋಹಣ ನೆರವೇರಿಸಿದರು.ನಂತರ ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ ಕಾರ್ಯಕ್ರಮದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ ಪಾಟೀಲ್,ಸದಸ್ಯರಾದ ವೇಣುಮಾಧವ ನಾಯಕ ಸೇರಿದಂತೆ ಅನೇಕ ಜನ ಸದಸ್ಯರಿದ್ದರು ಹಾಗೂ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ವ್ಯವಸ್ಥಾಪಕ ಯಲ್ಲಪ್ಪ ನಾಯಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಗೃಹರಕ್ಷಕ ದಳ:ನಗರದ ದರಬಾರ ಶಾಲೆಯ ಬಳಿಯಲ್ಲಿನ ಗೃಹರಕ್ಷಕ ದಳದ ಕಚೇರಿಯಲ್ಲಿ ಹಾಗೂ ವೀರಯೋಧ ಶರಣಬಸವ ಕೆಂಗುರಿ ಅವರ ಪುತ್ಥಳಿ ಬಳಿಯಲ್ಲಿ ಗೃಹರಕ್ಷಕ ದಳದಿಂದ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ಆಚರಿಸಲಾಯಿತು.ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಧ್ವಜಾರೋಹಣ ನೆರವೇರಿಸಿದರು.
ಸೀನಿಯರ್ ಪ್ಲಾಟೂನ್ ಕಮಾಂಡರ್ ವೆಂಕಟೇಶ ಸುರಪುರ,ಪ್ಲಾಟೂನ್ ಕಮಾಂಡರ್ ರಮೇಶ ಅಂಬುರೆ,ಎನ್.ಸಿ.ಓ ಅಧಿಕಾರಿ ಭೀಮರಾಯ ಹುಲಕಲ್,ಬಸಣ್ಣ ಹರ್ಷಣಗೆ,ಮಾನಯ್ಯ ನಾಯಕ್,ಸೂರ್ಯಕಾಂತ ಮಾರ್ಗಲ್,ಪರಶುರಾಮ್ ಪೂಜಾರಿ,ಚಂದ್ರಶೇಖರ ದೀವಳಗುಡ್ಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.