ವಾಡಿ: ಇಂದು ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಡೆದ ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕ ಓದು ಸಂವಾದ ಕಾರ್ಯಕ್ರಮ ನಡೆಯಿತು.
ಮಡಿವಾಳಪ್ಪಾ ಹೇರೂರ ಅವರು ಪುಸ್ತಕದ ಕುರಿತು ಸವಿಸ್ತಾರವಾಗಿ ಮಾತನಾಡಿ ಸಂವಾದ ನಡೆಸಿದರು. ಅನಿಲ್ ಟೆಂಗಳಿ ಅವರು ಆರ್ ಎಸ್ ಎಸ್ ಕುರಿತು ಅದರ ಆಳ ಮತ್ತು ಅಗಲ ಎಳೆ ಎಳೆಯಾಗಿ ಬಿಚ್ಚಿಟ್ಟು ಯುವಕರು ಆರ್ ಎಸ್ ಎಸ್ ಹಾಕುವ ಗಾಳಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಸಂವಾದ ನಡೆಸಿದರು. ಸಂಚಲನ ವೇದಿಕೆಯ ಅಧ್ಯಕ್ಷ ಕಾಶಿನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ಶ್ರಾವಣ ಮೊಸಲಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಯಪ್ಪ ಕೊಟಗೆರಿ ನಿರೂಪಿಸಿದರು ಮತ್ತು ಸಿದ್ದಯ್ಯ ಶಾಸ್ತ್ರಿ ನಂದೂರಮಠ ವಂದಿಸಿದರು.
ವಿಶೇಷವಾಗಿ ಕಾರ್ಯಕ್ರಮದಲ್ಲಿ ಶೋಭಾ ನಿಂಬರ್ಗಾ, ನ್ಯಾಯವಾದಿ ಅಶ್ವಿನಿ ಮದನಕರ್, ಸಂತೋಷ ಭಾವಿ ಮನಿ, ಲಕ್ಷ್ಮಿ ಕೋಳಕೂರ, ವಿಕ್ರಮ್ ನಿಂಬರ್ಗಾ, ಚಂದ್ರು ಕರಣಿಕ ಸ್ವಾಗತಿಸಿದರು. ಸಿದ್ದಯ್ಯ ಶಾಸ್ತ್ರಿ ನಂದೂರಮಠ, ದಯಾನಂದ ಖಜೂರಿ, ಸಂತೋಷ ಭಾವಿಮನಿ, ಸಿದ್ದಾರ್ಥ್ ಗಂಗನೊರ, ಗುರು ಪ್ರಸಾದ್, ಸಂತೋಷ ಕೋಮಟೆ, ಸಂತೋಷ ಜೋಗುರ, ಗೀತಾ ಕೋಳಕೂರ, ಮೇಘಾ ಮದ್ರಿ ಮತ್ತು ಭವಾನಿ ಪ್ರಸಾದ್ ಉಪಸ್ಥಿತರಿದ್ದರು.