ಸುರಪುರ: ವಿದ್ಯಾರ್ಥಿಗಳು ಮತ್ತು ಯುವ ಜನರು ದುಮಪಾನ, ಮದ್ಯಪಾನ ಹಾಗೂ ದುಶ್ಚಟಗಳಿಂದ ದೂರವಿದ್ದು ವ್ಯಸನಮುಕ್ತರಾಗಿ ಜೀವನಸಾಗಿಸಿ ಎಂದು ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಇಲಕಲ್ಲದ ಮಹಾಂತಶಿವಯೋಗಿಗಳ ಜನ್ಮ ದಿನೋತ್ಸವ ಹಾಗೂ ವ್ಯಸನಮುಕ್ತ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ದುಶ್ಚಟಗಳ ದಾಸರಾಗಿ ಬದುಕು ಹಾಳುಮಾಡಿಕೊಳ್ಳುತ್ತಿದ್ದು ವಿದ್ಯಾರ್ಥಿ ದಿಶೆಯಿಂದಲೆ ಉತ್ತಮ ನಡೆ, ನುಡಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಇಲಕಲ್ಲದ ಮಹಾಂತ ಶಿವಯೋಗಿಗಳು ತಮ್ಮ ಮಹಾಂತ ಜೊಳಗಿಯಮೂಲಕ ಎಲ್ಲೆಡೆ ಸಂಚರಿಸಿ ದುಶ್ಚಟಗಳನ್ನು ತಮ್ಮ ಜೊಳಗೆಯಲ್ಲಿ ಹಾಕಿ ಎಂದು ಅಭಿಯಾನ ಆರಂಭಿಸಿ ಸಾವಿರಾರು ಜನರ ಮನಪರಿವರ್ತಿಸಿದ ಮಹಾನ್ ಪುರುಷರು.ಆದ್ದರಿಂದ ಅವರ ಜನ್ಮದಿನ ವ್ಯಸನಮುಕ್ತದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಶಾಂತುನಾಯಕ, ಬಿರೇಶ ಕುಮಾರ, ಬಲಭೀಮ ಪಾಟೀಲ್, ರುದ್ರಪ್ಪ ಕೆಂಭಾವಿ, ಭಾರತಿ ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹೇಶ ಬಿಶೆಟ್ಟಿ ನಿರೂಪಿಸಿದರು, ಬಸವರಾಜ ಚನ್ನಪಟ್ಟಂ ಸ್ವಾಗತಿಸಿದರು, ಸಂತೋಶ ಬಿಶೆಟ್ಟಿ ವಂದಿಸಿದರು.