ಸುರಪುರ: ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಬಸ್ ನಿಲ್ದಾಣದವರೆಗು ಬರುವ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಬೀದಿ ದೀಪಗಳಿದ್ದು ಅನೇಕ ಕಂಬಗಳಿಗೆ ದೀಪಗಳಿಲ್ಲದೆ ರಸ್ತೆ ಪೂರ ಕತ್ತಾಲಾಗಿರಲಿದೆ ಎಂದು ಅಂಬೇಡ್ಕರ ಸೇನೆ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ ಬೀದಿ ದೀಪ ಅಳವಡಿಸಲು ಆಗ್ರಹಿಸಿದ್ದಾರೆ.
ನಗರಸಭೆ ಆಯುಕ್ತರಿಗೆ ಪತ್ರ ಬರೆದು ಮಹಾತ್ಮ ಗಾಂಧಿ ವೃತ್ತದಿಂದ ಕುಂಬಾರಪೇಟೆ ವರೆಗೆ,ದಖನಿ ಮೊಹಲ್ಲಾದಿಂದ ವೆಂಕಟಾಪೂರ ವರೆಗೆ,ಬಸ್ ನಿಲ್ದಾಣದಿಂದ ಝಂಡದಕೇರಾ ರಸ್ತೆ ಸೇರಿದಂತೆ ಅನೇಕ ಮುಖ್ಯ ರಸ್ತೆಗಳಲ್ಲಿ ಹಾಕಲಾದ ವಿದ್ಯೂತ್ ಕಂಬಗಳಿಗೆ ದೀಪಗಳಿಲ್ಲದೆ.ರಾತ್ರಿಯಾದರೆ ರಸ್ತೆಗಳು ಕತ್ತಲಿಂದ ಕೂಡಿರುತ್ತವೆ.ಇದರಿಂದ ಜನಸಾಮಾನ್ಯರು ಓಡಾಡಲು ಹಾಗು ನಸುಕಿನ ಜಾವದಲ್ಲಿ ಕಸ ಗೂಡಿಸಲು ಹೋಗುವ ಮಹಿಳಾ ಕಾರ್ಮಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ.ಕತ್ತಲಲ್ಲಿ ಹಾವು ಚೇಳುಗಳಿಂದ ಅಪಾಯ ಎದುರಾಗಲಿದೆ.ಅಲ್ಲದೆ ಮಳೆಗಾಲವಾದ್ದರಿಂದ ರಸ್ತೆಗಳಲ್ಲಿನ ಗುಂಡಿಗಳು ಕಾಣದೆ ಜನರು ಬೀಳುವ ಸಾಧ್ಯತೆ ಇದೆ.ಆದ್ದರಿಂದ ಎಲ್ಲಾ ಕಂಬಳಿಗು ಬಲ್ಬಗಳನ್ನು ಹಾಕುವಂತೆ ಅನೇಕ ಬಾರಿ ಮೌಖಿಕವಾಗಿ ಹೇಳಿದರು ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ.ಕೊನೆಯ ಬಾರಿ ಮನವಿ ಮಾಡುತ್ತಿದ್ದು ಕೂಡಲೆ ಬೀದಿ ದೀಪ ಅಳವಡಿಸಬೇಕು.
ನಗರದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು,ಚರಂಡಿಗಳಲ್ಲಿ ರಾಡಿ ಹಾಗೇ ಇರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಜನರಿಗೆ ರೋಗ ಹರಡಲಿದೆ.ಇನ್ನು ನಗರದಲ್ಲಿ ಹಂದಿ ಮತ್ತು ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಹಂದಿ ಮತ್ತು ದನಗಳ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಗರಸಭೆ ಮುಂದೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದುss ಆಯುಕ್ತರಿಗೆ ಬರೆದ ಮನವಿಯಲ್ಲಿ ಎಚ್ಚರಿಸಿದ್ದಾರೆ.