ಕಲಬುರಗಿ: ಶ್ರೀ ಶಿವಶರಣ ಹರಳಯ್ಯ ಸಮಾಜ ಜಿಲ್ಲಾ ಘಟಕದಿಂದ ಭಾನುವಾರ ಕಲಬುರಗಿಯಲ್ಲಿ ಅಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಇತ್ತೀಚೆಗೆ ಕಲಬುರಗಿ ಜಿಲ್ಲಾ ಮಟ್ಟದ ಸರ್ವೋತ್ತಮ ನಾಗರಿಕ ಸೇವಾ ಪ್ರಶಸ್ತಿ ಪಡೆದ ನನಗೆರವಿ ಮಿರಸಕರ್ ಅವರಿಗೆ ಶಾಸಕ ಬಸವರಾಜ ಮತ್ತಿಮೂಡ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನನ್ಮೊಂದಿಗೆ ಕೇಂದ್ರ ಚಿತ್ರಕಲಾ ಅಕಾಡೆಮಿಯಿಂದ ಚಿತ್ರಕಲಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತುಮಕೂರು ರವಿಂದ್ರ ಕಲಾನಿಕೇತನ ಪ್ರಾಚಾರ್ಯ ಪ್ರಭು ಹರಸೂರ ಮತ್ತು ಹೆಬ್ಬಾಳ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ ಬಿ. ದಿವಂಟಗಿ ಅವರನ್ನು ಇದೇ ಸಂದರ್ಭದಲ್ಲಿ ಗಣ್ಯರು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ್, ಸಮಾಜದ ಗಣ್ಯರು ಭಾಗವಹಿಸಿದ್ದರು.