ಸೇಡಂ ಮತಕ್ಷೇತ್ರದ ಪೆಂಚನಪಳ್ಳಿ ಗ್ರಾಮದಲ್ಲಿ ವಾತಿಬೇಧಿ ಆಗುತ್ತಿರುವ ಹಿನ್ನಲೆ ರೋಗಿಗಳು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತುರುವ ರೋಗಿಗಳಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಬಾಲರಾಜ್ ಗುತ್ತೇದಾರ ಊಟದ ವ್ಯವಸ್ಥೆ ಮಾಡಿದ್ದರು.
ಕಲಬುರಗಿ : ಸೇಡಂ ಮತಕ್ಷೇತ್ರದ ಪೆಂಚನಪಳ್ಳಿ ಗ್ರಾಮದಲ್ಲಿ ವಾಂತಿಬೇಧಿ ಆಗುತ್ತಿರುವ ಹಿನ್ನಲೆ ರೋಗಿಗಳು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತುರುವ ಹಿನ್ನೆಲೆ ಸೇಡಂ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪೆಂಚನಪಳ್ಳಿ ಗ್ರಾಮದಲ್ಲಿ ವಾಂತಿಭೇದಿ ಆಗಿದೆ ಆದಕಾರಣ ಸಂಭದ್ದ ಪಟ್ಟ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಹಕ ಅಧಿಕಾರಿಗಳು, ತಹಸಿಲ್ದಾರರು ಕೂಡಲೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರಲ್ಲಿ ಜಾಗೃತಿ ಮೂಡಸಬೇಕು ಜೊತೆಗೆ ವಾಂತಿಭೇದಿಯಾದ ರೋಗಿಗಳಿಗೆ ಗುಣ್ಣಮಟ್ಟದ ಚಿಕಿತ್ಸೆನೀಡಲು ಮುಂದಾಗಬೇಕು, ಇಂತಹ ಪ್ರಕರಣ ಪೆಂಚನಪಳ್ಳಿ ಅಲ್ಲದೆ ಈ ಹಿಂದೆ ಸುಲೇಪೇಟ , ಕುಪನೂರ, ಹೊಡೆಬೀರನಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಆಗುತ್ತಿದೆ ಆದಕಾರಣ ಅಧಿಕಾರಿಗಳು ಎಚ್ಚೇತುಕೊಳ್ಳಬೇಕು ಹಾಗೂ ಪೆಂಚನಪಳ್ಳಿಗೆ ಸಂಬAಧಿಸಿದ ಸುಲೇಪೇಟ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ
ಓರ್ವ ವೈದ್ಯ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಹೆಚ್ಚಿನ ವೈದ್ಯರನ್ನು ಕೂಡಲೇ ನೇಮಿಸಬೇಕು ಈಗಾಗಲೇ ಆ ಭಾಗದಲಿ ವಾಂತಿಭಾದೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ವೈದ್ಯರ ಕೊರತೆಯಿಂದಾಗಿ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಸಂಬAಧಪಟ್ಟವರು ಕೂಡಲೇ ಗಮನ ಹರಿಸಿ, ಹೆಚ್ಚಿನ ವೈದ್ಯರನ್ನು ನೇಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಕುಮಾರ ಕೊಡ್ಲಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.