ಮಕ್ಕಳ ಮನಸ್ಸಿನಲ್ಲಿ ಪೂಜನೀಯ ಸ್ಥಾನ ಪಡೆದುಕೊಂಡರೆ ಅದುವೇ ಶಿಕ್ಷಕರಿಗೆ ನಿಜವಾದ ಪ್ರಶಸ್ತಿ

0
73

ಶಹಾಭಾದ: ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಪೂಜನೀಯ ಸ್ಥಾನ ಪಡೆದುಕೊಂಡರೆ ಅದುವೇ ಶಿಕ್ಷಕರಿಗೆ ದಕ್ಕುವ ನಿಜವಾದ ಪ್ರಶಸ್ತಿ ಎಂದು ಚಿತ್ತಾಪೂರ ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.

ಅವರು ರವಿವಾರ ನಗರದ ಜಗದಂಬಾ ಮಂದಿರದ ಸಭಾಂಗಣದಲ್ಲಿ ಕಸಾಪ ತಾಲೂಕಾ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಇಲಾಖೆಯಲ್ಲಿ ಸಾಕಷ್ಟು ಜನ ಶಿಕ್ಷಕರಿದ್ದಾರೆ.ಅವರು ಒಳ್ಳೆಯ ಬೋಧನೆ ಮಾಡುತ್ತಿದ್ದಾರೆ.ಅವರಲ್ಲಿ ಕೆಲವರನ್ನು ಗುರುತಿಸಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಷಯ.ಶಿಕ್ಷಕರು ತಾವು ಪಡೆದ ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಪೂಜನೀಯ ಸ್ಥಾನ ಪಡೆದುಕೊಂಡರೆ ಅದುವೇ ಶಿಕ್ಷಕರ ನಿಜವಾದ ಪ್ರಶಸ್ತಿ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮಕ್ಕಳಲ್ಲಿ ಗುಣಾತ್ಮಕತೆ ಶಿಕ್ಷಣ ನೀಡುವತ್ತ ಮುಂದಾಗಬೇಕಿದೆ. ಎಷ್ಟೋ ಜನ ಶಿಕ್ಷಕರು ಕವಿತೆಗಳನ್ನು ಬರೆಯುತ್ತಾರೆ.ಆದರೆ ಅವರಿಗೆ ಸೂಕ್ತವಾದ ವೇದಿಕೆ ಒದಗದ ಕಾರಣ ಅವರ ಪ್ರತಿಭೆ ಕಮರುತ್ತದೆ.ಆದರೆ ಕಸಾಪದವರು ಶಿಕ್ಷಕರಿಗೆ ತಮ್ಮ ಕವನ ವಾಚನ ಮಾಡಲು ಸೂಕ್ತ ವೇದಿಕೆ ಕಲ್ಪಿಸಿ , ಸಾಹಿತ್ಯವನ್ನು ಪುಟಿದೇಳುವಂತೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.

ಜಿಲ್ಲಾ ಕಸಾಪ ಸಾಹಿತ್ಯ ಸಂಚಾಲಕ ಸಿ.ಎಸ್.ಆನಂದ ಮಾತನಾಡಿ, ಒಬ್ಬ ವ್ಯಕ್ತಿಗೆ ಶಿಕ್ಷಕ ವೃತ್ತಿ ಸಿಕ್ಕಿರುವುದೇ ನಿಜವಾದ ದೊಡ್ಡ ಪ್ರಶಸ್ತಿ.ಯಾರಿಗೋ ಪ್ರಭಾವ ಬೀರಿ, ಹಣ ಕೊಟ್ಟು, ದುಂಬಾಲು ಬಿದ್ದು, ಲಾಭಿ ಮಾಡಿ ಹಾಗೂ ಪ್ರಶಸ್ತಿಗಾಗಿಯೇ ಕೆಲಸ ಮಾಡಿ ಪ್ರಶಸ್ತಿ ಪಡೆಯುತ್ತಿರುವುದು ಇಂದಿನ ದಿನಮಾನಗಳಲ್ಲಿ ಕಾಣುತ್ತಿದ್ದೆವೆ.ಆದರೆ ಸಹಜವಾಗಿ ನಮ್ಮ ಕಾರ್ಯಕ್ಷಮತೆಯಿಂದ ದಕ್ಕಬೇಕೇ ಹೊರತು ವಾಮ ಮಾರ್ಗದಿಂದಲ್ಲ.ಉತ್ತಮ ಶಿಕ್ಷಕರು ಮಕ್ಕಳ ಗುರಿ ಮತ್ತು ಕನಸುಗಳನ್ನು ಅವರಲ್ಲಿ ತುಂಬುವಂತರಾಗಬೇಕು.ಅಲ್ಲದೇ ಅದಕ್ಕೆ ಪೂರಕವಾಗಿ ಪ್ರೇರಣೆ ನೀಡಿದರೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಯಾವಾಗಲೂ ಶಿಕ್ಷಕರು ಹೊಸತನವನ್ನು ಮಕ್ಕಳಿಗೆ ಕಲಿಸಬೇಕು.ಸ್ಪೂರ್ತಿ, ಕ್ರೀಯಾಶೀಲತೆ, ಪ್ರಾಮಾಣಿಕತೆ,ಕರ್ತವ್ಯ ಪ್ರಜ್ಞೆ, ಚಲನಶೀಲತೆಯನ್ನು ಅಳವಡಿಕೊಂಡು ಮಕ್ಕಳಲ್ಲಿ ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದ ಪ್ರಬುದ್ಧ ವ್ಯಕ್ತಿಯಾಗಿ ನಿರ್ಮಾಣ ಮಾಡುವುದರಲ್ಲಿ ಮುಂದಾಗಬೇಕೆಂದು ಹೇಳಿದರು.

ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿದರು.ಉದ್ದಿಮೆದಾರ ಭೀಮರಾವ ಮೇಟಿ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ಪ್ರಾಥಮಿಕ ಶಾಳಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್,ಕಸಾಪ ಖಜಾಂಚಿ ಬಾಬುರಾವ ಪಂಚಾಳ ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕರು ಕವಿತೆ ವಾಚನ ವಾಚನ ಮಾಡಿದರು.ಅಲ್ಲದೇ ವಾಣಿ ಚಂದ್ರಕಾಂತ, ಭೀಮಾಶಂಕರ ಬೊಮ್ಮನಳ್ಳಿ, ಮಹಾದೇವಿ ಗೊಬ್ಬೂರಕರ್,ಟೀಕಾರಾಮ ಮುಂಡರಗಿ, ದತ್ತಪ್ಪ ಕೋಟನೂರ್, ಶಿವಲೀಲಾ ಸುಣಗಾರ ಅವರಿಗೆ ಆದರ್ಶ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಲೋಹಿತ್ ಕಟ್ಟಿ ನಿರೂಪಿಸಿದರು, ರಾಜು ಕೋಬಾಳ ಹಾಗೂ ದಶರಥ ಕೋಟನೂರ ಪ್ರಾರ್ಥಿಸಿದರು, ಸಿದ್ದಲಿಂಗ ಬಾಳಿ ಪ್ರಾಸ್ತಾವಿಕ ನುಡಿದರು, ಬಸವರಾಜ ಮದ್ರಿಕಿ ಸ್ವಾಗತಿಸಿದರು, ಶರಣು ವಸ್ತ್ರದ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here