ಸುರಪುರ: ೨೦೧೯-೨೦ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ೩ ವರ್ಷದ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಲು ಎಸ್.ಎಸ್.ಎಲ್.ಸಿ. ಮತ್ತು ಹಾಗೂ ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ೦೨ ವರ್ಷಗಳ ಐ.ಟಿ.ಐ/ ದ್ವಿತೀಯ ಪಿ.ಯು.ಸಿ.(ವಿಜ್ಞಾನ) ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶಾವಧಿಯನ್ನು ದಿನಾಂಕವನ್ನು ಆಗಸ್ಟ್ ೧೪ ರವರೆಗೆ ವಿಸ್ತರಿಸಲಾಗಿದೆ.
ಡಿಪ್ಲೋಮಾ ಅರ್ಜಿ ನೊಂದಣಿ ಶುಲ್ಕ ಸಾಮಾನ್ಯ/೨ಎ/ ೨ಬಿ/ ೩ಎ/ ೩ಬಿ ರವರಿಗೆ ರೂ: ೧೦೦ ರೂಪಾಯಿ ಹಾಗು ಪ.ಜಾ/ಪ.ಪಂ/ಪ್ರವರ್ಗ-೧ ರವರಿಗೆ ೫೦ ರೂಪಾಯಿ ಇರುತ್ತದೆ.
ಆಸಕ್ತ ವಿದ್ಯಾರ್ಥಿಗಳು ಸ್ಥಳಿಯ ಸರ್ಕಾರಿ ಪಾಲಿಟೆಕ್ನಿಕ್, ಸುರಪುರ ಸಂಸ್ಥೆಯ ಕಛೇರಿಯಲ್ಲಿ ಶುಲ್ಕ ಪಾವತಿಸಿ ಪ್ರವೇಶ ಅರ್ಜಿಗಳನ್ನು ಪಡೆದು ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿಗಳನ್ನು ಆಫ್ ಲೈನ್ ಮೂಲಕ ಈ ಸಂಸ್ಥೆಯಲ್ಲಿ ಪ್ರವೇಶ ನೀಡಲಾಗುವುದು. ಪ್ರವೇಶ ಅರ್ಜಿಯ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳನ್ನು ಸಂಸ್ಥೆಯ ಸೂಚನಾಫಲಕ ಅಥವಾ ಕಛೇರಿಯಲ್ಲಿ ಕೇಳಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಸಂಸ್ಥೆಯಲ್ಲಿ ತಾಂತ್ರಿಕ ಕೋರ್ಸಗಳಾದ ಸಿವಿಲ್ ಇಂಜಿನಿಯರಿಂಗ್,ಕಂಪ್ಯೂಟರ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷ್ ಇಂಜಿನಿಯರಿಂಗ್ ಹಾಗು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳಿವೆ.
ಆದ್ದರಿಂದ ಯಾದಗಿರಿ ಜಿಲ್ಲೆಯ ಹಾಗೂ ಇನ್ನಿತರ ಜಿಲ್ಲೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದೆಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ೮೦೫೦೬೧೦೫೭೫, ೯೭೪೩೧೧೩೮೧೨ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.ಸ