ಖಾನಾಪೂರ ಶಾಲೆ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

0
41

ಚಿತ್ರ ಶೀರ್ಷಿಕೆ ೨ಎಎಲ್‌ಡಿ೨
ಆಳಂದ: ಖಾನಾಪೂರ ಶಾಲೆಯ ಶಿಕ್ಷಕ ಹಣಮಂತ ಕಂಬಾರ ಅವರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳೊಂದಿಗೆ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಆಳಂದ: ತಾಲೂಕಿನ ಖಾನಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ ಕುಂಬಾರ ಅವರ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿಗಳೊಂದಿಗೆ ಪಾಲಕರು ಸೇರಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ಶಿಕ್ಷಕರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಬೇಕು. ಈಗಾಗಲೇ ಶಾಲೆಯಲ್ಲಿ ಶಿಕ್ಷಕರ ಕೊರತೆ ಅನುಭವಿಸುತ್ತಿದ್ದು, ಮತ್ತೊರ್ವ ಶಿಕ್ಷಕರ ವರ್ಗಾವಣೆಯಿಂದ ಗ್ರಾಮೀಣ ಶಾಲೆಯ ಮಕ್ಕಳ ವಿದ್ಯಾಭಾಸ ಕುಂಠಿತಗೊಳ್ಳುತ್ತದೆ. ಮೇಲಾಧಿಕಾರಿಗಳ ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಶಿಕ್ಷಕರನ್ನು ನಿಯೋಜಿಸಿ ಶೈಕ್ಷಣಿಕ ಅನುಕೂಲ ಒದಗಿಸಬೇಕು ಎಂದು ಪಾಲಕರು ಒತ್ತಾಯಿಸಿದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟುಹಿಡಿಕೊಂಡ ಗ್ರಾಮಸ್ಥರು ಶುಕ್ರವಾರ ಸಂಜೆಯಾದರು ಪ್ರತಿಭಟನೆ ಮುಂದುವರೆಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಅವರು, ಶಾಲೆಯ ಹೆಚ್ಚುವರಿ ಶಿಕ್ಷಕರನ್ನೇ ಮಾತ್ರ ವರ್ಗಾಯಿಸಲಾಗಿದೆ. ಖಾಯಂ ಶಿಕ್ಷಕರನ್ನು ಅಥವಾ ಬೇರೊಬ್ಬ ಶಿಕ್ಷಕರನ್ನು ನಿಯೋಜನೆ ಕೈಗೊಳ್ಳಲಾಗುವುದು ಎಂದು ಹೇಳಿದರು ಗ್ರಾಮಸ್ಥರು ವರ್ಗಾಯಿತ ಶಿಕ್ಷಕರನ್ನೇ ಬೇಕು ಎಂದು ಹಠಹಿಡಿದ ಬೀಗ ಹಾಕಿದ್ದಾರೆ. ನಾವು ಕಲಬುರಗಿಯಲ್ಲಿ ಶಿಕ್ಷಕರ ಕೌನ್ಸಲಿಂಗಲಿದ್ದೇನೆ ಸ್ಥಳಕ್ಕೆ ಭೇಟಿ ನೀಡಲಾಗಿಲ್ಲ. ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ ಆದರೂ ಗ್ರಾಮಸ್ಥರು ಒಪ್ಪಿಯಿಲ್ಲ ಪ್ರತಿಭಟನೆ ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು.

ಪ್ರತಿಭಟನೆಯೆಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here