ಸಂಘಗಳು ಲಾಭದ ಕಡೆಗೆ ಮುಖಮಾಡಬೇಕಾದರೆ ಸಂಸ್ಥೆಯ ಸದಸ್ಯರ ಪಾತ್ರ ಮುಖ್ಯ

0
53

ಶಹಾಬಾದ: ಯಾವುದೇ ಸಹಕಾರ ಸಂಘಗಳು ಲಾಭದ ಕಡೆಗೆ ಮುಖಮಾಡಬೇಕಾದರೆ ಆ ಸಂಸ್ಥೆಯ ಸದಸ್ಯರ ಪಾತ್ರ ಮುಖ್ಯವಾಗಿರುತ್ತದೆ ಎಂದು ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ಬೆಲ್ಲದ್ ಹೇಳಿದರು.

ಅವರು ನಗರದಲ್ಲಿ ಆಯೋಜಿಸಲಾದ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ 9ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಸಂಘವು ಯಶಸ್ವಿಯಾಗಿ 9 ವರ್ಷಗಳನ್ನು ಪೂರ್ಣಗೊಳಿಸಿದೆ. ಎಲ್ಲಾ ಸದಸ್ಯರ ಹಾಗೂ ನಿರ್ದೇಶಕ ಮಂಡಳಿಯ ನಿರ್ದೇಶಕ ಸತತ ಸಹಕಾರದಿಂದ ಸಂಘವು ಪ್ರತಿ ವರ್ಷ ಲಾಭದಲ್ಲಿ ನಡೆಯುತ್ತಿದೆ. ಸಂಘವು ಸದಸ್ಯರ ಆರ್ಥಿಕ ಅಗತ್ಯತೆಗಳನ್ನು ಅರಿತುಕೊಂಡು ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ವಿತರಿಸುತ್ತಿದೆ. ಅಲ್ಲದೆ ಸಂಘದ ಸದಸ್ಯರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಸಂಘವು ಇನ್ನು ಬೆಳೆಯಲು ಸಾಧ್ಯ ಎಂದು ನುಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಕರಾದ ರಾಘವೇಂದ್ರ ಎಂ.ಜಿ. ಮಾತನಾಡಿ, ಯಾವುದೇ ಸಂಘಗಳು ವೃತ್ತಿಪರೆತೆಯ ಜತೆಗೆ ಮಾನವೀಯತೆಯನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯ. ಕಷ್ಟದಲ್ಲಿರುವ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ, ಅವರಿಂದ ಸರಿಯಾದ ಸಮಯಕ್ಕೆ ಮರು ಪೂರೈಸಿದರೇ ಅವರು ಬೆಳವಣಿಗೆ ಹೊಂದುವುದಲ್ಲದೇ ಸಂಘದ ಅಭಿವೃದ್ಧಿಗೆ ಕಾರಣವಾಗುತ್ತದೆ. ವ್ಯಾಪಾರಿಗಳು, ಸಂಘದ ಸದಸ್ಯರುಗಳು ತಮ್ಮ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವ ಜತೆಗೆ ಸಂಘದ ಅಭಿವೃದ್ಧಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು.

ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ಬಾಬು.ಬಿ.ಪವಾರ,ಸಂಘದ ಕಾನೂನು ಸಲಹೆಗಾರರಾದ ತಿಮ್ಮಯ್ಯ ಹೆಚ್. ಮಾನೆ, ರಾಮಣ್ಣ ಎಸ್. ಇಬ್ರಾಹಿಂಪೂರ, ಎಲ್ಲಪ್ಪ ಬಾಂಬೆ, ಶಂಕರ ದಂಡಗುಲಕರ್, ಶರಣು ಸನಾದಿ, ನರಸಪ್ಪ ಮಾನೆ, ತಿಮ್ಮಯ್ಯ ಮಾನೆ, ಕಿರಣಕುಮಾರ, ನೀಲಕಂಠ ಹುಲಿ, ದುರ್ಗಣ್ಣ ವಿ. ಕುಸಾಳೆ, ಹಣಮಂತ ದಂಡಗುಲಕರ್, ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here