ಕಲಬುರಗಿ ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್

0
45

ಕಲಬುರಗಿ: ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ವಾಸ ಮಾಡುವ 453 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಿದ್ದು, ತಾಂಡಾಗಳಲ್ಲಿನ ಮನೆಗಳ ಸರ್ವೇಗೆ ಬರುವ ಕಂದಾಯ ಸಿಬ್ಬಂದಿಗೆ ತಾಂಡಾ ನಿವಾಸಿಗಳು ಅಗತ್ಯ ಸಹಕಾರ ನೀಡಬೇಕೆಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಶಕಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈಗ ಅದನ್ನು ಯುದ್ದೋಪಾದಿಯಲ್ಲಿ ಮಾಡುತ್ತಿದೆ. ಹೀಗಾಗಿ ಪ್ರಸ್ತುತ ತಾಂಡಾದಲ್ಲಿನ ವಾಸದ ಮನೆ ಅಳತೆಯನ್ನು ಸರ್ವೇ ಮಾಡಲಾಗುತ್ತಿದೆ. ಸರ್ವೇಗೆ ಬರುವ ಸಿಬ್ಬಂದಿಗಳಿಗೆ ಮತ್ತು ಈ ಕಾರ್ಯಕ್ಕೆ ವಿಶೇಷವಾಗಿ ನಿಯೋಜಿಸಿದ 100 ಜನ ಸಿಬ್ಬಂದಿಗಳಿಗೆ ಈಗಾಗಲೆ ಗುರುತಿನ ಚೀಟಿ ನೀಡಲಾಗಿದ್ದು, ಗುರುತಿನ ಚೀಟಿ ಇರುವುದನ್ನು ಖಾತ್ರಿ ಮಾಡಿಕೊಂಡು ಯಾವುದೇ ಆತಂಕವಿಲ್ಲದೇ ಸರ್ವೇ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಾಂಡಾ ನಿವಾಸಿಗಳಲ್ಲಿ ಡಿ.ಸಿ. ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದಲ್ಲಿ ಪ್ರತಿಯೊಬ್ಬರಿಗೆ ಹಕ್ಕುಪತ್ರ ನೀಡಲಾಗುತ್ತದೆ. ಅದರ ಮೇಲೆ ಬ್ಯಾಂಕ್ ಸಾಲ ಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತು ಪಡೆಯಬಹುದಾಗಿದೆ. ರಸ್ತೆ, ಮೂಲಸೌಕರ್ಯ ತಾಂಡಾಗಳಲ್ಲಿ ಸಿಗಲಿದೆ. ಮನೆ ಮಾಲೀಕತ್ವ ದೊರೆಯುತ್ತದೆ.

ಇನ್ಮುಂದೆ ಯಾವುದೇ ಖಾಸಗಿ ವ್ಯಕ್ತಿ ಬಂದು ಜಮೀನು ತನ್ನದೆಂದು ತಕರಾರು ತೆಗೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

30,000 ಹಕ್ಕು ಪತ್ರ ವಿತರಣೆ ಗುರಿ: ಜಿಲ್ಲೆಯಾದ್ಯಂತ 453 ತಾಂಡಾಗಳಲ್ಲಿನ 44,627 ಮನೆಗಳ ಪೈಕಿ 30,000 ಮನೆಗಳಿಗೆ ಹಕ್ಕು ಪತ್ರ ನೀಡುವ ಗುರಿ ಹೊಂದಲಾಗಿದೆ. ಪ್ರಸ್ತುತ 14,246 ಮನೆ ಸರ್ವೇ ಕಾರ್ಯ ಮುಗಿದಿದ್ದು, ಮುಂದಿನ ಆಕ್ಟೋಬರ್ 10 ರೊಳಗೆ ಇನ್ನುಳಿದ 15,000ಕ್ಕೂ ಮೇಲ್ಪಟ್ಟ ಮನೆಗಳ ಸರ್ವೇ ಮುಗಿಸಿ ಅಕ್ಟೋಬರ್ ಮಾಹೆಯಲ್ಲಿಯೇ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು.

453 ತಾಂಡಾಗಳ ಪೈಕಿ ಸರ್ಕಾರಿ ಜಮೀನಿನಲ್ಲಿ-68, ಖಾಸಗಿ ಮತ್ತು ಉಪ ಗ್ರಾಮಗಳ ಗ್ರಾಮ-289, ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ-62 ಹಾಗೂ ಅರಣ್ಯದಲ್ಲಿ 34 ತಾಂಡಾಗಳಿವೆ. ಅರಣ್ಯ ತಾಂಡಾ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅದು ಇತ್ಯರ್ಥವಾದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

1.17 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಸುರಿದ ಮಳೆಯಿಂದ ಪರಿಷ್ಕøತ ವರದಿಯಂತೆ 1.70 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಪ್ರಾಥಮಿಕ ವರದಿಯಲ್ಲಿ 1.10 ಲಕ್ಷ ಹೆಕ್ಟೇರ್ ಎಂದು ವರದಿ ನೀಡಿದ ಮೇರೆಗೆ ಈಗಾಗಲೆ ಜಿಲ್ಲೆಯ 83,645 ರೈತರಿಗೆ 74.49 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here