ಗ್ರಾಮ ಸ್ವಚ್ಛತೆಗೆ ಎಲ್ಲರೂ ಕೈ ಜೋಡಿಸಬೇಕು: ಡಾ.ಗೀರಿಶ್ ಬದೋಲೆ

0
45

ಕಲಬುರಗಿ: ಗ್ರಾಮ ಸ್ವಚ್ಛತೆಯಾದರೆ ಇಡೀ ದೇಶವೆ ಅಭಿವೃದ್ಧಿಯಾಗುತ್ತದೆ ಮತ್ತು ಗ್ರಾಮ ಸ್ವಚ್ಛತೆಗೆ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ ಎಲ್ಲ ಗ್ರಾಮಸ್ಥರು ಸಹ ಸ್ವಯಂ ಪ್ರೇರತರಾಗಿ ಮುಂದೆ ಬಂದು ಸ್ವಚ್ಛತೆ ಕೈಗೊಂಡರೆ ಗ್ರಾಮದಲ್ಲಿ ಉತ್ತಮ ಆರೋಗ್ಯ ಮತ್ತು ಒಳ್ಳೆಯ ವಾತವರಣ ನಿರ್ಮಾಣವಾಗುತ್ತದೆ ಎಂದು ಕಲಬುರಗಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗೀರಿಶ್ ಬದೋಲೆ ರವರು ಕರೆ ನೀಡಿದರು.

ಇಂದು ಕಲಬುರಗಿ ತಾಲೂಕಿನ ಸಾವಳಗಿ ಬಿ ಗ್ರಾಮ ಪಂಚಾಯತ ನಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ, ಸ್ವಚ್ಛ ಭಾರತ ಮಿಷನ್ ಮತ್ತು ಜಲ ಜೀವನ ಮಿಷನ್ , ತಾಲೂಕು ಪಂಚಾಯತ ಕಲಬುರಗಿ, ಹಾಗೂ ಗ್ರಾಮ ಪಂಚಾಯತ್ ಸಾವಳಗಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ನೇ ಅಕ್ಟೋಬರ್ 2022 ರಿಂದ 2ನೇ ಅಕ್ಟೋಬರ್ 2022 ರವರೆಗೆ ಸ್ವಚ್ಛತಾ ಹೀ ಸೇವಾ ಅಂದೋಲನ ಅಂಗವಾಗಿ ಇಂದು ಸಾವಳಗಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿಗ್ರಾಮದ ಕಲ್ಯಾಣಿ ಸುತ್ತಮುತ್ತ ಸ್ವಚ್ಛತೆ ಮಾಡುವ ಮೂಲಕ ಗ್ರಾಮದಲ್ಲಿ ಶ್ರಮದಾನಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಸ್.ಬಿ.ಎಂ. ಯೋಜನಾ ನಿದೇರ್ಶಕರಾದ ಜಗದೇವ ಬಿ., ತಾ.ಪಂ.ಕಲಬುರಗಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಪ್ರವೀಣಕುಮಾರ ಗ್ರಾ.ಪಂ. ಅಧ್ಯಕ್ಷರಾದ ಜಯಶ್ರಿ,ೀ ಸೂರ್ಯಕಾಂತ ಜಾನೆ, ಸಹಾಯಕ ನಿದೇರ್ಶಕರು ರೇವಣಸಿದ್ಧಪ್ಪ, ಮತ್ತು ಪಿಡಿಓ ಸುವರ್ಣ ಎಸ್ ಬಿರಾದರ್, ಗ್ರಾ.ಪಂ. ಸದಸ್ಯರು, ಜಲ ಜೀವನ ಮಿಷನ್ ಡಿಪಿಎಂ. ಡಾ.ರಾಜು ಕಂಬಳಿಮಠ ಮತ್ತು ಎಸ್.ಬಿ.ಎಂ. ಜಿಲ್ಲಾ ಸಮಾಲೋಚಕರು, ಗುರುಬಾಯಿ ಇಂಡಿ, ಮಲ್ಲಿಕಾರ್ಜುನ ಕುಂಬಾರ , ಪಾಪರಡ್ಡಿ ಶೇರಿಕಾರ, ಬಾಗಪ್ಪ ಮೋದಿ, ಶ್ರೀಶೈಲ್ ಹೀರೆಮಠ, ಮತ್ತು ರೂಢಾ ಸಂಸ್ಥೆಯ ಸಿಬ್ಬಂಧಿಗಳಾದ ಸಂತೋಷ ಮೂಲಗೆ, ಚಿದಾನಂದ, ಶ್ರವಣಕುಮಾರ, ದೇವಿಂದ್ರ ,ಎನ್.ಆರ್.ಎಲ್.ಎಂ.ತಾಲೂಕು ವ್ಯವಸ್ಥಾಪಕರು ತುಕರಾಂ. ಸಿಬ್ಬಂಧಿಗಳು, ಗ್ರಾಮದ ಕಿರಿಯ ಅಭಿಯಂತರರು ವಿಕಾಸಕುಮಾರ, ಕಲಬುರಗಿ ತಾ.ಪಂ. ಸಿಬ್ಬಂಧಿ ಸೈಯದ್ ಮೌಸಿನ್, ಸಾವಳಗಿ ಗ್ರಾಮ ಪಂಚಾಯತ್ ಸದಸ್ಯರುಗಳು, ಆಶಾ ಮತ್ತು ಅಂಗನವಾಡಿ ಕಾಯೆಕರ್ತೆಯರು ರವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಸಾಯಿ ಕಲಾತಂಡದ ಮುಖ್ಯಸ್ಥರಾದ ಗಂಗೂಬಾಯಿ ಮತ್ತು ಅವರ ತಂಡದಿಂದ ರವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಕೊನೆಯದಾಗಿ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here