ಕಲಬುರಗಿ: ಇತ್ತೀಚಿಗೆ ಕಲಬುರಗಿಯ ಹೊರವಲಯದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಾಗೂ ಒಂದು ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.
ರಮೇಶ(34) ಕೊಲೆ ಮಾಡಿದ ಆರೋಪಿ. ರಮೇಶ ಅಫಜಲಪೂರ ತಾಲೂಕಿನ ರೇವೂರ (ಬಿ) ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ಇತ್ತೀಚಿಗೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸ್ವಾಮಿ ಕೊಲೆ ಪ್ರಕರಣಕ್ಕೆ ನಡೆದಿತ್ತು. ಪ್ರಕರಣದ ಕುರಿತು ಪಿಐ ಸೋಮಲಿಂಗ್ ಕಿರದಳ್ಳಿ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಪಿಎಸ್.ಐ ಚಂದ್ರಶೇಖರ್ ತಿಗಡಿ, ಹೆಡ್ ಕಾನಸ್ಟೇಬಲ್ ಹುಸೆನ್ ಬಾಷಾ ಹರಕಂಚಿ, ಅಂಬಾಜಿ, ಕೇಶವ್, ರಾಜಕುಮಾರ್ ಹಾಗೂ ಶರಣಗೌಡ ಅವರ ತಂಡ ಆರೋಪಿ ರಮೇಶನನ್ನು ವಶಪಡಿಸಿಕೊಂಡ ಕೊಲೆ ಪ್ರಕರಣದ ಜಾಲವನ್ನು ಬೇಧಿಸುವಲಿ ಯಶಸ್ವಿಯಾಗಿದ್ದಾರೆ.
ಪ್ರಕರದ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧೀಕ್ಷಕರಾದ ಸೋಮಲಿಂಗ ಕಿರದಳ್ಳಿ ಸ್ವಾಮಿ ರಮೇಶಗೆ ಒಂದು ಲಕ್ಷ ರೂಪಾಯಿ ಹಣ ಕೂಡಬೇಕಾಗಿತ್ತು ಕೇಳಿದಾಗ ಕೂಡುವುದಿಲ್ಲ ಎಂದು ಹೇಳಿದಾಗ ರಮೇಶ ಕೊಲೆ ಮಾಡಿದ್ದಾನೆಂದು ತನಿಖೆಯಿಂದ ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿ ಆರೋಪಿಯಿಂದ ಒಂದು ಬೈಕ್ ವಶಪಡಿಸಿಕೊಂಡಿರುವುದಾಗಿ ಅವರು ತಿಳಿಸಿದರು.