ಕಲಬುರಗಿ “ಕಲಿಕಾಚೇತರಿಕೆ ಉಪಕ್ರಮದ” ಅನುಷ್ಠಾನಕ್ಕೆ ಎಲ್ಲರ ಧ್ವನಿ ಒಂದಾಗಲಿ: ಡಿಡಿಪಿಐ ಸಕ್ರೆಪ್ಪಗೌಡ

0
68

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಹಾಗೂ ಸ್ಟರ್ ಎಜುಕೇಶನ ಆಂತರಿಕ ಪ್ರೇರಣಾ ಕೇಂದ್ರ ಕಲಬುರಗಿ ಇವರ ಸಹಯೋಗದಲ್ಲಿ ಕಲಿಕಾಚೇತರಿಕೆ ಉಪಕ್ರಮದ ಜಿಲ್ಲಾ ಹಂತದ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಕಲಿಕಾಚೇತರಿಕೆ ನೋಡಲ್ ಅಧಿಕಾರಿ ರಾಜಶೇಖರ ಪ್ರಾಸ್ತಾವಿಕ ಮಾತನಾಡುತ್ತಾ, ಪ್ರಸ್ತುತ ವರ್ಷವನ್ನು ಕಲಿಕಾಚೇತರಿಕೆ ವರ್ಷವೆಂದು ಘೋಷಿಸಿದ್ದು, ನಾವೆಲ್ಲರೂ ಪ್ರಸ್ತುತ ಶಾಲೆಗಳ ಭೇಟಿಯನ್ನು ಅತ್ಯಂತ ನಿಖರತೆಯಿಂದ ಮಾಡಿ ವರದಿ ಮಾಡಬೇಕು. ಪ್ರಸ್ತುತ ಕಲಿಕಾಚೇತರಿಕೆ ಉಪಕ್ರಮವು ಅತ್ಯಂತ ಮಹತ್ವದಾಗಿದ್ದು, ಮಕ್ಕಳ ಎರಡು ವರುಷದ ಕಲಿಕಾ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸಬೇಕು. ಅನುಷ್ಠಾನ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಅನುಸರಿಸಬೇಕಾಗ ಅಗತ್ಯ ವಿಷಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪನಿರ್ದೇಶಕರು(ಅಭಿವೃದ್ಧಿ) ಬಸವರಾಜ ಮಾಯಾಚಾರ್ಯ ಅವರು ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಕಲಿಕಾಚೇತರಿಕೆ ಉಪಕ್ರಮವನ್ನು ಅತ್ಯಂತ ಉತ್ತಮವಾಗಿ ಕ್ಷೇತ್ರಮಟ್ಟದಲ್ಲಿ ಅನುಷ್ಠಾನಕ್ಕೆ ತರಬೇಕು. ಎಲ್ಲರೂ ಕೈಜೋಡಿಸಿ ಕೆಲಸ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಸರಕಾರದ ಶಿಕ್ಷಣದ ಧ್ಯೇಯ ಉದ್ದೇಶ ಈಡೇರಿಸಿ ಮಕ್ಕಳಿಗಾಗಿ ನಾವೆಲ್ಲರೂ ಪ್ರಮಾಣಿಕತೆಯಿಂದ ಶ್ರಮಿಸಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಕಲಿಕಾಚೇತರಿಕೆ ಹೊಸ ಉಪಕ್ರಮವಾದರು ನಾವು ಈಗಾಗಲೇ ಮಕ್ಕಳಿಗೆ ಕೋವಿಡ್ ನಂತಹ ಸ್ಥಿತಿಯಲ್ಲಿ ಕಲಿಸಿದ್ದೇವೆ. ನಾವೆಲ್ಲರೂ ಕಲಿಕಾಚೇತರಿಕೆ ಉಪಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನಗೊಳಿಸಬೇಕು. ಅನುಷ್ಠಾನ ಅಧಿಕಾರಿಗಳು ತರಗತಿಯನ್ನು ವೀಕ್ಷಿಸುವಾಗ ಧ್ವನಿ ಎಲ್ಲರದ್ದು ಒಂದೇ ಆಗಿರಬೇಕು. ನೋಡುವ ದೃಷ್ಟಿಕೋನ ಒಂದಾಗಬೇಕು. ಎಲ್ಲರೂ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಮಾಣಿಕವಾಗಿ ಕೆಲಸಮಾಡಿದರೆ ಬದಲಾವಣೆ ತರಲು ಸಾಧ್ಯವಿದೆ ಎಂದರು.

ಸರಕಾರಿ ಶಿಕ್ಷಕರ ಶಿಕ್ಷಣ ಮಾಹಾವಿದ್ಯಾಲಯದ ಪ್ರಾಂಶುಪಾಲರಾದ ಚಂದ್ರಶೇಖರ ಎಚ್.ಸಿ. ಅವರು ಮಾತನಾಡಿ ಕಲಿಕಾಚೇತರಿಕೆ ಅತ್ಯುತ್ತಮ ಉಪಕ್ರಮವಾಗಿದ್ದು ಎಲ್ಲರೂ ಒಟ್ಟುಗೂಡಿ ಪ್ರಮಾಣಿಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಶಿಕ್ಷಕರು ಪ್ರಮಾಣಿಕತೆಯನ್ನು ಮೈಗೂಡಿಸಿಕೊಂಡು ಮಕ್ಕಳ ಜೊತೆಗೆ ಕಲಿಕಾಚೇತರಿಕೆ ಅನುಷ್ಠಾನಗೊಳಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸ್ಟರ್ ಸಂಸ್ಥೆಯ ವಿಭಾಗಿಯ ಮುಖ್ಯಸ್ಥರಾದ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿ, ಸ್ಟರ್ ಆಂತರಿಕ ಪ್ರೇರಣಾ ಕೇಂದ್ರದ ಸಂಪೂರ್ಣ ಮಾಹಿತಿ ನೀಡುತ್ತಾ, ಶಿಕ್ಷಣ ಇಲಾಖೆಯ ಜೊತೆಗೆ ಕಲಿಕಾಚೇತರಿಕೆ ಅನುಷ್ಠಾನಕ್ಕಾಗಿ ಇಲಾಖೆಯ ಜೊತೆಗೂಡಿ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಿ ಅನುಷ್ಠಾನಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಿಕಾಚೇತರಿಕೆ ಜಿಲ್ಲಾ ಅನುಷ್ಠಾನ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದು, ಇಡಿದಿನ ತಾಲೂಕವಾರು ಪ್ರಗತಿ ಪರಿಶೀಲನೆ ಹಾಗೂ ಕಲಿಕಾಚೇತರಿಕೆ ಅನುಷ್ಠಾನದ ವಿವರವಾದ ತರಬೇತಿ ನಡೆಯಿತು ಒಟ್ಟು 49 ಜಿಲ್ಲಾ ಹಂತದ ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here