ಕಲಬುರಗಿ: ಜಿಲ್ಲೆಯ ತಡವಾಗಿ ಬಿತ್ತನೆ ಮಾಡಿದ ಹೆಸರು ಬೆಳೆಯುವ ಹೊಲಗಳಲ್ಲಿ ಅಲ್ಲಲಿ ಹೆಸರು ಎಲೆ ಚುಕ್ಕಿ ರೋಗ, ಬೇರುಕೊಳೆ ರೋಗ, ಚಿಬ್ಬುರೋಗ, ಬೂದಿರೋಗ ಮತ್ತು ಹಳದಿ ವೈರಸ್ ನಂಜಾಣು ರೋಗ ಕಂಡು ಬಂದಿದೆ.
ಆರಂಭದಲ್ಲಿ ಮಳೆಯ ಕೊರತೆ ಹಾಗೂ ನಂತರ ದಿನಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಿತ್ತನೆವುತಡವಾಗಿದ್ದು, ಇದರ ಪರಿಣಾಮವಾಗಿ ಬದಲಾಗುತ್ತಿರುವ ಹವಾಮಾನದಿಂದ ಹೆಸರು ಬೆಳೆಯಲ್ಲಿ ಕೀಟರೋಗ ಭಾದೆಕಂಡು ಬಂದಿದೆ.
ಟ್ರೈಕೋಡ್ರಮಾ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದ, ಎಲೆಚುಕ್ಕಿರೋಗ, ಚಿಬ್ಬುರೋಗ ಹತೋಟಿಗೆ ಡೈಪೇನ್ ಕನೋಜೋಲ್ ಅಥವಾ ಹೆಕ್ಸ್‍ಕನೋಜೋಲ್ 1 ಎಂ.ಎಲ್ ಪ್ರತಿ ಲೀಟರ್ ನೀರಿಗ ಬೆರೆಸಿ ಸಂಪಡಿಸಬೇಕು ಎಂದು ಕ್ಷೇತ್ರ ಭೇಟಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಜಹೀರ್ ಅಹೆಮದ್, ನಿಕ್ರಾಯೋಜನೆಯ ಸಹ ಸಂಶೋಧಕರಾದ ಡಾ. ವಿಜಯಸಿಂಗ್ ಠಾಕೂರ್, ಕ್ಷೇತ್ರ ವ್ಯವಸ್ಥಾಪಕರಾದ ಮಲ್ಕಣ್ಣಾ ಪಾಟೀಲ್ ಉಪಸ್ಥಿತರಿದ್ದರು.