ಕಲಬುರಗಿ: ಇಂದಿನ ಯುವ ಪೀಳಿಗೆಯಲ್ಲಿ ರಾಷ್ಟ್ರಪ್ರೇಮ, ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎನ್‍ಎಸ್‍ಎಸ್ ಅವಿರತವಾಗಿ ಶ್ರಮವಹಿಸುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾ ಅಧಿಕಾರಿ ಡಾ. ಎನ್.ಜಿ. ಕಣ್ಣೂರ ಹೇಳಿದರು.
ಇಲ್ಲಿನ ಹೊಸ ಜೇವರ್ಗಿ ರಸ್ತೆಯ ಎಂ. ಎನ್. ದೇಸಾಯಿ ಕಲಾ, ವಾಣಿಜ್ಯ ಪದವಿ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಸತ್ಯಸಾಯಿ ಬಾಬಾ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಅಪೌಷ್ಟಿಕ ಮಕ್ಕಳಿಗೆ ಉತ್ಕøಷ್ಟ ಗುಣಮಟ್ಟದ ಆಹಾರ ಒದಗಿಸುತ್ತಿದ್ದು, ಈ ನಿಟ್ಟಿನಲ್ಲಿ ಎನ್‍ಎಸ್‍ಎಸ್ ಸ್ವಯಂ ಸೇವಕರು ಸಹ ಕೈಜೋಡಿಸಬೇಕು ಎಂದ ಅವರು, ಹಳ್ಳಿಗಳಲ್ಲಿ ಶುಚಿತ್ವ, ಸ್ವಚ್ಛತೆ, ನೈರ್ಮಲಿಕರಣ, ಗ್ರಾಮ ಸಬಲೀಕರಣಕ್ಕಾಗಿ ಹತ್ತಾರು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಶಹಾಪುರಿನ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೀರಯ್ಯ ಎಂ. ಹಿರೇಮಠ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಕನಸಿನ ಕೂಸು ಎನ್‍ಎಸ್‍ಎಸ್ ಆಗಿದ್ದು, ಎನ್‍ಎಸ್‍ಎಸ್ ಹುಟ್ಟು ಬೆಳವಣಿಗೆ ಬಗ್ಗೆ ವಿವರಣೆ ನೀಡಿದರು.
ಪತ್ರಕರ್ತ ಭೀಮಾಶಂಕರ ಫಿರೋಜಾಬಾದ ಮಾತನಾಡಿ, ಎನ್‍ಎಸ್‍ಎಸ್ ರಾಷ್ಟ್ರಪ್ರೇಮ, ಸೇವಾ ಮನೋಭಾವ ಬೆಳೆಸಿದರೆ, ಎನ್‍ಸಿಸಿ ರಾಷ್ಟ್ರರಕ್ಷಣೆ ಮಾಡುವುದಾಗಿದೆ. ಇನ್ನು ವಿದ್ಯಾರ್ಥಿಗಳು ವ್ಯಾಸಂಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆರಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಅಧ್ಯಕ್ಷ ಸಂದೀಪ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಆನಂದತೀರ್ಥ ಜೋಶಿ ನಿರೂಪಣೆ ಮಾಡಿದರು. ಪ್ರಿಯಾಂಕಾ ಕರಣಿಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಪಟ್ಟಣಕರ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ ಗೋಣಿ, ಅನುರಾಧಾ ಮದ್ರಿ, ಅಮರ ಹಾಗರಗಿ, ಸತೀಶಕುಮಾರ, ಅಶ್ವಿನಿ ಪಾಟೀಲ್, ಆಡಳಿತಾಧಿಕಾರಿ ರಾಧಿಕಾ ಗುತ್ತೇದಾರ್, ಗ್ರಂಥಪಾಲಕ ಅನ್ನಪೂರ್ಣ ಪಸಾರ, ಎನ್‍ಎಸ್‍ಎಸ್ ಅಧಿಕಾರಿಗಳಾದ ಮಂಜುನಾಥ ಬನ್ನೂರ್, ಪ್ರಜ್ಞಾ, ಶೃತಿ, ಅಂಬಿಕಾ, ಮಾಯಾ, ಕಾಶಿಬಾಯಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಜರಿದ್ದರು.