ಭೋವಿ ಸಮಾಜದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು: ಮತ್ತಿಮಡು

0
380
ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಂಚ ಮುಕ್ತ ಮಾಡಲು ಪಣ ತೊಟ್ಟಿರುವ ಹಿನ್ನೆಲೆಯಲ್ಲಿ ಈ ನಾಡು ಭ್ರಷ್ಟಾಚಾರ ರಹಿತ ಮಾಡುವಲ್ಲಿ ನಾವು ಅವರಿಗೆ ಬೆಂಬಲಿಸುತ್ತೆವೆ- ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಬೋವಿ ಗುರು ಪೀಠ ಚಿತ್ರದುರ್ಗ.

ಶಹಾಬಾದ: ಭೋವಿ ಸಮಾಜದ ಸಮುದಾಯ ಭವನಕ್ಕೆ ಸುಮಾರು 50 ಲಕ್ಷ ರೂ.ಅನುದಾನ ಒದಗಿಸಲಾಗಿದ್ದು, ಸಮಾಜದ ಬೇಡಿಕೆಯಂತೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುತ್ತದೆ ಹಾಗೂ ಸಿದ್ದರಾಮೇಶ್ವರ ಮೂರ್ತಿಗಾಗಿ ವ್ಯಯಕ್ತಿಕ ಹಣ ನೀಡುತ್ತೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಭರವಸೆ ನೀಡಿದರು.

ಅವರು ಸೋಮವಾರ ನಗರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಭೋವಿ ಸಮಾಜದ ವತಿಯಿಂದ ಆಯೋಜಿಸಲಾದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ನೆಲೆಸಿರುವ ಭೋವಿ ಸಮಾಜಕ್ಕೆ ಸಾಕಷ್ಟು ಅನುದಾನ ನೀಡಿದ್ದೆನೆ.ಅಲ್ಲದೇ ಶಹಾಬಾದ ಭೋವಿ ಸಮಾಜದ ರುದ್ರಭೂಮಿಗಾಗ್ಷಿಮೃತ ನಗರೋತ್ಥಾನದಲ್ಲಿ 30 ಲಕ್ಷ ಅನುದಾನ ಇಡಲಾಗಿದೆ. ನಗರದಲ್ಲಿಯೇ ದೊಡ್ಡದಾದ ಭೋವಿ ಸಮಾಜದ ಜನರು ಹಗಲಿರುಳು ದುಡಿಯುವಂತವರು. ಸಮಾಜದ ಯಾವುದೇ ಬೇಡಿಕೆಗಳಿದ್ದರೂ ಅದನ್ನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೆನೆ. ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಾಸಕನಾಗಿರುವ ನಾನು ಕೂಡ ವೇದಿಕೆ ಮೇಲಿದ್ದೆವೆ ಎಂದರೆ ಅದು ನಿಮ್ಮೆಲ್ಲರ ಆಶೀರ್ವಾದದಿಂದ ಎಂದು ನಾನೆಂದು ಮರೆಯಲಾರೆನು ಎಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಚಿತ್ರದುರ್ಗ ಬೋವಿ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಸಮಾಜದ ಜನರು ನಿಮ್ಮ ಮೇಲೆ ವಿಶ್ವಾಸವಿಟ್ಟು ಭೋವಿ ಸಮಾಜದ ಪದಾಧಿಕಾರಿಗಳಾಗಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ.ಅವರ ವಿಶ್ವಾಸಕ್ಕೆ ತಕ್ಕಂತೆ ನಡೆಯುವುದು ನಿಮ್ಮೆಲ್ಲರ ಕರ್ತವ್ಯ.ಅಲ್ಲದೇ ಸಮಾಜದ ಅಧ್ಯಕ್ಷ ಹಾಗೂ ಇನ್ನೀತರ ಹುದ್ದೆ ಪಡೆದವರು ಸಮಾಜದ ಜನರ ನೋವು ನಲಿವುಗಳಿಗೆ ಸ್ಪಂದಿಸುವಂತವರಾಗಬೇಕು.

ತಕ್ಕಂತೆ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವವರೇ ನಿಜವಾಗಿಯೂ ಜನನಾಯಕರಾಗುತ್ತಾರೆ ಎಂದು ಹೇಳಿದರಲ್ಲದೇ, ಸ್ಥಳೀಯ ಶಾಸಕ ಬಸವರಾಜ ಮತ್ತಿಮಡು ಅವರು ಭೋವಿ ಸಮಾಜಕ್ಕೆ ಅನುದಾನ ಒದಗಿಸಿದ್ದಾರೆ.ಅಲ್ಲದೇ ವ್ಯಯಕ್ತಿಕವಾಗಿ ಅನುದಾನ ಒದಗಿಸುವುದು ಬೇಡ.ನಮಗಾಗಿ ಇರುವ ಎಸ್‍ಸಿಪಿ ಟಿಎಸ್‍ಪಿ ಅನುದಾನ ಖರ್ಚು ಮಾಡದೇ ಕೊಳೆಯುತ್ತಿದೆ.ಆ ಅನುದಾನವನ್ನು ನಮ್ಮ ಸಮಾಜಕ್ಕೆ ಉಪಯೋಗಿಸಿದರೇ ಸಾಕು.ಮತ್ತೇನು ಬೇಕಾಗಿಲ್ಲ.ಅದಕ್ಕಾಗಿ ಒಂದು ನಿಯೋಗದ ಜತೆಗೆ ಮುಖ್ಯಂತ್ರಿಗಳಿಗೆ ಬೇಟಿ ಮಾಡಿ ಅನುದಾನ ಒದಗಿಸಲು ಮನವಿ ಸಲ್ಲಿಸೋಣ ಎಂದರು.

ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿದರು. ಭೋವಿ ಸಮಾಜದ ಮುಖಂಡರಾದ ನಿಂಗಣ್ಣ ದೇವಕರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಶೀದ ಮರ್ಚಂಟ, ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ ರಾಜಾ, ಭೋವಿ ಸಮಾಜದ ಅಧ್ಯಕ್ಷ ಕಲ್ಲೋಳ್ಳಿ ಕುಸಾಳೆ, ಪ್ರಧಾನ ಕಾರ್ಯದರ್ಶಿ ರಮೇಶ ಪವಾರ, ಅಂಬುಬಾಯಿ ದೇಸಾಯಿ, ಮಹ್ಮದ್ ಮತೀನ್ ವೇದಿಕೆ ಮೇಲೆ ಇದ್ದರು.

ಇದೇ ಸಂದರ್ಭದಲ್ಲಿ ತಂದೆ-ತಾಯಿ ಇಲ್ಲದ ತಬ್ಬಲಿ ಕು.ಅಶ್ವಿನಿಗೆ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಓದಿಸಿದ್ದು, ಅವಳು ಇಂಜಿನಿಯರಿಂದ ಮುಗಿಸಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉನ್ನತ ವ್ಯಾಸಂಗ ಪಡೆಯಲು ಲಂಡನ್‍ಗೆ ಹೋಗುತ್ತಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.

ಕನಕಪ್ಪ ದಂಡಗುಲಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ದಂಡಗುಲಕರ ನಿರೂಪಿಸಿದರು, ಸಿದ್ರಾಮ ಕುಸಾಳೆ ಸ್ವಾಗತಿಸಿದರು, ರಾಜೇಶ ದಂಡಗುಲಕರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here