ರೈತರ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

0
17
  • ಕೇಂದ್ರ ರಾಜ್ಯ ಸರಕಾರಗಳು ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿವೆ: ಹಾಲಬಾವಿ

ಸುರಪುರ: ರಾಜ್ಯದಲ್ಲಿನ ರೈತರ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀಮಹರ್ಷಿ ವಾಲ್ಮೀಕಿ ವೃತ್ತದಿಂದ ದರಬಾರ ರಸ್ತೆ,ಮಹಾತ್ಮ ಗಾಂಧಿ ವೃತ್ತ,ಡಾ:ಬಿ.ಆರ್ ಅಂಬೇಡ್ಕರ್ ವೃತ್ತ,ಬಸ್ ನಿಲ್ದಾಣ ಮಾರ್ಗವಾಗಿ ತಹಸೀಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಹಸೀಲ್ದಾರ್ ಕಚೇರಿ ಮುಂದೆ ನಡೆದ ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ,ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ಮತ್ತು ಇಲ್ಲಿಯ ರಾಜ್ಯ ಸರಕಾರ ಎರಡೂ ಸರಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂಧಿಸದೆ ರೈತರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿವೆ ಎಂದರು.

Contact Your\'s Advertisement; 9902492681

ಕೇಂದ್ರ ಸರಕಾರ ರೈತರ ವಿರೋಧಿ ಕೃಷಿ ಮಸೂದೆಗಳನ್ನು ರದ್ದುಗೊಳಿಸಿದರು ರಾಜ್ಯ ಸರಕಾರ ಅವುಗಳನ್ನು ಹಿಂಪಡೆಯುತ್ತಿಲ್ಲ,ರೈತರು ಸಂಕಷ್ಟದಲ್ಲಿರು ಕಾರಣದಿಂದ ಬೆಳೆ ವಿಮೆಯ ಹಣವನ್ನು ವಿಮಾ ಕಂಪನಿಗಳಿಗೆ ಸರಕಾರವೇ ಭರಿಸಬೇಕು,ನಿರಂತರ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು,ರೈತರು ಬ್ಯಾಂಕ್ ಸಾಲ ರಾಜೀ ಸಂಧಾನದ ಮೂಲಕ ತಿರುವಳಿ ಮಾಡಿದ್ದು ಅಂತಹ ರೈತರಿಗೆ ಮರು ಸಾಲ ನೀಡಬೇಕು,ಸರಕಾರಗಳು ಅಭೀವೃಧ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಸ್ವಾಧೀನ ಕೈಬಿಡಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು.

ನಂತರ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ತಾಲೂಕಾಧ್ಯಕ್ಷ ಹಣಮಂತ್ರಾಯ ಮಡಿವಾಳ,ಮುಖಂಡರಾದ ತಿಪ್ಪಣ್ಣ ಜಂಪಾ,ವೆಂಕಟೇಶ ಕುಪಗಲ್,ಭೀಮರಾಯ ಒಕ್ಕಲಿಗ ಮಾಲಗತ್ತಿ,ರತ್ನಪ್ಪ ಪೂಜಾರಿ,ತಿಪ್ಪಣ್ಣ ಇಟ್ಟಂಗಿ,ರಾಘು ಕುಪಗಲ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here