ಹಗರಿಬೊಮ್ಮನಹಳ್ಳಿ: ಈ ಹಿಂದೆ ಮಾಧ್ಯಮ ವಕ್ತಾರರಾಗಿ ಕೆಲಸ ಮಾಡುತ್ತಿದ್ದ ಪತ್ರೇಶ್ ಹಿರೇಮಠ್ ಇವರನ್ನು ಪಕ್ಷದಲ್ಲಿ ಸಕ್ರಿಯ ಚಟುವಟಿಕೆಗಳನ್ನು ಗಮನಿಸಿ ಮತ್ತು ಗುರುತಿಸಿ ಮಾಧ್ಯಮ ವಕ್ತಾರ ಹುದ್ದೆಯಿಂದ ರಾಜ್ಯ ಕಾಂಗ್ರೆಸ್ ವಕ್ತಾರರಾಗಿ ನೇಮಕ ಮಾಡಿದ್ದಾರೆ.
ಕಾಂಗ್ರೆಸ್ ನ 27 ನಾಯಕರನ್ನು ಪಕ್ಷ ಮುಖ್ಯ ವಕ್ತಾರರಾಗಿ, 30 ಜನರನ್ನು ವಕ್ತಾರರಾಗಿ ಮತ್ತು 8 ಜನರನ್ನು ಉಪವಕ್ತಾರರಾಗಿ ಕೆಪಿಸಿಸಿ ನೇಮಕ ಮಾಡಿದೆ. ಮಾಧ್ಯಮ ವಕ್ತಾರರಾಗಿದ್ದ ಪತ್ರೇಶ್ ಹಿರೇಮಠ್ ಅವರು ರಾಜ್ಯ ಕಾಂಗ್ರೆಸ್ ವಕ್ತಾರರಾಗಿ ನೇಮಕವಾಗಿದ್ದಾರೆ.