ಕಲಬುರಗಿ: ಕನ್ನಡ ಭಾಷೆ ನಮ್ಮ ಉಸಿರು ನಾವೆಲ್ಲ ಕನ್ನಡಿಗರು ಯಾವುದೇ ಭಾಷೆ ಕಲಿತರು ಕೂಡಾ ಕನ್ನಡವನ್ನೇ ನಾವು ಬಳಸಬೇಕು. ಜ್ಞಾನದ ದೃಷ್ಟಿಯಿಂದ ಹಲವಾರು ಭಾಷೆ ಕಲಿತರೂ ಅಡ್ಡಿಯಿಲ್ಲ ಕನ್ನಡ ಮಾತ್ರ ಮರೆಯಬಾರದು. ನಮ್ಮ ಭಾಷೆ, ನಮ್ಮ ಹೆಮ್ಮೆ, ನಮ್ಮ ತಾಯ್ನುಡಿಯನ್ನು ಯಾವಾಗಲೂ ಗೌರವಿಸಬೇಕು ಮತ್ತು ಸಂಭ್ರಮಿಸಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಸಂಸ್ಕøತಿ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಭಾಷೆ ತನ್ನದೇ ಆದ ಮಿಶ್ರ ಸಂಸ್ಕøತಿ ಹೊಂದಿರುವುದರ ಜೊತೆಗೆ ಗಟ್ಟಿ ಭಾಷೆಯಾಗಿದೆ ಎಂದು ತಿಳಿಸಿದರು.
ಆಶಯ ನುಡಿಗಳನ್ನಾಡಿದ ಪೆÇ್ರ. ವ್ಹಿ.ಜಿ. ಪೂಜಾರ, ‘ಆಯಾ ಪ್ರದೇಶದ ಸಂಸ್ಕøತಿಯನ್ನು ಹಿಡಿದಿಡುವ ಕನ್ನಡಿಯೇ ಭಾµ.É ಆಗಾಗ ಜನಪದ ಜನಶಕ್ತಿ ತುಂಬಿ ಭಾಷೆಯನ್ನು ಉಳಿಸಿ ಬೆಳೆಸುತ್ತಿದೆ’. ಸಂಸ್ಕøತಿ ಎಂಬುದು ಹÇವಿನ ಪರಿಮಳವಿದ್ದಂತೆ ಹಾಗೆಯೇ. ಭಾಷೆ ಕೂಡ ಭಾಷೆ ಅನಿವಾರ್ಯತೆಯ ತಾಯಿ. ‘ಬಾಯಿಯೇ ಭಾಷೆಯ ತಾಯಿ’ ಎಂದು ಹೇಳಬಹÅದು. ಭಾಷೆ ಪರಸ್ಪರರ ನಡುವೆ ನಡೆಯುವ ಮಾಧ್ಯಮ. ಸಂವೇದನೆಯನ್ನು ಮೂಡಿಸುತ್ತದೆ. ಸಂಪರ್ಕ ಸೇತುವೆ ಯಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ. ಕಲ್ಯಾಣ ಕರ್ನಾಟಕದ ಕನ್ನಡ ಭಾಷೆಯು ಉರ್ದು, ಪರ್ಷಿಯನ್, ಹಿಂದಿ, ಮರಾಠಿ ಭಾಷೆಯ ಪ್ರಭಾವಕ್ಕೊಳಗಾಗಿತ್ತು. ಬೇರೆ ಭಾಷೆಯ ಶಬ್ದಗಳೊಂದಿಗೆ ಮಿಶ್ರಣಗೊಳ್ಳುವಂತದ್ದೆ ಭಾಷೆಯ ಜೀವಂತಿಕೆಯ ಲಕ್ಷಣ. ಭಾಷೆ ಒಳ ಪ್ರಭೇದದೊಂದಿಗೆ ಜಿವಂತಿಕೆಯನ್ನು ಮೆರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ. ಎಚ್.ಟಿ. ಪೆÇೀತೆ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಷೆ, ಸಂಸ್ಕøತಿ ವೈವಿದ್ಯತೆಯಿದೆ. ಪ್ರಾಚೀನ ಕಾಲದಿಂದಲೂ ಈ ಭಾಗದಲ್ಲಿ ಅತ್ಯಂತ ಶಕ್ತಿಯುತವಾಗಿ ವೈಶಿಷ್ಟ್ಯ ಪೂರ್ಣವಾಗಿ ಬಳಕೆಗೊಳ್ಳುತ್ತಿದೆ. ಇಡೀ ಜಗತ್ತಿನ ಗಮನ ಸೆಳೆದ ಪ್ರದೇಶ ಇದಾಗಿದೆ. ವಿಶಿಷ್ಟ ಚಿಂತನೆಗಳನ್ನು ಬಿತ್ತಿದ ಬಹುತ್ವದ ನಾಡು. ಕನ್ನಡವನ್ನು ಅನ್ನದ ಭಾಷೆಯಾಗಿ ಬೇರೆ ಭಾಷೆ ಕಲಿಯಬೇಕು. ಶುದ್ಧವಾಗಿ ಬರೆಯುವ ಓದುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಣ್ಣ ನೀರಾವರೆಇ ಇಲಾಖೆಯ ಅಭಿಯಂತರ ಅಧೀಕ್ಷಕ ಡಾ. ಸುರೇಶ ಎಲ್. ಶರ್ಮಾ ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿ ವಂದಿಸಿದರು.
ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಡಾ. ಶ್ರೀಶೈಲ ನಾಗರಾಳ, ಡಾ. ಗವಿಸಿದ್ಧಪ್ಪ ಪಾಟೀಲ, ಡಾ. ದಸ್ತಗಿರಿಸಾಬ್ ದಿನ್ನಿ, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಕನ್ನಡ ಭಾಷೆ ಸಂಸ್ಕøತಿಯ ಮೇಲೆ ಪ್ರಬಂಧ ಮಂಡಿಸಿದರು. ಡಾ. ಆನಂದ ಸಿದ್ದಾಮಣಿ, ಬಿ.ಎಚ್. ನಿರಗುಡಿ, ಗೋಪಾಲ ನಾಟಿಕರ್, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಡಾ. ಗಾಂಧೀಜಿ ಮೊಳಕೇರಿ ಹಾಗೂ ಫರವಿನ ಸುಲ್ತಾನಾ ಉಪಸ್ತಿತರಿದ್ದು ಸಂವಾದ ನಡೆಸಿಕೊಟ್ಟರು.