ಕರ್ನಾಟಕ ಸರಕಾರದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ನಾಗರಿಕ ಸತ್ಕಾರ’

0
7
  • ಭಾರತದ ಅರ್ಥವ್ಯವಸ್ಥೆಯ ವಿಕಸನದಲ್ಲಿ ಕರ್ನಾಟಕದ ಪಾತ್ರ ಪ್ರಮುಖ:ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಂಗಳೂರು: ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಕರ್ನಾಟಕ ಸರಕಾರದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ವಿಧಾನಸೌಧದ ಬ್ಯಾಂಕ್ವೆಂಟ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಮಸ್ತ 6ಕೋಟಿ ಕನ್ನಡಿಗರ ಹೃದಯ ವೈಶಾಲ್ಯತೆಯ ಸಂಕೇತವಾಗಿ ನಾಗರಿಕ ಸತ್ಕಾರ ನೀಡಿ ಗೌರವಿಸಿ ಸನ್ಮಾನಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ ಮಲ್ಕಾಪುರೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ,ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾದ ಅಲೋಕ್ ಅರಾದೆ ಅವರು ವೇದಿಕೆ ಮೇಲಿದ್ದರು.

ನಾಗರಿಕ ಸತ್ಕಾರ ಸ್ವೀಕರಿಸಿದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ತಾಯಿ ಭುವನೇಶ್ವರಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿ ತಿಳಿಸುತ್ತಲೇ ತಮ್ಮ ಭಾಷಣ ಆರಂಭಿಸಿದರು. ಕರ್ನಾಟಕದ ಪರಂಪರೆ, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ,ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಕನ್ನಡಿಗರ ಪ್ರೀತಿ,ಹೃದಯವೈಶಾಲ್ಯತೆ ಮತ್ತು ತೋರಿದ ಅಭಿಮಾನ ಮತ್ತು ಸತ್ಕಾರ,ಕನ್ನಡಿಗರ ಮೃಧುಸ್ವಭಾವ,ಶಾಂತಿಪ್ರಿಯತೆ,ಉದಾರಮನೋಭಾವನೆಯನ್ನು ತಮ್ಮ ಭಾಷಣದಲ್ಲಿ ಪ್ರಶಂಸಿಸಿದರು. ಕರ್ನಾಟಕ ಹಾಗೂ ಬೆಂಗಳೂರು ನಗರದ ಮೇಲಿರುವ ತಮ್ಮ ಪ್ರೀತಿ,ಅಭಿಮಾನವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಕರ್ನಾಟಕ ಇಡೀ ದೇಶದಲ್ಲಿಯೇ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. ಇಂದು ನಾನು ದೇಶದ ಆರೋಗ್ಯಕ್ಷೇತ್ರ ಹಾಗೂ ರಕ್ಷಣಾ ಕ್ಷೇತ್ರದ ಅತ್ಯಂತ ಮೈಲುಗಲ್ಲಾಗಿರುವ ಕ್ರಯೋಜಿನಿಕ್ ಎಂಜಿನ್ ಮತ್ತು ವೈರಾಲಜಿ ಸಂಶೋಧನಾ ದಕ್ಷಿಣ ವಲಯ ಕೇಂದ್ರವನ್ನು ಹಾಗೂ ಧಾರವಾಡದಲ್ಲಿ ಐಐಐಟಿ ನೂತನ ಕ್ಯಾಂಪಸ್ ಉದ್ಘಾಟಿಸಿರುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಪ್ರಮುಖ ಕೊಡುಗೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಿಗುತ್ತಿದೆ. ಜೈವಿಕ ತಂತ್ರಜ್ಞಾನ, ಸಂಶೋಧನೆ,ಅಭಿವೃದ್ಧಿ,ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ. ಭಾರತದ ಅರ್ಥವ್ಯವಸ್ಥೆಯ ವಿಕಸನದಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಹಲವು ವರ್ಷಗಳಿಂದ ಎಫ್‍ಡಿಐ(ವಿದೇಶಿ ನೇರ ಹೂಡಿಕೆ)ನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಇಲ್ಲಿನ ದೂರದೃಷ್ಟಿ ರಾಜಕೀಯ ನಾಯಕರು,ಉದ್ಯಮಿಗಳು ನೂತನ ಆವಿಷ್ಕಾರಗಳು,ಸ್ಟಾರ್ಟ್‍ಅಪ್ ಸೇರಿದಂತೆ ಉದ್ಯಮ ವಲಯಕ್ಕೆ ಅತ್ಯಂತ ಸ್ನೇಹಮಯ ವಾತಾವರಣ ನಿರ್ಮಿಸುವ ಮೂಲಕ ಮಾದರಿಯಾಗುವಂತೆ ಮಾಡಿದ್ದಾರೆ ಎಂದರು.

ಭಾರತ ದೇಶವು 5 ಬಿಲಿಯನ್ ಡಾಲರ್ ಅರ್ಥಿಕಾಭಿವೃದ್ಧಿ ಸಾಧಿಸುವಲ್ಲಿ ಕರ್ನಾಟಕ ಕೊಡುಗೆ ನೀಡಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಕರ್ನಾಟಕ ಪ್ರಮುಖ ಕೊಡುಗೆಗಳಿಂದ ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಸಂದರ್ಭವಾದ 2047ರಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ,ಇದೊಂದು ಅಪರೂಪದ ಕಾರ್ಯಕ್ರಮ. ಕರ್ನಾಟಕ ರಾಜ್ಯದ ಹಾಗೂ ವಿಧಾನಸಭಾ ಇತಿಹಾಸದಲ್ಲಿ ರಾಷ್ಟ್ರಪತಿಗಳ ನಾಗರಿಕ ಸತ್ಕಾರ ನಡೆದಿರುವುದಿಲ್ಲ ಎನ್ನುವುದು ನನ್ನ ಭಾವನೆ ಎಂದರು.

ರಾಷ್ಟ್ರಪತಿಗಳ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ಕೊಟ್ಟಾಗ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾದ ನಂತರ ನನ್ನ ಕರ್ನಾಟಕ ರಾಜ್ಯಕ್ಕೆ ಮೊದಲ ಭೇಟಿ ನೀಡುವುದಾಗಿ ತಿಳಿಸಿದ್ದರು;ಅದರಂತೆ ಅವರು ಭೇಟಿ ನೀಡಿರುವುದಕ್ಕೆ ಮುಖ್ಯಮಂತ್ರಿಗಳು ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ದಸರಾ ಹಬ್ಬಕ್ಕೆ ಬೆಳಗ್ಗೆ ಆಮಂತ್ರಿಸಿದಾಗ ಸಂಜೆಯೇ ಆಗಮಿಸುವುದಕ್ಕೆ ಒಪ್ಪಿಗೆ ನೀಡಿದರು;ಇದನ್ನೆಲ್ಲ ನೋಡಿದರೇ ಕರ್ನಾಟಕದ ಬಗ್ಗೆ ಅವರಿಗಿರುವ ಪ್ರೀತಿ,ಅಭಿಮಾನ ಎತ್ತಿ ತೋರಿಸುತ್ತದೆ ಎಂದರು.

*ಮುರ್ಮು ರಾಷ್ಟ್ರಪತಿಯಾಗಿರುವುದು ಪ್ರಜಾಪ್ರಭುತ್ವದ ವೈಶಿಷ್ಟ್ಯ: ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಾಷ್ಟ್ರದ ಉನ್ನತ ಹುದ್ದೆಗೇರಿರುವುದು ಪ್ರಜಾಪ್ರಭುತ್ವದ ವೈಶಿಷ್ಟ್ಯ ಎಂದು ಬಣ್ಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿಗಳಾಗುವ ಮೂಲಕ ದ್ರೌಪದಿ ಮುರ್ಮು ಅವರು ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳಾದರೂ ಅವರು ಎಳ್ಳುಕಾಳಷ್ಟು ಬದಲಾಗಿಲ್ಲ;ಸರಳತೆ,ಬದ್ಧತೆ ಮತ್ತು ಎಲ್ಲ ವಿಚಾರಗಳು ತಿಳಿದುಕೊಂಡರೂ ಸಹ ಪ್ರದರ್ಶಿಸದೇ ಇರುವ ಅವರ ಮುಗ್ದತೆ,ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವ ಅವರ ಗುಣ ಅತ್ಯಂತ ಮಾದರಿ ಎಂದು ಹೇಳಿದ ಅವರು ಮಾನವೀಯತೆಯ ಸ್ವರೂಪಿಯಾಗಿ ನಮ್ಮ ಕಣ್ಮುಂದೆ ರಾಷ್ಟ್ರಪತಿಗಳು ನಿಂತಿದ್ದಾರೆ ಎಂದು ಬಣ್ಣಿಸಿದರು.

*ವಿನಮ್ರತೆ, ಸರಳತೆ, ಸಜ್ಜನಿಕೆಯ ಪ್ರತೀಕ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಜೀವನವನ್ನು ಸುಧಾರಿಸುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವ ಸೇವೆಯಲ್ಲಿ ನಿರಂತರವಾಗಿ ತೊಡಗಿರುವ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಸಹೃದಯ, ಸರಳತೆ, ವಿನಮ್ರತೆಯ ಪ್ರತೀಕವಾಗಿದ್ದಾರೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಸಂತಾಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರ ಆರಂಭಿಕ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ತುಂಬಿತ್ತು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯ ಶಾಲೆಯಿಂದ ಮುಗಿಸಿದ ನಂತರ, ಭುವನೇಶ್ವರದ ರಮಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕಲಾ ಪದವಿಯನ್ನು ಪಡೆದರು. ಇವರ ಗ್ರಾಮದಲ್ಲಿ ಹಳ್ಳಿಯಿಂದ ಕಾಲೇಜಿಗೆ ಹೋದ ಮೊದಲ ಮಹಿಳೆಯಾಗಿದ್ದಾರೆ ಎಂದರು.

ರಾಷ್ಟ್ರಪತಿಗಳು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ ರಾಜ್ಯಪಾಲರು, 1979 ರಿಂದ 1983 ರವರೆಗೆ ಒಡಿಶಾ ಸರ್ಕಾರದ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದ ಅವರು,  1994 ರಿಂದ 1997 ರವರೆಗೆ ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು ಎಂದು ಮಾಹಿತಿ ನೀಡಿದರು.

1997ರಲ್ಲಿ ಅವರು ರಾಯರಂಗಪುರ ನಗರ ಪಂಚಾಯತ್ನ ಕೌನ್ಸಿಲರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2000 ರಿಂದ 2009 ರವರೆಗೆ, ಎರಡು ಅವಧಿಗೆ ಒಡಿಶಾ ವಿಧಾನಸಭೆಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಅವರು 6ನೇ ಮಾರ್ಚ್, 2000 ರಿಂದ 6ನೇ ಆಗಸ್ಟ್, 2002 ಮತ್ತು 6ನೇ ಆಗಸ್ಟ್, 2002 ರಿಂದ 16ನೇ ಮೇ, 2004 ರವರೆಗೆ ಒಡಿಶಾ ಸರ್ಕಾರದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಸೇವೆ ಸಲ್ಲಿಸಿದರು. ಮೀನುಗಾರಿಕೆ ಮತ್ತು ಪಶು ಸಂಪನ್ಮೂಲಗಳ ಇಲಾಖೆ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಸೇವೆ ಸಲ್ಲಿಸಿದ್ದಾರೆ ಎರಡೂ ಜವಾಬ್ದಾರಿಗಳ ನಿರ್ವಹಣೆಯಲ್ಲಿ, ದ್ರೌಪದಿ ಮುರ್ಮು ಅವರು ಅನೇಕ ವಿನೂತನ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲು ಹರ್ಷಿಸುತ್ತೇನೆ ಎಂದರು.

ಆಳವಾದ ಆಡಳಿತದ ಅನುಭವ ಮತ್ತು ಬುಡಕಟ್ಟು ಸಮಾಜದ ಉನ್ನತಿಗಾಗಿ ಮಾಡಿದ ಪ್ರಯತ್ನಗಳ ಫಲ ಹಾಗೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸಮಾಜದಲ್ಲಿ ವಿಶೇಷ ಗುರುತನ್ನು ಹೊಂದಿದ್ದಾರೆ. 2007ರಲ್ಲಿ ಒಡಿಶಾ ವಿಧಾನಸಭೆಯಿಂದ ಶಾಸಕರಾಗಿ ಸಲ್ಲಿಸಿದ ವಿಶಿಷ್ಟ ಸೇವೆಗಳಿಗಾಗಿ “ಪಂಡಿತ್ ನೀಲಕಂಠ ದಾಸ್ -ಅತ್ಯುತ್ತಮ ಶಾಸಕ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ ಎಂದರು.

2015 ಮೇ 18 ರಂದು ದ್ರೌಪದಿ ಮುರ್ಮು ಅವರು ಜಾಖರ್ಂಡ್‍ನ ರಾಜ್ಯಪಾಲರಾಗಿ ನೇಮಕಗೊಂಡು ರಾಜ್ಯದ ಮೊದಲ ಮಹಿಳಾ ಬುಡಕಟ್ಟು ಜನಾಂಗದ ರಾಜ್ಯಪಾಲರಾಗಿದ್ದರು. ಈ ಮೂಲಕ ಬುಡಕಟ್ಟು ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಸಂವಿಧಾನದ ಘನತೆಯನ್ನು ಎತ್ತಿಹಿಡಿಯಲು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ಎತ್ತಿ ಹಿಡಿದಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ ಎಂದರು.

ಒಡಿಶಾದ ಬುಡಕಟ್ಟು ಸಾಮಾಜಿಕ-ಶೈಕ್ಷಣಿಕ ಮತ್ತು ಸಾಂಸ್ಕøತಿಕ ವಲಯದ ಅನೇಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದರು. ಮುರ್ಮು ಅವರು ಸ್ವಯಂ ಅಧ್ಯಯನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು ಮತ್ತು ಆಧ್ಯಾತ್ಮಿಕತೆಯಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ರಾಜಕೀಯ ಬಹಳ ಕೆಟ್ಟದ್ದು, ಮಹಿಳೆಯರು ಅದರಿಂದ ದೂರವಿರಬೇಕು ಎಂದು ಹಳ್ಳಿಯಲ್ಲಿ ಹೇಳುತ್ತಿದ್ದ ಆ ಹಳ್ಳಿಯ ಮಹಿಳೆ ಇಂದು ದೇಶದ “ರಾಷ್ಟ್ರಪತಿ” ಎಂದು ಅವರು ಹೇಳಿದರು.

ಪುತ್ರರು ಮತ್ತು ಪತಿ ಇಬ್ಬರನ್ನೂ ಕಳೆದುಕೊಂಡರೂ, ಎದೆ ಗುಂದದೆ ಕಷ್ಟದ ಅವಧಿಯಲ್ಲಿ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮಾಜ ಸೇವೆಗಾಗಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅವರ ಈ ಪ್ರಯತ್ನ ಇಂದು ಹಳ್ಳಿಗಳಿಂದ ಹೆಚ್ಚಾಗಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದು, ಶಾಲೆಗೆ ಹೋಗುವವರ ಪ್ರಮಾಣ ಹೆಚ್ಚಾಗಿದೆ. ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರು, ಮುರ್ಮು ಅವರ ಸರಳತೆ, ಔದಾರ್ಯ, ದಿನಚರಿಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಪ್ರತಿನಿತ್ಯದಂತೆ ಅವರು ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಜ್ಯಪಾಲರು ಶ್ಲಾಘಿಸಿದರು.

ಇಂತಹ ಸರಳತೆಯ ಪ್ರತೀಕ ರಾಷ್ಟ್ರಪತಿಗಳು ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವುದು ಬಹಳ ಸಂತಸವಾಗಿದೆ ಎಂದು ಹೇಳಿದ ರಾಜ್ಯಪಾಲರು ಅವರ ಸೇವೆ ದೇಶಕ್ಕಾಗಿ ನಿರಂತರವಾಗಿರಲಿ ಎಂದು ಆಶೀಸುತ್ತೇನೆ ಎಂದರು.

ಕರ್ನಾಟಕ ಸರ್ಕಾರವು ಇಂದು ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಗೌರವಾರ್ಥವಾಗಿ ಆಯೋಜಿಸಿದ್ದ ನಾಗರಿಕ ಸತ್ಕಾರ ಕಾರ್ಯಕ್ರಮದಲ್ಲಿ ನಾಗರಿಕರ ಪರವಾಗಿ ಸಾಧಕರಾದ ಇಸ್ಕಾನ್ ಮುಖ್ಯಸ್ಥ ಮಧು ಪಂಡಿತದಾಸ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ,ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ,ಖ್ಯಾತ ಉದ್ಯಮಿಗಳಾದ ಕಿರಣ್ ಮಜುಂದಾರ್ μÁ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ರಾಷ್ಟ್ರಪತಿಗಳನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಚಿವರುಗಳು,ಹೈಕೋರ್ಟ್ ನ್ಯಾಯಾಧೀಶರುಗಳು, ಸಂಸದರು, ಶಾಸಕರು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು,ಸ್ವಾತಂತ್ರ್ಯ ಹೋರಾಟಗಾರರು,ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಸೇರಿದಂತೆ ಸರಕಾರದ ಉನ್ನತ ಅಧಿಕಾರಿಗಳು,ಇನ್ನೀತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here