ಕಲಬುರಗಿ: ಜೇವರ್ಗಿ ವಿದಾನಸಬೆ ಕ್ಷೇತ್ರದಲ್ಲಿ ಬರುವ ಯಡ್ರಾಮಿ ತಾಲೂಕಿನ ಹಂಗರಗಾ (ಕೆ) ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ವಿಭಾಗ ಇವರ ವತಿಯಿಂದ 2021-22 ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು 95 ಲP್ಷÀ ವೆಚ್ಚದಲ್ಲಿ ಮನೆ ಮನೆ ಕುಡಿಯುವ ನೀರು ವದಗಿಸುವ ಕಾಮಗಾರಿಗೆ ಶಾಸಕರು ಹಾಗೂ ವಿಧಾನ ಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಆದ ಡಾ. ಅಜಯ್ ಸಿಂಗ್ ಅವರು ಅಡಿಗಲ್ಲು ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಳ್ಳಿಗಾಡಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ. ಜಲ ಜೀವನ ಮಿಷನ್ ಅಡಿಯಲಿನ ಈ ಕಾಮಗಾರಿ ಗುಣಟ್ಟದಿಂದ ಮಾಡಬೇಕು. ಇದರಿಂದ ಜನತೆಗೆ ಅನುಕೂಲವಾಗಬೇಕು, ಜನತೆಗೆ ಆದಷು ಬೇಗ ಮನೆ ಮನೆಗೂ ನೀರು ಒದಗುವಂತಾಗಬೇಕು. ಅಧಿಕಾರಿಗಳು ಈ ಯೋಜನೆಯ ಅನುಷ್ಠಾನಕ್ಕೆ ಕಟಿಬದ್ಧವಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಚಂದ್ರಶೇಖರ್ ಹರನಾಳ, ಕಾಂಗ್ರೆಸ್ ಎಸ್.ಟಿ.ಸೆಲ್ ಅಧ್ಯP್ಷÀ ಗುರು ಸುಬೇದಾರ, ಸಿದ್ದರಾಮಯ್ಯ ಹಿರೇಮಠ, ಇಲಾಯತಲಿ ಮು¯್ಲÁ, ನಜಿರಅಹ್ಮದ, ಕರಣಪ್ಪ ಕಿರಳಗಿ, ಹನುಮಂತರಾಯಗೌಡ ಹೊಸಮನಿ, ತಿರುಪತಿ ದೇಸಾಯಿ ವಡಗೇರಾ, ಶಂಕರಗೌಡ ವಡಗೇರಾ, ಅಪ್ಪ ಕುಲಕರ್ಣಿ , ರಜಾಕ್ ಮನಿಯಾರ, ಬಾಬಾ ಫರಿಧ ,ಇಬ್ರಾಹ್ಮಿಸಾಬ ಮು¯್ಲÁ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.