ಕಲಬುರಗಿ: ಬೀದರ್ ಜಿಲ್ಲೆಯ ಮೌಂಟ್ ರೇಕುಳಗಿಯ ಅನಾಥ ಪಿಂಡಕ ಬುದ್ಧ ವಿಹಾರದ ಅಭಿವೃದ್ಧಿಗಾಗಿ ಸುಮಾರು 5 ಕೋಟಿ ಅನುದಾನ ನೀಡಲು ಕಲ್ಯಾಣ ಕರ್ನಾಟಕ ಪ್ರಾದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ವಿಹಾರದ ಪೂಜ್ಯ ಭಂತೆ ಧಮ್ಮಪಾಲ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ಯವರು ಕಲಬುರಗಿಯಲ್ಲಿ ಇಂದು ಮನವಿ ಸಲ್ಲಿಸಿದರು.
ಮೌಂಟ್ ರೇಕುಳಗಿಯ ಬುದ್ಧ ವಿಹಾರವು ಕಲ್ಲಾಣ ಕರ್ನಾಟಕ ಭಾಗದ ಪ್ರಮುಖ ಪ್ರವಾಸಿ ತಾಣವಾಗಿದ್ದು ಸಾವಿರಾರು ಬೌದ್ಧ ಉಪಾಸಕರು ಸೇರಿದಂತೆ ಇತರ ಧರ್ಮಿಯರೂ ಕೂಡ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಪ್ರವಾಸಿಗರ ಮತ್ತು ಉಪಾಸಕರ ಅನುಕೂಲಕ್ಕಾಗಿ, ಪ್ರವಾಸಿ ಮಂದಿರ, ಬಯಲು ರಂಗ ಮಂದಿರ, ಸಾಂಚಿ ಮಹಾದ್ವಾರ ನಿರ್ಮಾಣ, ಸಿಸಿ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ್, ಚವಡಾಪುರಿ ಸಂಸ್ಥಾನ ಮಠದ ಡಾ. ರಾಜಶೇಖರ ಶಿವಾಚಾರ್ಯರು, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಕೆಜಿಎಫ್ ಮಾಜಿ ಶಾಸಕ ವೈ ಸಂಪಂಗಿ, ಬಿಜೆಪಿ ಮುಖಂಡ ರವಿ ಬಿರಾದಾರ್ ಕಮಲಾಪುರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪೂಜ್ಯ ಕಶ್ಯಪ್ ಭಂತೆ ಯವರ ಪ್ರಯತ್ನದ ಫಲವಾಗಿ ಮೌಂಟ್ ರೇಕುಳಗಿ ಪ್ರಮುಖ ಬೌದ್ಧ ಅಧ್ಯಯನ ಕೇಂದ್ರವಾಗಿದೆ. ಇದರ ಹೆಚ್ಚಿನ ಅಭಿವೃದ್ಧಿಗಾಗಿ ಅನುದಾನದ ಅಗತ್ಯವಿದೆ. -ಡಾ.ಅಂಬಾರಾಯ ಅಷ್ಠಗಿ, ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ, ಕರ್ನಾಟಕ