ನಿವೃತ್ತ ಅಂಗನವಾಡಿ ನೌಕರರ ಗ್ರಾಚ್ಯೂಟಿ ಹಣ ನೀಡಲು ಪ್ರತಿಭಟನೆ

0
23

ಸುರಪುರ: ರಾಜ್ಯದಲ್ಲಿನ ನಿವೃತ್ತ ಅಂಗನವಾಡಿ ನೌಕರರಿಗೆ ಗ್ರಾಚ್ಯೂಟಿ (ಗೌರವಧನ) ನೀಡಲು ಆಗ್ರಹಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೋರಾಟ ಗಾರ್ತಿ ಸುರೇಖಾ ಕುಲಕರ್ಣಿ,ರಾಜ್ಯದಲ್ಲಿನ ಎಲ್ಲಾ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯೂಟಿ ಹಣ ನೀಡಬೇಕು.ಈಗಾಗಲೇ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ನಮಗೆಲ್ಲರಿಗೂ ಗೌರವಧನ ನೀಡಬೇಕು.ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಂದು ನಾವೆಲ್ಲರು ಸರಕಾರಕ್ಕೆ ಒತ್ತಯಿಸುತ್ತಿದ್ದು ಕೂಡಲೇ ಸರಕಾರ ನಮಗೆ ನೀಡಬೇಕಾದ ಗೌರವಧನ ನೀಡುವತ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ನಂತರ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಅನಿಲ್ ಕಾಂಬ್ಳೆ ಅವರಿಗೆ ಎಲ್ಲಾ ನಿವೃತ್ತ ಅಂಗನವಾಡಿ ನೌಕರರು ತಾವು ಸಲ್ಲಿಸಿದ ಸೇವಾ ದೃಢಿಕರಣ ಹಾಗೂ ಗ್ರಾಚ್ಯೂಟಿಗಾಗಿ ಮನವಿಯ ಅರ್ಜಿಯನ್ನು ಸಲ್ಲಿಸಿದರು.

ಎಲ್ಲರ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದ ಸಿಡಿಪಿಓ ಅನಿಲ್ ಕಾಂಬ್ಳೆ ಮಾತನಾಡಿ,ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಅಲ್ಲದೆ ಕಚೇರಿಯಲ್ಲಿನ ಯಾವುದೇ ನಿಮ್ಮ ಕೆಲಸಗಳಿಗೆ ಯಾರಿಗೂ ನಯಾ ಪೈಸೆ ಹಣ ನೀಡದಂತೆ ಹಾಗೂ ಯಾರಾದರು ಹಣ ಕೇಳಿದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಬಸಮ್ಮ ಆಲ್ಹಾಳ,ನಸೀಮಾ ಮುದನೂರ,ಸುನಂದ ಬನ್ನೆಟ್ಟಿ,ರಾಧಾಬಾಯಿ,ಗಂಗಮ್ಮ ಕೋಳಿಹಾಳ,ಶಾರದಾ ಹುಣಸಗಿ,ಸರಸ್ವತಿ,ಶಶಿಕಲಾ ಹುಣಸಗಿ,ಮರೆಮ್ಮ ಸುರಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here