ಸಾವಯವ ಕೃಷಿ ಮತ್ತು ಗೋಕೃಪಾಮ್ಮತ ತಯಾರಿಸುವ ವಿಧಾನದ ಬಗ್ಗೆ ಒಂದು ದಿನದ ಕಾರ್ಯಾಗಾರ

0
64

ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಮತ್ತು ವಿಕಾಸ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅರಿವಿನ ಮನೆ ಸಭಾಂಗಣದಲ್ಲಿ ಸಾವಯವ ಕೃಷಿ ಮತ್ತು ಗೋಕೃಪಾಮ್ಮತ ತಯಾರಿಸುವ ವಿಧಾನದ ಬಗ್ಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಮುಖ್ಯ ಉಪನ್ಯಾಸಕರಾಗಿ ಗೋಪಾಲ ಭಾಯ್‌ ಸುತಾರಿಯ ಮತ್ತು ಡಾ.ಎಸ್‌.ಎ ಪಾಟೀಲ, ಕೃಷಿ ವಿಜ್ಞಾನಿಗಳು ಆಗಮಿಸಿದ್ದರು. ಕಾರ್ಯಾಗಾರವನ್ನು ಉದ್ಭಾಟಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಸವರಾಜ್‌ ಪಾಟೀಲ್‌ ಸೇಡಂ, ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸೃತಿಕ ಸಂಘ ರವರು ದೇಶ ತನ್ನ ತನ ಕಾಣಬೇಕಿದ್ದರೆ ಕೃಷಿ ಕಾಯಕ ಮತ್ತೆ ಗೌರವಯುತವಾಗಬೇಕಿದೆ, ಯುವಕರು ಕೆಲಸವನ್ನರಸಿ ಮಹಾನಗರಕ್ಕೆ ಹೋಗದೆ ಹಳ್ಳಿಯಲ್ಲೇ ಇದ್ದುಕೊಂಡು ಕೃಷಿ ಕಾಯಕದಲ್ಲಿ ತೊಡಗಿ ಸಂಪನ್ನರಾಗಿ ಸಂತೃಪ್ತ ಜೀವನ ನಡೆಸಬಹುದು ಎಂದು ಹೇಳಿದರು. ಸಾವಯವ ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವದರಿಂದ ಖರ್ಚು ಕಡಿಮೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಡಾ. ಎಸ್‌.ಎ ಪಾಟೀಲ್‌ ತಮ್ಮ ಉಪನ್ಯಾಸದಲ್ಲಿ ಹೇಳಿದರು.

Contact Your\'s Advertisement; 9902492681

ಶ್ರೀ ಗೋಪಾಲಭಾಯಿ ಸುತರಿಯಾ ರವರು ಗೋಕೃಪಾಮೃತವನ್ನು ಕೃಷಿಕರು ಸ್ವಂತ ತಾವೇ ತಯಾರಿಸಿಕೊಂಡು ತಮ್ಮ ಜಮೀನಿನಲ್ಲಿ ಮತ್ತು ಬೆಳೆಗಳ ಮೇಲೆ ಸಿಂಪಡಿಸಿದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಾಳು ಮೇಲಿರುವ ಅವಲಂಬನೆ ಕಡಿಮೆ ಮಾಡಿ ಉತ್ತಮವಾದ ಫಸಲು ಬೆಳೆಯಬಹುದು ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕರು, ಕೃಷಿ ಉಪಸಮಿತಿಯ ಅಧ್ಯಕ್ಷರು ಮತ್ತು ವಿಕಾಸ ಅಕಾಡೆಮಿಯ ವಿಶ್ವಸ್ಥರಾದ ಶ್ರೀ ವಿ. ಶಾಂತರೆಡ್ಡಿ ಮತ್ತು ಶ್ರೀ ಭೀಮಾಶಂಕರ್‌ ತೆಗ್ಗಳ್ಳಿ ಉಪಸ್ಥಿತರಿದ್ದರು.

ಜಿಲ್ಲೆಯ ಮೂಲೆಮೂಲೆಗಳಿಂದ ಬ೦ದ ಸುಮಾರು 600 ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿ ಗೋಕೃಪಾಮೃತ ಮತ್ತು ಸಾವಯವ ಕೃಷಿ ವಿಷಯದ ಕುರಿತು ಮಾಹಿತಿ ಪಡೆದರು. ಉಪನ್ಯಾಸದ ನಂತರ ಗೋಕೃಪಾಮೃತ ತಯಾರಿಸುವ ವಿಧಾನದ ಪ್ರಾತ್ಯಕ್ಷತೆ ಏರ್ಪಡಿಸಲಾಗಿತ್ತು ಮತ್ತು ಬ೦ದ ಎಲ್ಲ ರೈತರಿಗೆ ಗೋಕೃಪಾಮೃತ ಉಚಿತವಾಗಿ ಹಂಚಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here