ಖರ್ಗೆಯವರ ಪಕ್ಷದ ನಿಷ್ಠೆಗೆ ಸಂದ ಫಲ- ಕಲಬುರಗಿ ಕಾಂಗ್ರೆಸ್ ಮುಖಂಡರ ಸಂತಸ

0
34
kharge

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಕಲಬುರಗಿ ಧುರಿಣರು, ಹಿರಿಯ ಮುಖಡರು ಹಾಗೂ ಹಾಗೂ ರಾಜ್ಯಸಭಾ ವಿರೋಧ ಪಕ್ಷ ನಾಕ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಕಣಕ್ಕಿಳಿಸುವಲ್ಲಿ  ಪಕ್ಷ ಕೈಗೊಂಡ ತೀರ್ಮಾನವನ್ನು ಕಲಬುರಗಿ ಕಾಂಗ್ರೆಸ್ ಮುಖಂಡರಾದ ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್, ಶಾಸಕರು ಹಾಗೂ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತರಾದÀ ಡಾ. ಅಜಯ್ ಸಿಂಗ್, ಶಹಾಪುರ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಗೋನಾಯಕ್, ನೀಲಕಂಠ ಮೂಲಗೆ, ಕಲಬುರಗಿ ಬ್ಲಾಕ್ ಕಾಂಗ್ರೆಸ್‍ನ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ ಸ್ವಾಗತಿಸಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಡಾ. ಮಲ್ಲಿಕಾರ್ಜನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತ ಬಂದವರು. ಅವರ ಪಕ್ಷ ನಿಷ್ಠೆಗೆ ಇದೀಗ ಪ್ರತಿಫಲ ದೊರಕಿದೆ. ಇದಕ್ಕಾಗಿ ತಾವೆಲ್ಲರೂ ಸೋನಿಯಾ ಗಾಂಧಿಯವರನ್ನು ಅಭಿನಂಇಸೋದಾಗಿಯೂ ಹೇಳಿದ್ದಾರೆ. ಖರ್ಗೆಯವರು ಪಕ್ಷನ್ನು ದೇಶವ್ಯಾಪಿ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆಂದು ಈ ಮಖಂಡರೆಲ್ಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಡಾ. ಖರ್ಗೆಯವರು ಕಲಬುರಗಿಯವರು. ಕಳೆದ 50 ವರ್ಷದಿಂದ ಸಾರ್ವಜನಿಕ ಬದುಕಲ್ಲಿದ್ದವರು.  ಶತಮಾನ ಕಂಡ ಕಾಂಗ್ರೆಸ್ ಪಕ್ಷಕ್ಕೆ ಡಾ. ಖರ್ಗೆಯವರ ಸಾರಥ್ಯ ಹೊಸ ಲವಲವಿಕೆ ತುಂಬುವಲ್ಲಿ ದೂಸ್ರಾ ಮಾತಿಲ್ಲವೆಂದು ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಸೇರಿಂತೆ ಜಿಲ್ಲೆಯ ಕಾಂಗ್ರೆಸ್ ಮುಕಂಡರೆಲ್ಲರೂ ಅಭಿಪ್ರಾಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here