ಕಲಬುರಗಿ: ಕಸಾಪದಿಂದ 9 ದಿನಗಳ ನಾಡಹಬ್ಬ ಕಾರ್ಯಕ್ರಮಕ್ಕೆ ಚಾಲನೆ

0
66

ಕಲಬುರಗಿ: ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಮಕ್ಕಳ ಕಲರವ. ಮಕ್ಕಳು ತಮಗೆ ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವಲ್ಲಿ ತಲ್ಲಿನರಾಗಿದ್ದ ಸನ್ನಿವೇಶ ಕಂಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂಭತ್ತು ದಿನಗಳವರೆಗೆ ಆಯೋಜಿಸಿರುವ `ನಾಡಹಬ್ಬ-2022′ ರ ಸಡಗರ-ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಮಾತನಾಡಿ, ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದರೊಂದಿಗೆ ಬದುಕಿನ ಪರಿಪೂರ್ಣತೆಯನ್ನು ಕಲಿಸಿಕೊಡಲಿವೆ.

Contact Your\'s Advertisement; 9902492681

ನಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೆ ಸಾಲದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ನಮ್ಮ ನಮ್ಮ ಮನೆಯಲ್ಲಿ ಪಾಲಕರು ಹಾಗೂ ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳು ಗುರುತಿಸಿ ಅವುಗಳನ್ನು ಬೆಳಕಿಗೆ ತರುವ ಕಾರ್ಯಕ್ರಮಗಳನ್ನು ಅಯೋಜಿಸಿ ಮಕ್ಕಳು ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಾವಿದರಿಗೆ ಮತ್ತು ಮಕ್ಕಳಿಗಾಗಿ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಮಕ್ಕಳ ಅಂತರಂಗದಲ್ಲಿ ಹುದುಗಿರುವ ಕಲೆಯ ಶಕ್ತಿ-ಸಾಮಥ್ರ್ಯವನ್ನು ಪ್ರದರ್ಶಿಸಲು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂಭತ್ತು ದಿನಗಳ ನಾಡಹಬ್ಬವನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಯಾವದೇ ಶಿಕ್ಷಣ ಪಡೆಯದ ಜಾನಪದ ಕಲೆ ಅತ್ಯಂತ ಪವಿತ್ರವಾದುದು. ಜನರ ಬಾಯಿಂದ ಬಂದ ಪದಗಳೇ ನುಡಿಗಳಾಗಿ, ಹಾಡುಗಳಾಗಿ ಹೊರಹೊಮ್ಮಿ ಸಂಗೀತ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿ ನಮ್ಮ ನಾಡಿನ ಪರಂಪರೆಯನ್ನು ಎತ್ತಿ ಹಿಡಿದಿದೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ, ಆಯೋಗದ ಸದಸ್ಯೆ ಗೀತಾ ರಾಜು ವಾಡೇಕರ್, ಕಸಾಪ ಶಹಾಬಾದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಪತ್ರಕರ್ತ ವಿಜಯಕುಮಾರ ವಾರದ, ವಿಜಯಕುಮಾರ ಆಡಕಿ, ಚಂದ್ರಕಲಾ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ಧರ್ಮಣ್ಣಾ ಹೆಚ್.ಧನ್ನಿ, ರಾಜೇಂದ್ರ ಮಾಡಬೂಳ, ಕಲ್ಯಾಣಕುಮಾರ ಶೀಲವಂತ, ಗಣೇಶ ಚಿನ್ನಾಕಾರ, ರವೀಂದ್ರಕುಮಾರ ಭಂಟನಳ್ಳಿ,, ವಿಶ್ವನಾತ ತೊಟ್ನಳ್ಳಿ, ಮಮತಾ ಬಿ.ಯಡ್ರಾಮಿ, ಗೋಪಾಲ ಕುಲಕರ್ಣಿ, ಡಾ.ರೆಹಮಾನ್ ಪಟೇಲ್, ರೇವಣಸಿದ್ಧ ಹೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here