ಕಲಬುರಗಿ: ನವರಾತ್ರಿ ಮಹೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ

0
12

ಕಲಬುರಗಿ: ಎಸ್. ಆರ್. ಫೌಂಡೇಶನ್ ಹಾಗೂ ಪಾಟೀಲ್‍ಗ್ರೂಪ್‍ಆಫ್ ಕಂಪನಿಸ್ ವತಿಯಿಂದ ಸೂಪರ್ ಮಾರ್ಕೆಟ್‍ನಲ್ಲಿರುವ ಸಂಗಮ ಮತ್ತು ತ್ರಿವೇಣಿ ಚಿತ್ರ ಮಂದಿರದ ಆವರಣದಲ್ಲಿ “ನವರಾತ್ರಿ ಮಹೋತ್ಸವ” ಪ್ರಯುಕ್ತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾನಪದಗೀತೆ, ಭಕ್ತಿಗೀತೆ, ಭಾವಗೀತೆ ಹಾಗೂ ಭರತನಾಟ್ಯ ಸ್ಪರ್ಧೆಯನ್ನುಎರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜ ಕಡಾ. ಸಂದೀಪ ಮಾಳಗಿ ತಿಳಿಸಿದರು.

ಅ. 2ರಂದು ಜಾನಪದಗೀತೆ, ಭಕ್ತಿಗೀತೆ ಹಾಗೂ ಭಾವಗೀತೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು.ಈ ಸ್ಪರ್ಧೆಯಲ್ಲಿ 3 ಅತ್ಯುತ್ತಮ ಸ್ಪರ್ಧಾಳುಗಳನ್ನು ಆಯ್ಕೆಮಾಡಿ ಪ್ರಥಮ ಬಹುಮಾನರೂ. 2,000/-, ದ್ವಿತೀಯ ಬಹುಮಾನರೂ. 1,000 ಹಾಗೂ ತೃತಿಯ ಬಹುಮಾನರೂ.500 ಇದ್ದು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು.ಈ ಸ್ಪರ್ಧೆಗೆ ವಯೋಮಿತಿ ಕನಿಷ್ಠ 13 ವರ್ಷದಿಂದಗರಿಷ್ಠ 30 ವರ್ಷಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ದಿನಾಂಕ: ಅ. 3 ರಂದು ಭರತನಾಟ್ಯ ಸ್ಪರ್ಧೆಜರುಗಲಿದ್ದು, ಈ ಸ್ಪರ್ಧೆಯಲ್ಲಿ 3 ಅತ್ಯುತ್ತಮ ಸ್ಪರ್ಧಾಳುಗಳನ್ನು ಆಯ್ಕೆಮಾಡಿ ಪ್ರಥಮ ಬಹುಮಾನರೂ. 3,000/-, ದ್ವಿತೀಯ ಬಹುಮಾನರೂ. 2,000/- ಹಾಗೂ ತೃತಿಯ ಬಹುಮಾನರೂ.1,000/- ಇದ್ದು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು.

ಈ ಸ್ಪರ್ಧೆಗೆ ವಯೋಮಿತಿ ಕನಿಷ್ಠ 8 ವರ್ಷದಿಂದಗರಿಷ್ಠ 25 ವರ್ಷ.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇರೀತಿಯ ಶುಲ್ಕವಿರುವುದಿಲ್ಲ. ನಿಗದಿಪಡಿಸಿದ ವಯೋಮಿತಿಯವರು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸಲ್ಲಿಚ್ಚುಸುವವರುತಮ್ಮ ಒಂದು ಪಾಸಪೋರ್ಟ ಅಳತೆಗಯ ಭಾವಚಿತ್ರ ಹಾಗೂ ಆಧಾರ ಪ್ರತಿ ಸಲ್ಲಿಸಬೇಕು. ಸ್ಪರ್ಧೆಗೆತೀರ್ಪುಗಾರರಾಗಿ ನಾಡಿನಖ್ಯಾತಕಲಾವಿದರುಆಗಮಿಸುವರುಎಂದರು.ಹೆಚ್ಚಿನ ಮಾಹಿತಿಗಾಗಿಡಾ.ಸಂದೀಪ ಬಿ.- 9880254069 ಹಾಗೂ ನಾಗರಾಜ- 9972776062 ಇವರನ್ನು ಸಂಪರ್ಕಿಸಲುಕೋರಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here