ಸುಧಾರಣೆಗೆ ಮುಂದಾದ ಅಧಿಕಾರಿಗಳು! ನಿಟ್ಟುಸಿರು ಬಿಟ್ಟ ನಿವಾಸಿಗಳು

0
11

ಕಲಬುರಗಿ: ನಗರದ ಎಪಿಎಂಸಿ ಗಂಜ್ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಸಂಚಾರ ರಸ್ತೆ ಕೂಡ ಹಾಳಾಗಿದೆ. ಸಾರ್ವಜನಿಕ ಕುಡಿವ ನೀರಿನ ವ್ಯವಸ್ಥೆಗಾಗಿ ಅದೆಷ್ಟೋ ವರ್ಷಗಳಿಂದ ಮಹಾನಗರ ಪಾಲಿಕೆ ಮನವಿ ಸಲ್ಲಿಸುತ್ತ ಬಂದಿದ್ದರೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗಂಜ್ ಪ್ರದೇಶ ಗಬ್ಬೆದ್ದು ನಾರುವಂತಗಿದೆ ಎಂದು ನೆಹರೂ ಗಂಜ್‍ನ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಶ್ರೀಮಂತ ಉದನೂರಮೌಲಾಮುಲ್ಲಾ, ಶರಣಬಸಪ್ಪ ಮಮಶೆಟ್ಟಿ ಹಾಗೂ ಸಂತೋಷ ಲಂಗಾರ್ ತಿಳಿಸಿದ್ದಾರೆ.

ಅಡತ್ ವ್ಯಾಪಾರಿಗಳು ಇರುವ ಸ್ಥಳದಲ್ಲಿ ಹೊಲಸು ನಾರುತ್ತಿದೆ. ಇದರಿಂದಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಹಳ್ಳಿಯ ಜನರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಅಂತೆಯೇ ಈ ಸಂಘಟನೆಗಳ ಪ್ರಮುಖರು ರಸ್ತಾರೋಖೊ ಬೆದರಿಕೆ ಹಾಕಿದ್ದರು. ಇದರಿಂದ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು ಇದೀಗ ಸುಧಾರಣೆ ಕ್ರಮಕ್ಕೆ ಮುಂದಾಗಿದ್ದಾರೆ. ಎಷ್ಟೋ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾರ್ಯ ಪ್ರಾರಂಭವಾಗಿರುವುದಕ್ಕೆ ಸಂಘಟನೆಗಳ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here