ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಲು ಮಿಟೇಕರ್ ಸಲಹೆ

0
22

ಕಲಬುರಗಿ: ಪ್ರತಿಯೊಬ್ಬ ವಿದ್ಯಾರ್ಥಿಯು ಎನ್.ಎಸ್.ಎಸ್.ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಶ್ರೀ ಶರಣಬಸವೇಶ್ವರದೇವಾಲಯಕಮೀಟಿಅಧ್ಯಕ್ಷ ಬಾಬುರಾವ್ ಮಿಟೇಕರ್ ಸಲಹೆ ನೀಡಿದರು.

ಆಳಂದ ತಾಲ್ಲೂಕಿನ ನಿಂಬರ್ಗಾ ಸರಕಾರಿ ಪದವಿ ಪೂರ್ವಕಾಲೇಜಿನ ವತಿಯಿಂದ ಶರಣನಗರದ ಶರಣಬಸವೇಶ್ವರದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭಕಾರ್ಯಕ್ರಮದಲ್ಲಿ ಮಾತನಾಡಿದಅವರು, ಮಿಟೇಕರ್ ” ನಾನಲ್ಲಆದರೆ ನೀವು” ಎನ್.ಎಸ್.ಎಸ್.ದ್ಯೇಯ ವಾಕ್ಯವಾಗಿದೆ. ಈ ವಾಕ್ಯವು ಪ್ರಜಾಸತ್ತಾತ್ಮಕ ಬದುಕಿನ ಮೂಲ ತತ್ವವನ್ನು ಬಿಂಬಿಸಿ. ನಿಸ್ವಾರ್ಥ ಸೇವೆಯೇಅಗತ್ತೆತೆಯನ್ನುಎತ್ತಿ ಹಿಡಿಯುತ್ತದೆಎಂದು ಹೇಳಿದರು.

Contact Your\'s Advertisement; 9902492681

ತಾಲೂಕು ಪಂಚಾಯತ ಮಾಜಿಅಧ್ಯಕ್ಷ ಸಾತಪ್ಪಜಂಪಣ್ಣ ಮಂಟಗಿ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯರ ಮಲ್ಲಿನಾಥ ನಾಟೀಕಾರಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ಶಿವುಪುತ್ರಪ್ಪ ಮಾಳಗಿ ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನುತಾವೇ ರೂಪಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ವಿದ್ಯಾಬ್ಯಾಸನಿರತರಾಗಬೇಕು. ವಿದ್ಯಎಂಬುವುದುಓದುಗನ ಸ್ವತ್ತೆ ವಿನಹ ಸೋಮಾರಿಯ ಸ್ವತ್ತಲ್ಲಎಂದು ಹೇಳಿದರು.

ಗದ್ದಗೇಶ್ವರ ಮಠದ ಪೂಜ್ಯ ನೀಲಕಂಠ ಶಿವಾಚಾರ್ಯರು ಸಾನಿದ್ಯ ವಹಿಸಿದ್ದರು. ದೈಹಿಕ ಶಿಕ್ಷಕರಾದ ಗುಂಡಪ್ಪ ಹಳಿಮನಿ, ಶಿಕ್ಷಣ ಪ್ರೇಮಿಗಳಾದ ವಿಜಯಕುಮಾರ್ ಕುಲಕರ್ಣಿ,ಶಿವು ನಂದಿ,ಎನ್.ಎಸ್.ಎಸ್.ಕಾರ್ಯಕ್ರಮಅಧಿಕಾರಿರವಿಶಂಕರ್‍ಎಸ್. ವಮ್ಮಾ ಹಾಗೂ ಕಾಲೇಜಿನ ಹಿರಿಯಉಪನ್ಯಾಸಕಿ ಮಂಗಲಾ ವಿ. ಕುಲಕರ್ಣಿ,ಸುಪ್ರಿಯಾ ಬಡದಾಳ,ನಾಗೇಶ್ವರಿ, ಸಂಗೀತಾ, ಪ್ರಶಾಂತ ಹಾಗೂ ಕಿರಣ ಪಾಟೀಲ ಇದ್ದರು.

ಹಿರಿಯ ಸಮಾಜಶಾಸ್ತ್ರಉಪನ್ಯಾಸಕ ಬಸವರಾಜ ಬಡದಾಳ ಸ್ವಾಗತಿಸಿದರು.ರಾಜ್ಯಶಾಸ್ತ್ರಉಪನ್ಯಾಸಕ ಲಕಪತಿರಾಜ ವಂದಿಸಿ ನಿರೂಪಿಸಿದರು.

ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿಅತಿ ಹೆಚ್ಚು ಅಂಕಗಳನ್ನು ಗಳಿಸಿದ ಕುಮಾರಿ ವಿದ್ಯಾಶ್ರೀ ಮಾಳಗೆ ಹಾಗೂ ವಿಜ್ಞಾನ ವಿಭಾಗದಲ್ಲಿಅತಿ ಹೆಚ್ಚು ಅಂಕಗಳನ್ನು ಗಳಿಸಿದ ಕುಮಾರಿರಕ್ಷಿತಾ ಬಿಬ್ರಾಣಿಅವರನ್ನುಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here