ದಸರಾಕಾವ್ಯೋತ್ಸಾಹಕ್ಕೆ ಕವಿಗಳ ಸಾಥ್

0
114

ಕಲಬುರಗಿ: ಸಾಮರಸ್ಯ ಮತ್ತು ಸಮಾನತೆಯ ಸಮಾಜವನ್ನುಕಟ್ಟುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಇದನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದುಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ನಗರದಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿತಾಲೂಕಾಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ `ದಸರಾಕಾವ್ಯೋತ್ಸವ’ ಎಂಬ ಬನ್ನಿ ಬಂಗಾರ-ಕಾವ್ಯ ಶೃಂಗಾರ’ ವಿಶೇಷ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದಅವರು, ಇಂದಿನ ಹದಗೆಟ್ಟ ವ್ಯವಸ್ಥೆಯ ವಿರುದ್ಧಚಾಟಿ ಬೀಸಿ ಸರಿದಾರಿಗೆತರಲು ಇಂದಿನ ಕವಿಗಳು ಶ್ರಮಿಸಬೇಕು. ಜತೆಗೆ ಸಮಾಜದಲ್ಲಿ ವೈಚಾರಿಕತೆಯಜನಜಾಗೃತಿಗೆ ನಮ್ಮಕಾವ್ಯಅದಕ್ಕೆ ಪೂರಕವಾಗಬೇಕೆಂದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಡಾ.ನಾಗೇಂದ್ರ ವiಸೂತಿ ಮಾತನಾಡಿ, ಇಂದಿನ ಯುವಜನತೆ ಮೊಬೈಲ್‍ನಿಂದದೂರ ಉಳಿದು ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜಕಟ್ಟುವುದಕ್ಕೆಕಂಕಣಬದ್ಧರಾಗಿ ನಿಲ್ಲಬೇಕು. ಕವಿಗಳಾದವರಿಗೆ ಸಾಮಾಜಿಕಜವಾಬ್ದಾರಿಅತೀ ಮುಖ್ಯಇದೆಎಂದು ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ, ಅಕ್ಟೋಬರ್‍ಕೊನೆಯ ವಾರದಲ್ಲಿತಾಲೂಕಿನ ಹೊನ್ನಕಿರಣಗಿಯಲ್ಲಿತಾಲೂಕಾ ಮಟ್ಟದಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದ್ದು, ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಮಾದರಿಯಾದ ಸಮ್ಮೇಳನವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮಕ್ಕಳ ಸಾಹಿತಿಎ.ಕೆ.ರಾಮೇಶ್ವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷ ವಿಜಯಕುಮಾರತೇಗಲತಿಪ್ಪಿ ನೇತೃತ್ವದಲ್ಲಿ ನಗರದಲ್ಲಿನ ಅಂಗಡಿಗಳ ಮೇಲೆ ಕನ್ನಡ ಬೋರ್ಡ್‍ಗಳನ್ನು ಹಾಕಿಸುವ ಬಹು ದೊಡ್ಡ ಚಳವಳಿ ನಡೆಸಿ, ನಗರವನ್ನುಕನ್ನಡಮಯವನ್ನಾಗಿ ಮಾಡಲಾಗುವುದು.ಇದಕ್ಕೆ ಸರ್ವರೂಕೈಜೋಡಿಸಬೇಕೆಂದರು.

ಆದರ್ಶ ಶಿಕ್ಷಕಿ ವಿಮಲಾ ಆರ್.,ಖ್ಯಾತಿ ಮಿಮಿಕ್ರಿಕಲಾವಿದ ಶರಣುಎಮನೂರ ನವಲಗುಂದ, ಹಾಸ್ಯಕಲಾವಿದಗುಂಡಣ್ಣಡಿಗ್ಗಿ, ಗೌರವ ಕಾರ್ಯದರ್ಶಿ ವಿಶ್ವನಾಥ ತೊಟ್ನಳ್ಳಿ, ಮೌನೇಶ ವಿಶ್ವಕರ್ಮ, ರವಿಕುಮಾರ ಶಹಾಪುರಕರ್, ಮಂಜುನಾಥ ಮಠಪತಿ ಮಾತನಾಡಿದರು.
ಪ್ರಮುಖರಾದ ಶಿವರಾಜ ಅಂಡಗಿ, ಕಲ್ಯಾಣಕುಮಾರ ಶೀಲವಂತ, ಶರಣರಾಜ್‍ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಸಿದ್ಧಾರಾಮ ಹಂಚನಾಳ, ಶರಣಬಸಪ್ಪ ನರೂಣಿ, ಶರಣಬಸವ ಜಂಗಿನಮಠ ಸೇರಿದಂತೆಅನೇಕರು ಭಾಗವಹಿಸಿದ್ದರು.

ಕವಿಗಳಾದ ಡಾ.ಕೆ.ಗಿರಿಮಲ್ಲ, ಮಲ್ಲಿಕಾರ್ಜುನಇಬ್ರಾಹಿಂಪುರ, ಕವಿತಾ ಕಾವಳೆ, ಸುನೀತಾ ಮಾಳಗೆ, ರೇಣುಕಾಎನ್., ಸುಧೀರಅರಣಕಲ್, ಪ್ರಭುಲಿಂಗ ಮೂಲಗೆ, ಧರ್ಮಣ್ಣಾ ಹೆಚ್.ಧನ್ನಿ ಮುಂತಾದ ಕವಿಗಳು ಪ್ರಚಲಿತ ವಿದ್ಯಮಾನಗಳ ಮೆಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here