ಕಲಬುರಗಿ: ಜಿಲ್ಲಾ ಜಾತ್ಯತೀತ ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ ಅವರ ನೇತೃತ್ವದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳ ಹಲವು ಮುಖಂಡರು ಸೇರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಚರ್ಚಿಸಿ ಜೆಡಿಎಸ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಅ.8ರಂದು ಸಭೆ ಕರೆಯಲಾಗಿದೆ.
ಶನಿವಾರ ಮಧ್ಯಾಹ್ನ 1:00 ಗಂಟೆಗೆ ಜಿಲ್ಲಾಜಾತ್ಯತೀತ ಜನತಾದಳ ಪಕ್ಷದಕಚೇರಿಯಲ್ಲಿ ಸಭೆ ಸೇರಲು ತೀರ್ಮಾನಿಸಿ ವಿವಿಧ ಆಕಾಂಕ್ಷಿ ಎಂಎಲ್‍ಎ ಅಧ್ಯರ್ಥಿಗಳು, ಜಿಲ್ಲೆಯ ಮುಖಂಡರು ತಾಲ್ಲೂಕು ಅಧ್ಯಕ್ಷರು ಪದಾಧಿಕಾರಿಗಳು, ವಿವಿಧ ವಿಭಾಗದ ಅಧ್ಯಕ್ಷರುಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಮಾಜಿ ಹಾಲಿ ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು, ವಿವಿಧಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಮುಖಕಾರ್ಯಕರ್ತರು, ಸಭೆಕರೆಯಲು ಈ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಬಸವರಾಜ ತಾಡಕಲ್, ಜಿಲ್ಲಾ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಸವರಾಜ ಬಿರಬಿಟ್ಟಿ, ಯುವ ರಾಜ್ಯ ಉಪಾಧ್ಯಕ್ಷ ಮೈಮುದ್ ಖುರೇಷಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಶಂಕರಕಟ್ಟಿ ಸಂಗವಿ, ಜಿಲ್ಲಾ ಯುವ ಘಟಕ ಮಾಜಿ ಅಧ್ಯಕ್ಷ ಅಲೀಮ ಇನಾಂದರ್, ಪರಿಶಿಷ್ಟ ಜಾತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿಂದ್ರ ಹಸನಾಪೂರ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ದ್ಯಾಮಗೊಂಡ, ಜೇವರ್ಗಿ ಬಿ. ಜಿಲ್ಲಾ ಮುಖಂಡ ಚಾಂದಪಾಶಾ ಜೇವರ್ಗಿ ಬಿ, ಜಿಲ್ಲಾ ವಕ್ತಾರ ಮನೋಹರ ಪೆÇೀದ್ದಾರ, ದಕ್ಷಿಣ ಮತಕ್ಷೇತ್ರ ಮಾಜಿ ಅಧ್ಯಕ್ಷ ಮಾಣಿಕ ಶಪೂರಕರ್, ಪರಿಶಿಷ್ಟ ಪಂಗಡ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಜಮಾದಾರ, ಜಿಲ್ಲಾಯುವ ಕಾರ್ಯದರ್ಶಿ ಶಿವಕುಮಾರ ಮಠಪತಿ, ಪರಿಶಿಷ್ಟ ಜಾತಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಚಿಂಚನಸೂರ, ಹಿಂದುಳಿದ ವರ್ಗದರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹಣಮಯ್ಯಗುತ್ತೇದಾರ, ಜಿಲ್ಲಾ ಮುಖಂಡರಾದ ಗುರುಲಿಂಗಪ್ಪಗೌರ, ಸಂದೀಪ ಚಂಡರ್ಕಿ, ಚಿತ್ತಾಪೂರ ಮತಕ್ಷೇತ್ರದ ಅಧ್ಯಕ್ಷ ನಾಗಣ್ಣ ವಾರದ ಹಾಗೂ ಮುಖಂಡರು ಇದ್ದರು.