ಕಲಬುರಗಿ: ನಿನ್ನೆ ಸಂಜೆಯಿಂದ ನಗರ ಸೇರಿಜಿಲ್ಲೆಯಾದ್ಯಂತಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾದಂತಾಗಿದೆ ಮುಗಿಲಿಗೆ ತೂತು ಬಿದ್ದಂತೆ ಒಂದೇ ಸಮ ಧೋ ಎಂದು ಸುರಿವ ಮಳೆಯಿಂದಾಗಿ ಮಹಾನವಮಿ ಹಬ್ಬ ಆಚರಣೆಗೂ ಕೂಡ ಅಡಚಣೆಯುಂಟಾಯಿತು.
ವಿಪರೀತ ಮಳೆಯಾಗಿದ್ದರಿಂದ ಅಂಗಡಿ ಮತ್ತು ಮನೆಗಳಿಗೆ ನೀರು ಹೊಕ್ಕು ಸಾಕಷ್ಟು ಆಸ್ತಿ ಪಾಸ್ತಿಗೆ ಹಾನಿಯಗಿದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿಯೇ ಕೈ ಕಟ್ಟಿ ಕುಳಿತುವಂತಾಯಿತು. ವ್ಯಾಪಾರ ವಹಿವಾಟಿನಲ್ಲಿ ಸಹ ಕುಂಠಿತಕಂಡು ಬಂದಿತು.ನಗರದಲ್ಲಿ ವಾಹನ ಸಂಚಾರ ದದಟ್ಟಣೆ ಕಡಿಮೆಯಾದಂತೆಕಂಡು ಬಂದಿತು.
ಜಿಲ್ಲೆಯಾದ್ಯಂತ ಬಹುತೇಕಕಡೆ ಭಾರೀ ಮಳೆಯಾಗಿದ್ದು, ನಗರ ಸೇರಿದಂತೆಗ್ರಾಮಾಂತರ ಪ್ರದೇಶದಜನರು ಸಾಕಷ್ಟು ತೊಂದರೆಅನುಭವಿಸವಂತಾಗಿದೆ.ಮಳೆಯಿಂದಾಗಿ ಜನತೆ ಮನೆಯಿಂದ ಹೊರಗೆ ಬರದಂತಾಗಿದೆ.ಹೀಗಾಗಿ ಜನತೆ ಮಳೆಗೆ ಹಿಡಿಶಾಪ ಹಾಕಿ ತಿರುಗಾಡುತ್ತಿರುವುದುಕಂಡು ಬಂದಿತು.ಆದರೂ ಮಳೆ ಬಂದ್ರೆಕೇಡಿಲ್ಲ. ಮಗ ಉಂಡ್ರೆಕೇಡಿಲ್ಲಎಂದು ಸಮಾಧಾನದ ಮಾತುಗಳನ್ನು ಆಡುತ್ತಿರುವುದು ಸಹ ಕೇಳಿ ಬಂದಿತು.