ಕಲಬುರಗಿ: ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಯೋಜನೆಯನ್ನು ಕಲಬುರಗಿಯ ಸ್ವಯಂ ಸೇವಾ ಸಂಸ್ಥೆಯಾದ ಶ್ರೀ ಗೋಪಾಲದೇವ ಜಾಧವ ಮೇಮೋರಿಯಲ್ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳಿಸಲು ಸರ್ಕಾರವು ಮಂಜೂರಾತಿ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಜಿಲ್ಲಾ ಸಮಿತಿ ಮೂಲಕ, ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಅವರು ತಿಳಿಸಿದ್ದಾರೆ.
ಅಕೌಂಟೆಂಟ್-ಕಮ್-ಕ್ಲರ್ಕ್-ಕಮ್ ಸ್ಟೋರ್ ಕೀಪರ್ ಹುದ್ದೆಗೆ ಬಿ.ಕಾಂ.ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಅಪರೇಟರ್ ಹುದ್ದೆಗೆ ದ್ವಿತೀಯ ಪಿ.ಯು.ಸಿ (ಕಂಪ್ಯೂಟರ್ ತರಬೇತಿ ಹೊಂದಿರಬೇಕು) ವಿದ್ಯಾರ್ಹತೆ ಹೊಂದಿರಬೇಕು. ಕಚೇರಿ ಸೇವಕ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಕೃತಕಾಂಗ ಜೋಡಣೆ (ಪಿ. ಆಂಡ್ ಒ) ಅಭಿಯಂತರ ಹುದ್ದೆಗೆ ಪಿ ಆಂಡ್ ಒ ಇಂಜಿನಿಯರಿಂಗ್ ಪದವಿ/ ಡಿಪ್ಲೊಮಾದಲ್ಲಿ 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಲೇದರ್ ವರ್ಕ್/ಶೂ ಮೇಕರ್ ಹುದ್ದೆಗೆ ಪ್ರಮಾಣಪತ್ರದೊಂದಿಗೆ 2 ವರ್ಷಗಳ ಅನುಭವ ಹೊಂದಿರಬೇಕು. ಸ್ಪೀಚ್ ಥೆರಾಫಿಸ್ಟ್ ಮತ್ತು ಆಡಿಯೋಲಾಜಿಸ್ಟ್ ಹುದ್ದೆಗೆ ಬಿ.ಎಸ್.ಸಿ ಇನ್ ಸ್ಪೀಚ್ ಆಂಡ್ ಆಡಿಯೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಫಿಸಿಯೋಥೇರಾಪಿಸ್ಟ / ಅಕ್ಯುಪೇಶನಲ್ ಥೆರಾಪಿಸ್ಟ ಹುದ್ದೆಗೆ ಫಿಸಿಯೋಥೇರಾಪಿಸ್ಟ / ಅಕ್ಯುಪೇಶನಲ್ ಥೆರಾಪಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಮೋಬಿಲಿಟಿ ಇನ್ಸಟ್ರಕ್ಟರ್ ಹುದ್ದೆಗೆ ಒ ಆಂಡ್ ಎಮ್ ಪ್ರಮಾಣಿತ ತರಬೇತಿ ಹೊಂದಿರಬೇಕು. ಇಯರ್ ಮೋಲ್ಡ್ ಟೆಕ್ನಿಷಿಯನ್ ಹುದ್ದೆಗೆ ಇಯರ್ ಮೋಲ್ಡ್ ಪ್ರಮಾಣಿತ ತರಬೇತಿ ಹೊಂದಿರಬೇಕು. ಕೀಲು ಮತ್ತು ಮೋಳೆ ತಜ್ಞರು (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಆರ್ಥೊಪೆಡಿಕ್ ವಿದ್ಯಾರ್ಹತೆ ಹೊಂದಿರಬೇಕು.
ಆಪ್ತಾಲ್ಮೊಲಾಜಿಸ್ಟ್ (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಆಪ್ತಾಲ್ಮೊಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಇ.ಎನ್.ಟಿ ಸ್ಪೆಷಾಲಿಸ್ಟ್ (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್.ಇ.ಎನ್.ಟಿ ವಿದ್ಯಾರ್ಹತೆ ಹೊಂದಿರಬೇಕು. ಸೈಕಿಯಾಟ್ರಿಸ್ಟ್ (ಪ್ರತಿ ಭೇಟಿಗೆ 1000 ರೂ.ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಸೈಕಿಯಾಟ್ರಿ ಮೆಡಿಸೆನ್ ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ 2022ರ ಅಕ್ಟೋಬರ್ 15ರ ಸಂಜೆ 5.30 ಗಂಟೆಯೊಳಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಅವಧಿ ಮೀರಿ ಸ್ವೀಕೃತವಾದಂತ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-235222, 8217274757 ಗೆ ಸಂಪರ್ಕಿಸಲು ಕೋರಲಾಗಿದೆ.