ಶಹಾಬಾದ:ಪ್ರತಿ ವರ್ಷದಂತೆ ಈ ವರ್ಷವೂ ತುಳಜಾಪೂರ ಅಂಭಾ ಭವಾನಿ ದೇವಿಯ ದರ್ಶನಕ್ಕೆ ಪಾದಯಾತ್ರೆ ಮಾಡುವ ನೂರಾರು ಭಕ್ತರಿಗೆ ಶಿವಾಜಿ ಯುವ ಮಂಡಳಿ ಹಾಗೂ ಅಂಬಾಭವಾನಿ ಯುವಕ ಮಂಡಳಿಯ ಯುವಕರ ವತಿಯಿಂದ ಉಪಹಾರ, ಚಹಾ, ಹಣ್ಣು-ಹಂಪಲು, ನೀರಿನ ಬಾಟಲಿ, ಮಾತ್ರೆಗಳ ವಿತರಣೆ ಮಾಡಿದರು.
ಬೆಳಿಗ್ಗೆ 4 ಗಂಟೆಗೆ ತಾಲೂಕಿನ ಭಂಕೂರ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಶಾಂತನಗರ ಭಂಕೂರಿನ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ತುಳಜಾಪೂರ ಅಂಭಾ ಭವಾನಿ ದೇವಿಯ ದರ್ಶನಕ್ಕೆ ಪಾದಯಾತ್ರೆ ಹೊರಟ ನೂರಾರು ಭಕ್ತರಿಗೆ ಉಪಹಾರ, ಹಣ್ಣು -ಹಂಪಲು ಚಹಾ ಹಾಗೂ ನೀರಿನ ಬಾಟಲಿ ನೀಡಲಾಯಿತು.ಅಲ್ಲದೇ ಉಳಿದುಕೊಳ್ಳು, ಸ್ನಾನ ಮಾಡಲು ಹಾಗೂ ಉಪಹಾರವನ್ನು ಕುಳಿತುಕೊಂಡು ತಿನ್ನಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ, ಡಾ. ಸಂಜಯ್ ಜೈನ್ ಹಾಗೂ ಗಣ್ಯರಾದ ಚಿನ್ನಾಜಿರಾವ ಗಾಯಕವಾಡ, ಜಗದಂಬಾ ದೇವಿಯ ದರ್ಶನಕ್ಕೆ ಸಾವಿರಾರೂ ಭಕ್ತರು ವಿವಿಧ ಗ್ರಾಮ, ಜಿಲ್ಲೆಗಳಿಂದ ತುಳಜಾಪೂರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ತುಳಜಾಪೂರಕ್ಕೆ ದೇವಿ ದರ್ಶನಕ್ಕೆ ಪಾದಯಾತ್ರೆ ಹೋಗುವ ನೂರಾರು ಭಕ್ತರಿಗೆ, ನಮ್ಮ ಕೈಲಾದ ಅಲ್ಪ ಸೇವೆ ಮಾಡುತ್ತಿದ್ದೆವೆ. ಪಾದಯಾತ್ರೆ ಹೊರಟ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನಾವು ಉಪಹಾರ, ನೀರು, ಮಾತ್ರೆಗಳನ್ನು ವಿತರಿಸುತ್ತಿದ್ದೆವೆ.ಈ ರೀತಿಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದರು.
ಜೈ ಭವಾನಿ ತರುಣ ಸಂಘ : ಯಾದಗಿರಿ, ಚಿತ್ತಾಪೂರ ಹಾಗೂ ಸುತ್ತಮುತ್ತ ಗ್ರಾಮದಿಂದ ಬರುವ ನೂರಾರು ಭಕ್ತರುಆಗಮಿಸಿದ್ದರು. ಭಕ್ತರಿಗೆ ವಿಶ್ರಾಂತಿ ಮಾಡಲು ಟೆಂಟ ವ್ಯವಸ್ಥೆ ಮಾಡಿದ್ದರು.ಅಲ್ಲದೇ ವಾಡಿ ವೃತ್ತ, ಭಂಕೂರವರೆಗೂ ರಾಷ್ಟ್ರೀಯ ಹೆದ್ದಾರೆಯ ಮೇಲೆ ಶಹಾಬಾದ ಹಾಗೂ ಭಂಕೂರಿನ ಯುವಕರು, ತುಳಜಾಪೂರಕ್ಕೆ ಪಾದಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಬಿಸಿಬಿಸಿ ಉಪಹಾರ, ಟೀ, ಕಾಫೀ, ಬಿಸ್ಕಟ್ ವಿತರಣೆ ಮಾಡಿದರು. ಇತರರು ಪಾಲ್ಗೊಂಡಿದರು.
ಈ ಸಂದರ್ಭದಲ್ಲಿ ಶಿವಾಜಿ ಯುವ ಮಂಡಳಿಯ ರಾಜು ಗಾಯಕವಾಡ, ಕರುಣೇಶ ಪಾಟೀಲ,ದಶರಥ ಗಾಯಕವಾಡ, ಉಮೇಶ ಗಾಯಕವಾಡ, ಹೆಚ್.ವಾಯ್.ರಡ್ಡೇರ್, ನಾನಾಗೌಡ ಪಾಟೀಲ,ಅಶೋಕ ಗುತ್ತೆದಾರ, ವಿಜಯಕುಮಾರ ತಳವಾರ,ಬಸವರಾಜ ಪಾಟೀಲ,ಕಿರಣ ಗಾಯಕವಾಡ, ಆನಂದ ಸಿಂಘೆ, ಮುಖೇಶ, ಕಲ್ಯಾಣಿ ತಳವಾರ, ಕಾರ್ತಿಕ ತಳವಾರ, ಪ್ರಶಾಂತ ಕಂದಗೂಳ, ನಾಗೇಂದ್ರ ಚೆಂಗಟಾ, ಜೈ ಭವಾನಿ ತರುಣ ಸಂಘದ ವಸಂತ ರಾಠೋಡ, ಕೇಶವ ಚವ್ಹಾಣ, ಅರವಿಂದ ಚವ್ಹಾಣ, ಗಣೇಶ ರಾಠೋಡ,ಲೋಕೇಶ ಜಾಧವ, ಭೂಷಣ ಚವ್ಹಾಣ, ಸತೀಷ ಪವಾರ,ರಮೇಶ ರಾಠೋಡ ಇತರರಿ ಇದ್ದರು.