ಸುರಪುರ: ಸುರಪುರ ತಾಲೂಕು ವೀರಶೈವ ಬಣಗಾರ ಸಮಾಜದ ವತಿಯಿಂದ ಈ ದಿನ ಅಂದರೆ ಭಾನುವಾರ ಬೆಳಿಗ್ಗೆ ರಂಗಪೇಟೆಯ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಸಮಾಜದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಿವಲಿಂಗಪ್ಪ ಸುರಪುರ ಅವರು ವಹಿಸಿದ್ದರು.
ನೂತನ ಪದಾಧಿಕಾರಿಗಳು: ಗೌರವ ಅಧ್ಯಕ್ಷರಾಗಿ ಶಂಕ್ರಪ್ಪ ಬಣಗಾರ್, ಅಧ್ಯಕ್ಷರಾಗಿ ಶಿವಲಿಂಗಪ್ಪ ಸುರಪುರ, ಉಪಾಧ್ಯಕ್ಷರಾಗಿ ರಮೇಶ್ ಶಿರಗೋಜಿ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಮಂಡಾ, ಖಜಾಂಚಿಯಾಗಿ ಸುರೇಶ್ ಖಾದಿ, ಹಾಗೂ ಸದಸ್ಯರಾಗಿ ಗುರುಲಿಂಗಪ್ಪ ಖಾದಿ, ಚಂದ್ರಶೇಖರ್ ಮಸ್ಕಿ, ಸಿದ್ದಪ್ಪ ಕೋಲ್ಕುಂದಿ ಲಕ್ಷ್ಮಿಪುರ, ಸುರೇಶ್ ಚಂದ್ರಕಾಂತ್ ಖಾದಿ, ಸಂತೋಷ್ ಕುಮಾರ ಬಣಗಾರ್, ನಾಗರಾಜ್ ಎಸ್. ಬಣಗಾರ ರುಕ್ಮಾಪುರ, ಶಿವಕುಮಾರ್ ಖಾದಿ, ಪ್ರಕಾಶ್ ಬಣಗಾರ್ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಸಮಾಜದ ಗೌರವ ಸಲಹೆಗಾರರನ್ನಾಗಿ ಸುಭಾಷ್ ಬಣಗಾರ ಅವರನ್ನು ಆಯ್ಕೆ ಮಾಡಲಾಯಿತು.
ಎಲ್ಲರೂ ಸೇರಿ ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಗೆ ನಿರ್ಧರಿಸಿದರು. ಈ ಸಂದರ್ಭದಲ್ಲಿ ಕಾಶಿನಾಥ್ ಶಿರಗೋಜಿ, ಶಂಕರ್ ಚಿಂಚೋಳಿ, ನಿತೀಶ್ ಶಿರಗೋಜಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಸಂತಾಪ: ಸಭೆಯ ಆರಂಭದಲ್ಲಿ ಶನಿವಾರ ನಿಧನರಾದ ಕಲಬುರಗಿ ಜಿಲ್ಲಾ ಬಣಗಾರ ಸಮಾಜದ ಮಾಜಿ ಅಧ್ಯಕ್ಷ ಅಶೋಕ ದೊಡ್ಡಮನಿ ಅವರಿಗೆ ಸಂತಾಪ ಸೂಚಿಸಿ, ಒಂದು ನಿಮಿಷ ಮೌನಾಚರಿಸಲಾಯಿತು.