ಶಾಂತಿಯುತವಾಗಿ ಸಾಗಿದ RSS ಪಥಸಂಚಲನ, ಈದ್ ಮಿಲಾದ್ ಜುಲೂಸ್

0
130

ಕಲಬುರಗಿ: ವಿಜಯ ದಶಮಿ ನಿಮಿತ್ತ ಆರ್.ಎಸ್ ಎಸ್ ಪಥಸಂಚಲನ ಮತ್ತು ಈದ್ ಎ ಮಿಲಾದ ಉನ್ ನಬಿ 43ನೇ ಜುಲೂಸ್ ಪೊಲೀಸರ ಬೀಗಿ ಬಂದೋಬಸ್ತ್ ನಲ್ಲಿ ಶಾಂತಿಯುತವಾಗಿ ಕಲಬುರಗಿ ನಗರದಲ್ಲಿ ಜರುಗಿತು.

ಭಾನುವಾರ ಆರ್.ಎಸ್.ಎಸ್ ಸಂಘಟನೆ ವಿಜಯ ದಶಮಿ ನಿಮಿತ್ತ ಕಲಬುರಗಿ ನಗರದಲ್ಲಿ ಪಥಸಂಚಲನ ಹಮ್ಮಿಕೊಂಡಿತ್ತು. ಇನ್ನೊಂದೆಡೆ 12 ರಬಿಲ್ ಅವಲ್ ನಿಮಿತ್ತ ಪ್ರವಾದಿ ಜನ್ಮದಿನದ ನಿಮಿತ್ತ ಈದ್ ಎ ಮಿಲಾದ್ ಉನ್ ನಬಿ ಪ್ರಯುಕ್ತ ನಗರದಲ್ಲಿ 43ನೇ ಜುಲೂಸ್ ನ್ನು ಮರ್ಕಜೆ ಕಮಿಟಿ ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಮಧ್ಯಹ್ನಾ ಆರ್.ಎಸ್.ಎಸ್ ಹಮ್ಮಿಕೊಂಡಿರುವ ಪಥಸಂಚಲನದ ಬಹುಮನಿ ಕೋಟೆಯಿಂದ ಪ್ರಾರಂಭವಾಗಿ ಲೋಹಾರ್ ಗಲ್ಲಿ, ಕಪಡಾ ಬಜಾರ್, ಟ್ರಾಫೀಕ್ ಪೆÇಲೀಸ್ ಠಾಣೆ ಮಾರ್ಗವಾಗಿ ರೂಟ್ ಮ್ಯಾಪ್ ಪೆÇಲೀಸರು ಹಾಕಿ ಕೊಟ್ಟಂತೆ ಅದೇ ಮಾರ್ಗವಾಗಿ ಸಂಚರಿಸಿ ಮುಕ್ತಾಯಗೊಂಡಿತು.

ಮರಕಜ್ ಸೀರತ್ ಕಮ್ಮಿಟಿಯಿಂದ ಹಮ್ಮಿಕೊಳ್ಳಲಾದ ಈದ್ ಮಿಲಾದ್ ಜುಲೂಸ್ ಗೆ ಸಂಜೆ ವೇಳೆ ನಗರದ ಮುಸ್ಲಿಂ ಚೌಕ್ ಪ್ರದೇಶದ  ಚಾಚಾ ಹೋಟಲ್ ನಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ಪಿಠಾಧಿಪತಿಗಳ ಹಿರಿಯ ಪುತ್ರರಾದ ಹಜರತ್ ಸೈಯದ್ ಶಾ ಅಲಿ ಉಲ್ಲಾಹ ಹುಸೇನಿ ಜುಲೂಸ್ ಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮರಕಜ್ ಕಮ್ಮಿಟಿಯ  ಜಿಲ್ಲಾ ಅಧ್ಯಕ್ಷ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಪ್ರವಾದಿ ಮೊಹ್ಮದ (ಸ.ಅ) ಅವರ ಸಂದೇಶ ಈದ್ ಎ ಮಿಲಾದ್ ಉನ್ ನಬಿ ವಿಶೇಷತೆಯನ್ನು ಸಾರ್ವಜನಿಕರಿಗೆ ತಿಳಿಸಿದರು. ಈ ವೇಳೆ ದಿವಂಗತ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಅವರು ಎಲ್ಲಾ ಮುಸ್ಲಿಮರಿಗೆ ಈದ್ ಮಿಲಾದ್ನುಬಿ ಶುಭಾಶಯಗಳನ್ನು ಕೋರಿದರು, ಅನ್ವರ್ ಉಲ್ ಹಕ್ ಮೋತಿ ಸೇಠ್, ಫರಾಜುಲ್ ಇಸ್ಲಾಂ ಸಹ ಉದ್ದೇಶಿಸಿ ಮಾತನಾಡಿದರು. ಡಾ ಮುಸ್ತಫಾ ಅಲ್ ಹುಸೇನಿ, ಅಬ್ದುಲ್ ರಹೀಂ ಮಿರ್ಚಿ, ಖದೀರ್ ಚೋಂಗೆ, ವಹಾಜ್ ಬಾಬಾ, ಅಹ್ಮರ್ ಇಸ್ಲಾಂ, ಲಾಲ್ ಅಹಮದ್, ಇಫ್ತಾಲ್ ಅಲಿ, ಮಝರ್ ಖಾನ್ ಮತ್ತು ಇತರ ಮರ್ಕಝಿ ಸೀರತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೆರವಣಿಗೆಯು ಮುಸ್ಲಿಂ ಚೌಕ್‌ನಿಂದ ಪ್ರಾರಂಭವಾಗಿ ಮಿಜಗೋರಿ, ಗುಂಜ್, ಮಾರ್ಗಮ್ಮ ದೇವಸ್ಥಾನ, ಹುಮ್ನಾಬಾದ್ ಬೇಸ್, ಹಳೆ ಚೌಕ್ ಪೊಲೀಸ್ ಠಾಣೆ, ಮೆಹಬಸ್ ಮಸೀದಿ, ಚಪ್ಪಲ್ ಬಜಾರ್, ಸರಾಫ್ ಬಜಾರ್, ಗಣೇಶ್ ಮೂಲಕ ನ್ಯಾಷನಲ್ ಕಾಲೇಜು ವೃತ್ತದಲ್ಲಿ ಕೊನೆಗೊಂಡಿತು. ಮಂದಿರ್, ಬಹಮನಿ ಸರ್ಕಲ್, ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಒಟ್ಟುಗೂಡಿದರು ಮತ್ತು ದಾರುದ್ ಶರೀಫ್ ಮತ್ತು ನಾಥ್ ಷರೀಫ್ ಓದುವ ಮೂಲಕ ಪ್ರವಾದಿ ಮೊಹಮ್ಮದ್ (ಸ) ಅವರ ಜನ್ಮದಿನವನ್ನು ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here