ಕೊಳಚೆ ನಿರ್ಮೂಲನೆ ಮಂಡಳಿ ಮನೆಗಳ ನಿರ್ಮಾಣಕ್ಕೆ ವಿರೋಧ

0
5
  • 95ರಲ್ಲಿ ಹಕ್ಕು ಪತ್ರ ನೀಡಿದವರಿಗೆ ಮೊದಲು ನಿವೇಶನ ಕೊಡಿ-ರಾಜಾ ಪಿಡ್ಡ ನಾಯಕ (ತಾತಾ)

ಸುರಪುರ: 1995ರಲ್ಲಿ ಸರಕಾರದ ವಿವಿಧ ಆಶ್ರಯ ಯೋಜನೆಗಳ ಅಡಿಯಲ್ಲಿ 197 ಫಲಾನುಭವಿಗಳಿಗೆ ನೀಡಿದ್ದ ನಿವೇಶನಗಳಿಗಾಗಿ ಕಾಯ್ದಿರಿಸಲಾಗಿರುವ ಜಾಗೆಯಲ್ಲಿ ಈಗ ಕೊಳಚೆ ನಿರ್ಮೂಲನಾ ಮಂಡಳಿಯ(ಸ್ಲಂ ಬೋರ್ಡ) ವತಿಯಿಂದ ಮನೆಗಳ ನಿರ್ಮಾಣಕ್ಕೆ ಮುಂದಾಗಿರುವುದ ಸರಿಯಲ್ಲ, ಕೂಡಲೇ ಮನೆಗಳ ನಿರ್ಮಾಣ ಕೆಲಸವನ್ನು ಸ್ಥಗಿತಗೊಳಿಸಬೇಕು ಮತ್ತು ಕಳೆದ 27ವರ್ಷಗಳಿಂದ ನಿವೇಶನಕ್ಕಾಗಿ ಕಾಯ್ದು ಕುಳಿತಿರುವ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕೈಗೊಳ್ಳುವಂತೆ ನಗರಸಭೆಯ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ(ತಾತಾ) ಸೇರಿ ವಿವಿಧ ಕಾಂಗ್ರೆಸ್ ಸದಸ್ಯರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದರು.

ಸೋಮವಾರ ನಗರದ ಸತ್ಯಂಪೇಟ ಬಳಿ ಇರುವ 1995ರಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳ ಸರ್ವೇ ನಂಬರ 186ರ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಸಂದರ್ಭದಲ್ಲಿ ಎಲ್ಲಾ ಸದಸ್ಯರು ನಗರಸಭೆ ಸೇರಿದ ಈ ಜಾಗೆಯಲ್ಲಿ ನಗರಸಭೆಯ ಅನುಮತಿ ಇಲ್ಲದೇ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸುತ್ತಿರುವುದು ಸರಿಯಲ್ಲ ನಗರಸಭೆಗೆ ಸಂಬಂಧಿಸಿದ ಈ ಜಾಗೆಯಲ್ಲಿ 1995ರಲ್ಲಿ ಮಂಜೂರಿಗೊಂಡಿರುವ 197 ಫಲಾನುಭವಿಗಳಿಗೆ ಮೊದಲು ನಿವೇಶನವನ್ನು ಹಂಚಿಕೆ ಮಾಡಬೇಕಾಗಿತ್ತು ಏಕೆ ಮಾಡುತ್ತಿಲ್ಲ ಪೌರಾಯುಕ್ತರನ್ನು ಪ್ರಶ್ನಿಸಿದರು.

Contact Your\'s Advertisement; 9902492681

1995ರಲ್ಲಿ ಇದೇ ಸರ್ವೇ ನಂಬರನಲ್ಲಿ ನಿವೇಶನ ಸಂಖ್ಯೆಗಳನ್ನು ನಮೂದಿಸಿ 20*30 ಅಡಿ ಅಳತೆಯ ನಿವೇಶನವನ್ನು ರಂಗಂಪೇಟ-ತಿಮ್ಮಾಪುರ ಮನೆ ಇಲ್ಲದ ಬಡ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು ಮನೆಯಲ್ಲಿ ಹಕ್ಕುಪತ್ರ ಇಟ್ಟುಕೊಂಡು ಕುಳಿತಿರುವ ಫಲಾನುಭವಿಗಳಿಗೆ ತಮ್ಮ ಜಾಗೆ ಎಲ್ಲಿದೆ ಎಂದು ಕಳೆದ 27ವರ್ಷಗಳಿಂದ ಗೊತ್ತಿಲ್ಲ ನಗರಸಭೆ ಅಧಿಕಾರಿಗಳು
ಇಲ್ಲಿಯವರೆಗೂ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೊಳಿಸಿಲ್ಲ ಮೊದಲು ಹಿಂದಿನ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ನೀಡಬೇಕು ನಂತರ ಉಳಿದ ಜಾಗೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳನ್ನು ನಿರ್ಮಿಸಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿರವರು ಕೊಳಚೆ ನಿರ್ಮೂಲನಾ ಮಂಡಳಿಯವರು ನಿರ್ಮಿಸುತ್ತಿರುವ ಮನೆಗಳಿಗೆ ನಗರ ಯೋಜನಾ ಪ್ರಾಧಿಕಾರ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು ಇದೇ ಸರ್ವೆ ನಂಬರನ ಈಗ ನಿರ್ಮಿಸುತ್ತಿರುವ ಮನೆಗಳ ಹಿಂದುಗಡೆ ಇರುವ ಉಳಿದ ಜಾಗೆಯಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ನೀಡಲಾಗುವುದು ಎಂದು ಹೇಳಿದರು.

ಅದಕ್ಕೆ ನಗರಸಭೆ ಕಾಂಗ್ರೆಸ್ ಸದಸ್ಯರು ಒಪ್ಪದೇ ಆಶ್ರಯ ಯೋಜನೆಯ ಬಡ ಫಲಾನುಭವಿಗಳಿಗೆ ಹಿಂದುಗಡೆ ನಿವೇಶನ ನೀಡದೇ ಈ ಮೊದಲು ಹೇಳುತ್ತಾ ಬಂದಿರುವ ಜಾಗೆಯಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿದರು ಕೂಡಲೇ ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಬೇಕು ಹಾಗೂ 1995ರ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ನೀಡಬೇಕು ಒಂದು ವೇಳೆ ನಿರ್ಲಕ್ಷ್ಯತನ ಮುಂದುವರೆಸಿದಲ್ಲಿ ಎಲ್ಲಾ ಫಲಾನುಭವಿಗಳೊಂದಿಗೆ ನಗರಸಭೆ ಕಚೇರಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಾಸೀರ್ ಅಹ್ಮದ ಕುಂಡಾಲೆ, ಖಮರುದ್ದಿನ್, ಮಹಿಬೂಬಸಾಬ ಹಾಗೂ ಮುಖಂಡರಾದ ಘಾಳೆಪ್ಪ ಪೂಜಾರಿ, ಸಿದ್ರಾಮ ಎಲಿಗಾರ, ಶಕೀಲ್ ಅಹ್ಮದ, ಮಹ್ಮದ ಜಹೀರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here