ಸುರಪುರ: ನಗರದ ರಂಗಂಪೇಟೆಯಲ್ಲಿ ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ ಜನ್ಮ ದಿನವಾದ ಈದ್ ಮಿಲದ್ ಉನ್ ನಬಿ ಹಬ್ಬವನ್ನು ಮುಸ್ಲಿಂ ಸಮುದಾಯದ ಬಾಂಧವರು ಈದ್ ಸಂಭ್ರಮ ಸಡಗರದಿಂದ ಆಚರಿಸಿದರು, ಕಂಚಗಾರ ಮೊಹಲ್ಲಾದಿಂದ ಮಂಗಲ್ ಬಜಾಜ್, ದೊಡ್ಡ ಮಜೀದ್, ಟಿಪ್ಪು ಸುಲ್ತಾನ ಚೌಕ್ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಅದ್ದೂರಿ ಮೆರವಣಿಗೆ ನಡೆಯಿತು.
ಜುಲೂಸ್ ಎ ಈದ್ ಮಿಲಾದ್ ಉನ್ ನಬಿ ಸಮಾಜ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಮೆರವಣಿಗೆಗೆ(ಜೂಲೂಸ್)ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ ನಗನೂರಿ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯರಿಗೆ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ಸಾರಲು ಅಲ್ಲಾಹನ ಸಂದೇಶ ವಾಹಕರಾಗಿ ಭೂಮಿಗೆ ಬಂದ ಪ್ರವಾದಿ ಮೊಹಮ್ಮದ ಜನ್ಮ ದಿನವನ್ನು ಈದ್ ಮಿಲಾದ್ ಎಂದು ಆಚರಿಸಲಾಗುವುದು ಕುರಾನ್ ಸಂದೇಶಗಳ ಪುನ: ಸ್ಮರಣೆ ಹಬ್ಬದ ಆಚರಣೆಯ ಪ್ರಮುಖ ಉದ್ದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಹ್ಮದ ಹುಸೇನ ಬಾಬು ಮಿಯಾ, ಉಪಾಧ್ಯಕ್ಷ ಇಕ್ಬಾಲ್ ಅಹ್ಮದ ಜಮೇದಾರ, ಕಾರ್ಯದರ್ಶಿ ಮೆಹೆರಾಜಸಾಬ ಬಿಸ್ತಿ, ನಗರಸಭೆ ಮಾಜಿ ಅಧ್ಯಕ್ಷ ಶೇಖ ಮಹಿಬೂಬ ಒಂಟಿ,ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ್, ಉಸ್ತಾದ ವಜಾಹತ್ ಹುಸೇನ, ನಗರಸಭೆ ಸದಸ್ಯರಾದ ನಾಸೀರ್ ಹುಸೇನ ಕುಂಡಾಲೆ, ಖಮರುದ್ದಿನ್,ಮಲ್ಕಪ್ಪ ಗೌಡ,ಮಲ್ಲು ಬಿಲ್ಲವ್,ಮಹ್ಮದ್ ಗೌಸ್ ಕಿಣ್ಣಿ,ಲಿಯಾಖತ್ ಹುಸೇನ್,ಜಹೀರ್ ಅಹ್ಮದ್,ಮಲ್ಲೇಶಿ,ಧರ್ಮರಾಜ ಮಡಿವಾಳ,ಸಿದ್ರಾಮ ಎಲಿಗಾರ,ಗಾಳೆಪ್ಪ ಹಾದಿಮನಿ ಸೇರಿದಂತೆ ಮುಸ್ಲಿಂ ಸಮಾಜದ ಯುವಕರು ಹಾಗೂ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.