-
ಎಐಸಿಸಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಉಸ್ತುವಾರಿ ಶಾಸಕ ಶ್ರೀಧರ ಬಾಬು ಹೇಳಿಕೆ
ಕಲಬುರಗಿ: ಕಾಂಗ್ರೆಸ್‍ಯುವ ನಾಯಕರಾಹುಲ್‍ಗಾಂಧಿ ನೇತೃತ್ವದಲ್ಲಿಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪಾದಯಾತ್ರೆಯು ಈಗಾಗಲೇ ಕರ್ನಾಟಕರಾಜ್ಯವನ್ನು ಪ್ರವೇಶಿಸಿದ್ದು, ಅಕ್ಟೋಬರ್ 15ರಂದು ಬಳ್ಳಾರಿ ನಗರದಲ್ಲಿ ಬೃಹತ್ ಸಮಾವೇಶ ನಡೆಯಲಿದೆಎಂದು ಎಐಸಿಸಿ ಕಾರ್ಯದರ್ಶಿ, ಕಲ್ಯಾಣಕರ್ನಾಟಕಉಸ್ತುವಾರಿ, ಶಾಸಕ ಶ್ರೀಧರ ಬಾಬು ತಿಳಿಸಿದರು.
ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಪಕ್ಷದ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಅಭಿಮನಿಗಳು ಹಾಗೂ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬಳ್ಳಾರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ನಿರುದ್ಯೋಗ ಸೇರಿದಂತೆದೇಶದ ಅನೇಕ ಜ್ವಲಂತ ಸಮಸ್ಯಗಳ ಕುರಿತು ಮಹತ್ವದಚರ್ಚೆ ನಡೆಯಲಿದ್ದು, ಈ ಸಮಾವೇಶದಲ್ಲಿ ಸುಮಾರು 5 ಲಕ್ಷಜನ ಸೇರುವ ಸಾಧ್ಯತೆಯಿದೆ. ರಾಜ್ಯ ಮತ್ತುಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧಜನರುಧ್ವನಿ ಎತ್ತುವ ಮೂಲಕ ಸರ್ಕಾರದಕಣ್ಣುತೆರೆಸುವ ಕೆಲಸ ಮಾಡಲಿದ್ದಾರೆಎಂದುಅವರು ವಿವರಿಸಿದರು.
ರಾಹುಲ್‍ಗಾಂಧಿ ನೇತೃತ್ವದಲ್ಲಿ ಹೊರಟಿರುವ ಭಾರತ್‍ಜೋಡೊಯಾತ್ರೆಯಲ್ಲಿ ಪಕ್ಷಭೇದ ಮರೆತುಜನ ಸೇರುತ್ತಿದ್ದಾರೆ. ಎಲ್ಲಕಡೆಅಭೂತಪೂರ್ವ ಬೆಂಬಲ ಸಿಗುತ್ತಿದೆ.ಬಿಜೆಪಿಯ ದುರಾಡಳಿತದಿಂದ ಅಲ್ಪಸಂಖ್ಯಾತರಿಗೆ, ಯುವಕರಿಗೆ, ಮಹಿಳೆಯರಿಗೆ, ರೈತರಿಗೆ ಹಾಗೂ ಮಧ್ಯಮ ವರ್ಗದಜನರಿಗೆಅಭದ್ರತೆಕಾಡುತ್ತಿದ್ದು, ನಾವು ನಿಮ್ಮೊಂದಿಗಿದ್ದೇವೆಎಂದುಜನತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. -ಡಾ. ಶರಣಪ್ರಕಾಶ ಪಾಟೀಲ, ಮಾಜಿ ಸಚಿವ.
ನಂತರಆಂಧ್ರ ಪ್ರದೇಶ ಪ್ರವೇಶಿಸಿ 21ರಂದು ಮಂತ್ರಾಲಯದ ಮೂಲಕ ಯರಗೇರಾದಲ್ಲಿ ವಾಸ್ತವ್ಯ ಹೂಡಲಿದೆ.22ರಂದು ರಾಯಚೂರು ನಗರದ ಮೂಲಕ ತೆಲಂಗಾಣ ಪ್ರವೇಶ ಮಾಡಲಿದೆಎಂದುಅವರು ತಿಳಿಸಿದರು.
ಐಕ್ಯತೆ, ಕೋಮು ಸೌಹಾರ್ದತೆ, ಸಂವಿಧಾನರಕ್ಷಣೆ ಮಾಡುವುದಕ್ಕಾಗಿ ಈ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವುದು ಪಾದಯಾತ್ರೆಯ ಮುಖ್ಯಉದ್ದೇಶವಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದವರು ಭಾರತ್‍ಜೋಡೋಯಾತ್ರಾಯ್ಯಾಪ್‍ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ತಾವುಇದ್ದಲ್ಲಿಂದಲೇಕಾರ್ಯಕ್ರಮವನ್ನು ವೀಕ್ಷಿಸಬಹುದಾದತಂತ್ರಾಶಅಭಿವೃದ್ಧಿ ಪಡಿಸಲಾಗಿದೆಎಂದು ಹೇಳಿದರು.
ಕಾಂಗ್ರೆಸ್‍ಜಿಲ್ಲಾ ಸಮಿತಿಅಧ್ಯಕ್ಷಜಗದೇವಗುತ್ತೇದಾರ, ಶಾಸಕಿ ಖನೀಜ್ ಫಾತಿಮಾ, ಮಾಜಿ ಸಚಿವಡಾ.ಶರಣಪ್ರಕಾಶ ಪಾಟೀಲ, ಮಾಜಿಎಂಎಲ್ಸಿತಿಪ್ಪಣ್ಣಪ್ಪಕಮಕನೂರ, ಮಾಜಿ ಶಾಸಕ ಬಿ.ಆರ್.ಪಾಟೀಲ, ಮುಖಂಡರಾದ ಶರಣು ಮೋದಿ, ಸುಭಾಷರಾಠೋಡ್, ನೀಲಕಂಠ ಮೂಲಗೆ, ಸಂತೋಷ ಬಿಲಗುಂದಿ, ಹುಲೆಗೆಪ್ಪಕನಕಗಿರಿ ಇತರರಿದ್ದರು.