ಬೇಡೆಕೆಗಳ ಈಡೇರಿಸಲು ಆಗ್ರಹಿಸಿ ಜೆಸ್ಕಾಂ ಕಚೇರಿ ಮುಂದೆ ರಾಜ್ಯ ರೈತ ಸಂಘ ಪ್ರತಿಭಟನೆ

0
12

ಸುರಪುರ: ರೈತರ ವಿವಿಧ ಬೇಡೆಕೆಗಳ ಈಡೇರಿಸಲು ಆಗ್ರಹಿಸಿ ನಗರದ ರಂಗಂಪೇಟೆಯಲ್ಲಿನ ಜೆಸ್ಕಾಂ ಇಲಾಖೆಯ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಕೆ.ಎಸ್ ಪುಟ್ಟಣ್ಣಯ್ಯ ಬಣದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕ ಮುಖಂಡರು ಮಾತನಾಡಿ,ಇಂದು ಸರಕಾರ ಜಾರಿಗೊಳಿಸಲು ಹೊರಟಿರುವ ವಿದ್ಯುತ್ ಕಾಯ್ದೆಗೆ ನಮ್ಮ ಸಂಪೂರ್ಣ ವಿರೋಧವಿದೆ,ಕೂಡಲೇ ಸರಕಾರ ವಿದ್ಯುತ್ ಕಾಯ್ದೆ ರದ್ದುಗೊಳಿಸುವ ಜೊತೆಗೆ ರೈತರ ಪಂಪಸೆಟ್‍ಗಳಿಗೆ ಮೀಟರ್ ಅಳವಡಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಅಲ್ಲದೆ ಕಲಬುರ್ಗಿ ಯಾದಗಿರಿ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ಕಾರ್ಯಾದರ್ಶಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು,ಅಕ್ರಮ ಸಕ್ರಮ ಯೋಜನೆಗಳ ಅಡಿಯಲ್ಲಿ ನೊಂದಣಿಯಾಗಿರುವ ಎಲ್ಲಾ ಪ್ರಕರಣಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು,ಹವಾಮಾನ ವೈಪರಿತ್ಯದಿಂದ ರಾಜ್ಯಾದ್ಯಂತ ಬೆಳೆ ನಷ್ಟವಾಗಿದ್ದುಅವೈಜ್ಞಾನಿಕ ಪರಿಹಾರ ಪದ್ಧತಿ ಕೈಬಿಟ್ಟು ವಾಸ್ತವ ವೆಚ್ಚ ಆಧರಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು,ವಾರದ ಹಾಗೂ ನಿತ್ಯದ ಸಂತೆಯಲ್ಲಿ ರೈತರ ಬೆಳೆಗಳಿಗೆ ಸುಂಕ ವಸೂಲಾತಿಯನ್ನು ನಿಲ್ಲಿಸಬೇಕು,ನಗರದಲ್ಲಿ ಜಾನುವಾರಗಳ ಸಂತೆಗಾಗಿ ನೂತನ ಸ್ಥಳ ಒದಗಿಸಬೇಕು ಎಂದು ಒತ್ತಾಯಿಸುವುದರ ಜೊತೆಗೆ ಸ್ಥಳಿಯ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಸಮಸ್ಯೆಗಳಿಗೆ ಸ್ಪಂಧಿಸುವುದಿಲ್ಲ ಮತ್ತು ಕರೆಗಳನ್ನು ಸ್ವೀಕರಿಸುವುದಿಲ್ಲ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ವಿ.ಪಾಟೀಲ್,ಜಿಲ್ಲಾಧ್ಯಕ್ಷ ಶರಣು ಮಂದರವಾಡ,ಜಿ.ಪ್ರ.ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪುರ,ತಾಲೂಕು ಅಧ್ಯಕ್ಷ ಸಿದ್ದಣ್ಣ ಕುಂಬಾರಪೇಟೆ ಮುಖಂಡರಾದ ಅಮರನಾಥ ಹಯ್ಯಾಳ,ಶಾಂತಾ ಪೂಜಾರಿ,ಹಣಮಂತ ರುಕ್ಮಾಪುರ,ಚನ್ನಪ್ಪ ನರಸಿಂಗಪೇಟೆ,ಮಲ್ಲಣ್ಣ ಹುಬ್ಬಳ್ಳಿ,ರವಿ ಕುಂಬಾರ,ಭೀಮಣ್ಣ ಕುಂಬಾರ,ಚನ್ನಮಲ್ಲಿಕಾರ್ಜುನ ಗುಂಡಾನೂರ,ಮಲ್ಕಣ್ಣ ಚಿಂತಿ,ಕೃಷ್ಣರೆಡ್ಡಿ ,ಶಿವು ಹೂಗಾರ,ಮಕ್ತುಂ ಸಾಬ್,ಮಲ್ಲಿಕಾರ್ಜುನ ಚೊಕ್ಕ,ಶಿವು ಯಾದಗಿರಿ,ಹಣಮಂತ್ರಾಯ ಬಿಸೆಟ್ಟಿ,ವೀರಭದ್ರ,ರಾಘವೇಂದ್ರ,ಬಸವರಾಜ,ಹೈಯಾಳಪ್ಪ,ಶರಬಣ್ಣ ಜಾಲಹಳ್ಳಿ,ಚಾಂದಪಾಶ,ಮಲ್ಕಪ್ಪ ಶುಕ್ಲಾ,ಮಾಳಪ್ಪ ಪೂಜಾರಿ,ರಾಚಯ್ಯಸ್ವಾಮಿ ಹಿರೇಮಠ,ವೀರಭದ್ರಪ್ಪ,ಬೀರಪ್ಪ ಪೂಜಾರಿ,ಹಣಮಂತ್ರಾಯ ಬಡಿಗೇರ,ಸಣ್ಣ ಹಣಮಂತ,ರಾಜಪ್ಪ ಕೆಂಭಾವಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here