ಬಾದ್ಯಾಪುರ ಗ್ರಾಮದ ಅನೇಕರು ಬಿಜೆಪಿ ತೊರೆದು ಮಾಜಿ ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ

0
36

ಸುರಪುರ: ಕರೊನಾ ಮಹಾಮಾರಿಯಿಂದಾಗಿ ಬಹಳಷ್ಟು ಜನರು ಸಂಕಷ್ಟದಲ್ಲಿದ್ದಾರೆ ಜನರು ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇತಂಹ ಸಮಯದಲ್ಲಿ ಆಡಳಿತದಲ್ಲಿರುವವರು ಜನರ ಕಷ್ಟಕ್ಕೆ ಆಗಬೇಕಾಗಿತ್ತು ಆದರೆ ತಮ್ಮ ವೈಯಕ್ತಿಕ ಕೆಲಸಕ್ಕೆ ಬಡಿದಾಡುತ್ತಿದ್ದಾರೆ ಇದು ಖಂಡನೀಯವಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಬಾದ್ಯಾಪುರ ಗ್ರಾಮದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿ,ಸದ್ಯ ರಾಜ್ಯದಲ್ಲಿ ಕೊರೊನಾ ನೆರೆಯಂತಹ ಅನೇಕ ಸಮಸ್ಯೆಗಳು ಜನರನ್ನು ಹಯರಾಣಾಗಿಸಿವೆ ಆದರೆ ಸರಕಾರ ಮಾತ್ರ ಜನರ ಸಮಸ್ಯೆಯನ್ನು ಮರೆತು ಕೇವಲ ತಮ್ಮ ರಾಜಕಾರಣದಲ್ಲಿ ತೊಡಗಿದೆ. ಜನರು ಉದ್ಯೋಗವಿಲ್ಲದೆ ಜೀವನ ನಡೆಸಲು ಕಷ್ಟಪಡುವಂತಾಗಿ ಸರಕಾರದ ವಿರುಧ್ಧ ರೋಸಿ ಹೋಗಿದ್ದಾರೆ,ಇಂದು ತಾವೆಲ್ಲರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಿರಿ ಇಂದಿನಿಂದ ನೀವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸಮಾಡಿ ನಿಮ್ಮೊಂದಿಗೆ ನಾನು ಮತ್ತು ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಮಾತನಾಡಿ, ಬಿಜೆಪಿ ಪಕ್ಷದ ಸುಳ್ಳ ಆಶ್ವಾಸನೆಗಳಿಗೆ ಹಾಗೂ ಜಾತಿ-ಜಾತಿಗಳಿಗೆ ಜಗಳ ಹಚ್ಚುವ ಕೆಲಸಕ್ಕೆ ಬೇಸತ್ತು, ಸರ್ಕಾರದ ದುರಾಡಳಿತದಿಂದ ಮನನೊಂದು ಹಾಗು ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಇವರ ಆಡಳಿತಾವಧಿಯ ಅಭಿವೃದ್ಧಿಕಾರ್ಯಗಳನ್ನು ಮೇಚ್ಚಿ ಇಂದು ಕಾಂಗ್ರೆಸ್ ಸೇಸುತ್ತಿದ್ದಾರೆ ಎಂದರು.

ದಾನಪ್ಪ ಲಕ್ಷ್ಮೀಪುರ ಮತ್ತು ಹಣಮಂತ ಕಟ್ಟಿಮನಿ ದೇವಿಂದ್ರಪ್ಪ ಚಿಕ್ಕನಹಳ್ಳಿ ಇವರ ಸಮ್ಮುಖದಲ್ಲಿ ಜೆಟ್ಟಪ್ಪ ಅಂಬಣ್ಣ ಬಡಿಗೇರಾ, ಯಲ್ಲಪ್ಪ್ಪ ಕುಚಬಾಳ, ದುರ್ಗಪ್ಪ ಕಟ್ಟಿಮನಿ, ಅಂಬ್ರೀಶ ಕುಚಬಾಳ, ಮಲ್ಲಪ್ಪ ಕಟ್ಟಿಮನಿ, ಭೀಮಣ್ಣ ಕಟ್ಟಿಮನಿ, ಲಕ್ಷ್ಮೀಬಾಯಿ , ಜೆಟ್ಟಪ್ಪ, ಭೀಮಬಾಯಿ ಬಡಿಗೇರಾ, ಲಕ್ಷ್ಮಿ , ಮಲವ್ವ , ಹಣಮವ್ವ, ಬಸಮ್ಮ್ಪ ಕುಚಬಾಳ, ಯಲ್ಲವ್ವ, ಅಯ್ಯಮ್ಮ, ತಾಯಮ್ಮ, ಮಲ್ಲಮ್ಮ ಅಗತಿರ್ಥ, ಬಾಗಮ್ಮ ಸೇರಿದಂತೆ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಯಂಕೋಬ ಬಾದ್ಯಾಪುರ, ಹೈಯಾಳಪ್ಪ ಜಾಲಿಬೆಂಚಿ, ಮರೆಣ್ಣ ದೇವಾಪುರ, ಮಾರ್ಥಂಡಪ್ಪ ಕಟ್ಟಿಮನಿ ದೇವರಗೋನಾಲ, ಗ್ರಾಪಂ ಮಾಜಿ ಅಧ್ಯಕ್ಷ ದೊಡ್ಡಬಸಣ್ಣ ದೇವಾಪುರ, ದೇವಣ್ಣ ಕುರಿ,ನಾಗಪ್ಪ ಮಗ್ಗದ್, ಮಾರ್ಥಂಡರಾಯ ಮಗ್ಗದ, ಭೀಮಣ್ಣ ಕೊಡಬನಳ್ಳಿ, ಯಂಕಪ್ಪ ದೊರಿ, ಮಾನಪ್ಪ ಬಾಡದ, ಶಿವಗುಂಡಪ್ಪ ಜಾಲಹಳ್ಳಿ ಇನ್ನಿತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here