ಸುರಪುರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಪಾದಯಾತ್ರೆಯ ಅಂಗವಾಗಿ ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‍ನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಭಾರತ ದೇಶದಲ್ಲಿಯೇ ಇಂದು ಬಿಜೆಪಿಯಿಂದಾಗಿ ಜನರು ನೆಮ್ಮದಿಯಿಂದ ಇದಂತಾಗಿದೆ,ಒಂದೆಡೆ ಬೆಲೆ ಏರಿಕೆ,ಮತ್ತೊಂದೆಡೆ ನಿರುದ್ಯೋಗ ಸವiಸ್ಯೆ,ರಾಜ್ಯದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ ಇವಲ್ಲವುಗಳಿಂದ ಜನರು ನಿತ್ಯವು ಈ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಇಂತಹ ಎಲ್ಲದಕ್ಕೂ ಅಂತ್ಯ ಕಾಣಬೇಕಾದರೆ ಜನರು ಕಾಂಗ್ರೆಸ್ ಸರಕಾರ ಬೇಕು ಎಂದು ಬಯಸುತ್ತಿದ್ಧಾರೆ.ಆದ್ದರಿಂದ ಇಂದು ದೇಶದಲ್ಲಿನ ಜನರಲ್ಲಿ ಈ ಸರಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಯನ್ನು ಜನಜಾಗೃತಿ ಮೂಡಿಸಲು ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಆರಂಭಿಸಿರುವ ಭಾರತ ಜೋಡೋ ಪಾದಯಾತ್ರೆಗೆ ನಾವೆಲ್ಲರು ಬೆಂಬಲಿಸಬೇಕಿದೆ,ಜೊತೆಗೆ ನಮ್ಮ ಕ್ಷೇತ್ರದಲ್ಲಿಯೂ ನಡೆಯುವ ಈ ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಮಾತನಾಡಿ,ಈಗಾಗಲೇ ಇಡೀ ದೇಶದ ಜನರಿಗೆ ಈ ಸರಕಾರ ಸಾಕಾಗಿದೆ,ಇದು ತೊಲಗಿದರೆ ಸಾಕು ಎನ್ನುವಂತಾಗಿದೆ,ಏಕೆಂದರೆ ಇಡೀ ದೇಶದ ಸರ್ವಜನರ ಹಿತ ಕಾಪಾಡುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಆರಿಸಿ ತರಲು ಜನರು ಮನಸ್ಸು ಮಾಡಿದ್ದಾರೆ.ಜೊತೆಗೆ ರಾಹುಲ್ ಗಾಂಧಿಯವರು ಕೂಡ ಇಂದು ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅವರ ಬಳಿಗೆ ಬಂದು ಅವರ ನೋವುಗಳನ್ನು ಕೇಳುವ ಕೆಲಸ ಮಾಡುತ್ತಿದ್ದಾರೆ.ಅಂತಹ ಜನ ನಾಯಕ ನಮಗೆ ಬೇಕಿದೆ,ಅವರನ್ನು ಬೆಂಬಲಿಸಬೇಕಿ.ಆದ್ದರಿಂದ ತಾವೆಲ್ಲರೂ ಈಗ ನಡೆಯುತ್ತಿರು ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಬಾಚಿಮಟ್ಟಿ,ಮಾನಪ್ಪ ಸೂಗುರು,ಅಹ್ಮದ್ ಪಠಾಣ್,ವೆಂಟಕೇಶ ಬೇಟೆಗಾರ ಸೇರಿದಂತೆ ಅನೇಕರು ಮಾತನಾಡಿದರು.ಸಭೆಯಲ್ಲಿ,ಮುಖಂಡರಾದ ರಾಜಾ ವೇಣುಗೋಪಾಲ ನಾಯಕ,ವಿಠ್ಠಲ್ ಯಾದವ್,ವೆಂಕೋಬ ಯಾದವ್,ಮಲ್ಲಣ್ಣ ಸಾಹುಕಾರ ಮುಧೋಳ,ಭಂಡಾರೆಪ್ಪ ನಾಟೇಕಾರ್,ರಮೇಶ ದೊರೆ ಆಲ್ದಾಳ,ರಾಜಾ ಪಿಡ್ಡನಾಯಕ (ತಾತಾ),ಸುವರ್ಣ ಎಲಿಗಾರ, ಭೀಮರಾಯ ಮೂಲಿಮನಿ,ಗುಂಡಪ್ಪ ಸೋಲಾಪುರ,ದೇವಿಂದ್ರ ಮುದನೂರ,ಅಬ್ದುಲ್ ಗಫೂರ ನಗನೂರಿ,ನಾಸೀರ ಕುಂಡಾಲೆ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.