ಅಫಜಲಪೂರ: ಮಾದಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
21

ಕಲಬುರಗಿ: ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಹಾಗೂ ಅಫಜಲಪೂರ ತಾಲೂಕಿನ ಮಾದಿಗ ಪರ ಎಲ್ಲ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಜರುಗಿತು.

ನ್ಯಾಯಮೂರ್ತಿ ಎ.ಜೆ. ಆಯೋಗದ ಪರಬ ಪ್ರಕಾರ ನ್ಯಾಯಮೂರ್ತಿಗಳು ಸಲ್ಲಿಸಿದ ವರದಿ ಸಂವಿಧಾನ ಬದ್ಧವಾದ ವರದಿ ನ್ಯಾಯ ಬದ್ದವಾದ ವರದಿ ಜಾತಿವಾರು ಜನಸಂಖ್ಯೆ ಅನುಗೂಣವಾಗಿ, ಮಾದಿಗರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಾಂಗದಲ್ಲಿ ಬಹುಸಂಖ್ಯಾತರಾಗಿರುತ್ತಾರೆಂಬ ವರದಿ ಎ.ಜೆ. ಸದಾಶಿವ ಅವರು ವೈಜ್ಞಾನಿಕವಾಗಿ ಈ ವರದಿಯನ್ನು ಮೀಸಲಾತಿಯಲ್ಲಿ ಒಳಮೀಸಲಾತಿ ಮಾದಿಗರಿಗೆ 6 % ಹೊಲೆಯ ಸಮುದಾಯಕ್ಕೆ 5 %, ಭೋವಿ ಬಂಜಾರ, ಕೊರಮಾ ಕೊರಚ 3 % ಇನ್ನಿತರ ಸಮುದಾಯಕ್ಕೆ 1 % ಇದೇ ಸದಾಶಿವ ಆಯೋಗದ ವರದಿ ಪ್ರಕಾರ ಯಾವುದೇ ಸಲಹೆ ಸಮಿತಿ ಕಾನೂನು ತಜ್ಞರ ಸಮಿತಿ ಇವರೆಲ್ಲರೂ ಒಪ್ಪಂತ ವರದಿ ಇದಾಗಿರುತ್ತದೆ. ಆದಕಾರಣಕ್ಕಾಗಿ ತಾವು ತಮ್ಮ ಸಮಯ ವಿಳಂಭ ಮಾಡದೇ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪರಿಶಿಷ್ಟ ಜಾತಿ ಹಿಂದೂ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಎಂದು ಅಫಜಲಪೂರ ದಂಡಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಹಸಿರು ಕ್ರಾಂತಿ ಹರಿಕಾರ, ಶೋಷಿತರ ನೇತ, ಉಕ್ಕಿನ ಮನುಷ್ಯ ದಲಿತರ ಉದ್ಧಾರಕರ, ಬಡವರ ಬಂಧು, ಭಾರತ ದೇಶದ ಉಪ ಪ್ರಧಾನಮಂತ್ರಿಯಾದ ಡಾ : ಬಾಬು ಜಗಜೀವನರಾಮ್ ಅವರ ಜಯಂತ್ಯೋತ್ಸವ ಎಪ್ರೀಲ್, 5 ರಂದು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಬೇಕು. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಡಾ : ಬಾಬು ಜಗಜೀವನರಾಮ್ ಅವರ ಭಾವಚಿತ್ರ ಹಾಕಬೇಕು. ಇದೇ ರೀತಿ ಡಾ : ಬಾಬು ಜಗಜೀವನರಾಮ್ ಅವರ ಜೀವನ ಚರಿತ್ರ ಪಠ್ಯ ಪುಸ್ತಕದಲ್ಲಿ ಅಳಡಿಸಬೇಕೆಂದು ಎಂದು ಆಗ್ರಹಿಸಿದರು.

ಡಾ : ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಅನುದಾನ ಹಾಗೂ ಸಹಾಯಧನ ಹಾಗೂ ವಿವಿಧ ಯೋಜನೆಗಳ ಗುರಿ ಕಡಿಮೆಯಾಗಿರುತ್ತವೆ. ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನಂದರೆ, ರಾಜ್ಯದಲ್ಲಿ ಮಾದಿಗ ಸಮಾಜದವರು ಹಾಗೂ ಮಾದಿಗ ಸಂಬಂಧಿತ ಸಮುದಾಯದವರು ಹೆಚ್ಚಿನ ರಾಜ್ಯದಲ್ಲಿ ಮಾದಿಗ ಸಮಾಜದವರು ಹೆಚ್ಚಿನ ಸಂಖ್ಯೆ ಇದ್ದಿರುತ್ತೇವೆ. ಆದ ಕಾರಣಕ್ಕಾಗಿ ಈ ನಿಗಮಕ್ಕೆ ಹೆಚ್ಚಿನ ಅನುದಾನ ಕೂಡಲೇ ಹೆಚ್ಚಳ ಮಾಡಬೇಕು. ಗುರಿಗಳು ತುಂಬಾ ಕಡಿಮೆ ನಿಗದಿಪಡಿಸಿರುತ್ತೀರಿ. ಜನಸಂಖ್ಯೆ ಹೆಚ್ಚು ಇರುವ ಕಾರಣಕ್ಕಾಗಿ ಪ್ರತಿ ತಾಲ್ಲೂಕಿಗೆ ಎಲ್ಲಾ ಯೋಜನೆಗಳಲ್ಲಿ 20 ಗುರಿ ನಿಗದಿಪಡಿಸಬೇಕು. ಅದೇ ರೀತಿ ನೇರಸಾಲದ ಅನುದಾನ ಎರಡು ಕಂತನ್ನು ರದ್ದುಪಡಿಸಿ ಒಂದೇ ಬಾರಿ ನೀಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಆದಿಜಾಂಭವ ಅಭಿವೃದ್ಧಿ ನಿಗಮಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ನಿಗಮದಲ್ಲಿ ಬರುವ ವಿವಿಧ ಯೋಜನೆಗಳ ಗುರಿಗಳನ್ನು ತೂಂಬಾ ಕಡಿಮೆ ಮಾಡಿರುತ್ತೀರಿ. ಆದಕಾರಣಕ್ಕಾಗಿ ಮಾದಿಗ ಸಮಾಜದವರು ಸವಲತ್ತು ಪಡೆಯಲು ವಂಚಿತರಾಗಿರುತ್ತಾರೆ. ಆದ ಕಾರಣಕ್ಕಾಗಿ ತಮ್ಮಲ್ಲಿ ಸಮಸ್ತ ಮಾದಿಗ ಸಮಾಜದ ವತಿಯಿಂದ ಮನವಿ ಮಾಡಿಕೊಳ್ಳುವುದೇನಂದರೆ, ಆದಿ ಜಾಂಭವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಅದೇ ರೀತಿ ಉದ್ಯಮಶೀಲತಾ (ಐ.ಎಸ್.ಬಿ.) ಐದು ಲಕ್ಷ ಸಹಾಯಧನ ಹಗೂ ಮೂರುವರೆ ಲಕ್ಷ ಸಹಾಯಧನ ನಿಗಧಿಪಡಿಸಬೇಕು, ನೇರ ಸಾಲಗಳ ಗುರಿ ಹೆಚ್ಚಿಸಬೇಕು. ಗಂಗಾ ಕಲ್ಯಾಣ ಕೊಳವೆ ಬಾವಿ ಪ್ರತಿ ತಾಲ್ಲೂಕಿಗೆ 20 ರಿಂದ 25 ಗುರಿ ನಿಗದಿಪಡಿಸಬೇಕು ಸಂಘಟನೆಗೆ ಆಗ್ರಹಿಸಿದರು.

ಸಮೃದ್ಧಿ ಯೋಜನೆ ಮತ್ತು ಐರಾವತ ಯೋಜನೆ ಪುನಃ ಪಾರಂಭಿಸಬೇಕು. ನಿಗಮದಿಂದ ನೀಡುತ್ತಿರುವ ವಿವಿಧ ಯೋಜನೆಗಳ ಸಹಯಧನ ನಿಗಮದ ಕೇಂದ್ರ ಕಛೇರಿಯಿಂದ ಎರಡು ಕಂತುಗಳನ್ನು ಹೊರತುಪಡಿಸಿ ಸಹಾಯಧನ ಒಂದೇ ಬಾರಿ ಬಿಡುಗಡೆ ಮಾಡಬೇಕು. ಪರಿಶಿಷ್ಟ ಜಾತಿ ಜನಾಂಗದವರಿಗೆ ಜಿಲ್ಲೆಯಲ್ಲಿ ಎಲ್ಲಾ ರಾಷ್ಟ್ರೀಯ ಬ್ಯಾಂಕಿನಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ವಿವಿಧ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಸಕಾರದ ಸವಲತ್ತುಗಳನ್ನು ಪರಿಶಿಷ್ಟ ಜಾತಿ ಜನಾಂಗದವರು ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತಗರಾಗಿರುತ್ತಾರೆ. ಇದಕ್ಕೆ ಎಲ್ಲಾ ರಾಷ್ಟ್ರೀಯ ಬ್ಯಾಂಕಿನ ವ್ಯವಸ್ಥಾಪಕರು ನೇರ ಹೊಣೆಗಾರರಾಗಿರುತ್ತಾರೆ. ಏಕೆಂದರೆ, ವಿವಿಧ ನಿಗಮದಿಂದ ಸಾಲ ಮತ್ತು ಸಹಾಯಧನಕ್ಕಾಗಿ ಬ್ಯಾಂಕುಗಳಿಗೆ ಫಲಾನುಭವಿಗಳ ಅರ್ಜಿ ತಲುಪಿದ ಮೇಲೆ ಬ್ಯಾಂಕಿನ ವ್ಯವಸ್ಥಾಪಕರು ಪರಿಶಷ್ಟ ಜಾತಿ ಜನಾಂಗದವರಿಗೆ ಸಾಲ ಮತ್ತು ಸಹಾಯಧನ ನೀಡಬೇಕಾದರೆ ಜಮೀನಿನ ಹಕ್ಕು ಪತ್ರ ಅಥವಾ ಮನೆ ಹಕ್ಕು ಪತ್ರ ಸರ್ಕಾರಿ ನೌಕರರ ವೇತನ ಪ್ರಮಾಣ ಪತ್ರ ಅಥವಾ ಆಯಾ ಬ್ಯಾಂಕಿನ ಖಾತೆಗೆ ಫಲಾನುಭವಿಗಳು ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಹಣ ಜಮಾ ಮಾಡಿದಾಗ ಮಾತ್ರ ಅದೇ ರೀತಿ ಇಲ್ಲಸಲ್ಲದ ಕೆಲವು ಅವಶ್ಯಕತೆ ಇರಲಾರದಂಥ ದಾಖಲಾತಿಗಳನ್ನು ಬೇಡುವುದರೊಂದಿಗೆ ಎಲ್ಲಾ ರಾಷ್ಟ್ರೀಯ ಬ್ಯಾಂಕಿನ ವ್ಯವಸ್ಥಾಪಕರು ಸಾಲ ಮತ್ತು ಸಹಾಯಧನ ನೀಡುತ್ತಿಲ್ಲ. ಹಾಗಾಗಿ ಪರಿಶಿಷ್ಟ ಜಾತಿ ಜನಾಂಗದವರು ಸರ್ಕಾರದ ಸವಲತ್ತು ಪಡೆಯಲು ವಂಚಿತರಾಗಿರುತ್ತಾರೆ. ಆದ ಕಾರಣಕ್ಕಾಗಿ ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಶೇಷ ಪ್ರಕರಣವೆಂದು ತಿಳಿದು ಬ್ಯಾಂಕುಗಳ ವ್ಯವಸ್ಥಾಪಕರ ಮೇಲೆ ಕೂಡಲೇ ಕ್ರಮ ತೆಗೆದುಕೊಂಡು ಸರ್ಕಾರದಿಂದ ನೋಟೀಸ್ ಜಾರಿ ಮಾಡಬೇಕೆಂದು ಮನವಿ ಮಾಡಿದರು.

ಸಮಾಜದ ಹಿರಿಯ ಮುಖಂಡರಾದ ಭಾಗಣ್ಣ ಭತ್ತರಗಿ, ಮಲ್ಲಪ್ಪ ಮಾದರ, ಶ್ರೀಕಾಂತ ಮಾರಳಕರ್, ದತ್ತು ಗೂಳನೂರ, ಬಸವರಾಜ ಕಟ್ಟಿಮನಿ, ಯುವ ಮುಖಂಡರಾದ ದೇವಿಂದ್ರ ಕಲಬಂಡೆ, ರಾಜು ಎಸ್. ಕಟ್ಟಿಮನಿ, ಬಾಬು ಸಂಗಾಪೂರ, ರಾಜು ಮದರಾ, ಬಸವರಾಜ ಕಟ್ಟಮನಿ, ಮಡಿವಾಳಪ್ಪ ಚೌಡಾಪೂರ, ಲಕ್ಷ್ಮೀಪುತ್ರ ಟೇಲರ್, ಚಂದಪ್ಪ ಕಟ್ಟಮನಿ, ಸಚೀನ ಕಟ್ಟಮನಿ, ಸಂಜೀವಕುಮಾರ ಕಟ್ಟಮನಿ, ಕಾಡಸಿದ್ದ ಕಟ್ಟಿಮನಿ, ಶೇಖರ ಕಟ್ಟಿಮನಿ, ಧರ್ಮಣ್ಣಾ ಕೆರಸಾವಳಗಿ, ಶಿವರಾಜಕುಮಾರ ಕಟ್ಟಮನಿ, ರವಿಚಂದ್ರ ಕಟ್ಟಿಮನಿ, ಕುಶಾಲ ಕಟ್ಟಿಮನಿ, ರಾಜು ಎಲ್.ಕಟ್ಟಮನಿ, ಪರಮೇಶ್ವರ ಭಂಡಾರಿ, ಧರ್ಮಣ್ಣಾ ಕಟ್ಟಮನಿ, ಲಕ್ಕಪ್ಪ ದೊಡ್ಡಮನಿ, ಚಂದಪ್ಪ ದೋಡಮನಿ, ವಿನಾಯಕ ಕಟ್ಟಮನಿ, ರಮೇಶ ಕಟ್ಟಮನಿ, ಲಂಕೆಶ ಕಟ್ಟಮನಿ, ಬಾಬು ಭೂಗನಳ್ಳಿ, ಪ್ರಶಾಂತ ಹಸರಗುಂಡಗಿ, ಚಂದ್ರಶೇಖರ ಕಾಂಬಳೆ ಸೇರಿಂದತೆ ಸಮಾಜದ ಮುಖಂಡರು, ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here