ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ನಿಮಗೆ ಆದರ್ಶವಾಗಿರಲಿ: ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

0
12

ಭಾಲ್ಕಿ: ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ಖ್ಯಾತ ವಿಜ್ಞಾನಿಗಳಾದ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸನ್ನಿಧಾನದಲ್ಲಿ ಆಚರಿಸಲಾಯಿತು.

ಪೂಜ್ಯರು ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿದ್ಯಾರ್ಥಿಗಳ ಜೊತೆ ಅವರ ಚಿಂತನೆಗಳನ್ನು ಹಂಚಿಕೊಂಡರು. ಡಾ.ಕಲಾಂ ಅವರು ಕಡುಬಡತನದ ಕುಟುಂಬದಲ್ಲಿ ಜನಿಸಿದರು. ಆದರೂ ಅವರ ಮಹತ್ತರ ಸಾಧನೆಗೆ ಅವರ ಬಡತನ ಅಡ್ಡಿಯಾಗಲಿಲ್ಲ. ಕಾರಣ ಅವರು ಕಂಡಿರುವ ಕನಸುಗಳು ದೊಡ್ಡದ್ದಾಗಿದ್ದವು. ಅವರು ವಿದ್ಯಾರ್ಥಿಗಳಿಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು.

Contact Your\'s Advertisement; 9902492681

ನೀವು ದೊಡ್ಡ ದೊಡ್ಡ ಕನಸುಗಳನ್ನು ಕಂಡಬೇಕು. ಅದನ್ನು ಸಾಕಾರ ಮಾಡುವ ದಿಶೆಯಲ್ಲಿ ನಿರಂತರ ಪ್ರಯತ್ನ ಮಾಡುತ್ತಿರಬೇಕು. ನಿಮ್ಮಲ್ಲಿ ಛಲವಿದ್ದರೆ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗುತ್ತದೆ ಕಲಾಂ ಅವರ ಈ ಮಾತನ್ನು ವಿದ್ಯಾರ್ಥಿಗಳಾದ ನೀವು ಸದಾವಕಾಲ ನೆನಪಿಡಬೇಕು. ನಿಮಗೆ ಜೀವನದಲ್ಲಿ ಏನಾದರೂ ಮಹತ್ತರ ಸಾಧನೆ ಮಾಡಬೇಕೆಂಬ ಹಂಬಲವಿದ್ದರೆ ಡಾ.ಎ.ಪಿ.ಜಿ. ಅಬ್ದುಲ್ ಕಲಾಂ ಅವರನ್ನು ಆದರ್ಶವಾಗಿ ಇಟ್ಟಿಕೊಳ್ಳಿ. ಒಬ್ಬ ಸಾಮಾನ್ಯ ವ್ಯಕ್ತಿ ಈ ದೇಶದ ರಾಷ್ಟ್ರಪತಿ ಆಗುವ ಅವರ ಜೀವನಗಾಥೆ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಅವರ ಚರಿತ್ರೆ ಓದುವ ಮೂಲಕ ನೀವು ನಿಮ್ಮ ಸಾಧನೆಯನ್ನು ಮುಂದುವರಿಸಿರಿ ಎಂದು ಪೂಜ್ಯರು ಸ್ಫೂರ್ತಿಯ ನುಡಿಗಳನ್ನು ನುಡಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಮೋಳಕೆರೆ, ಸಂಸ್ಥೆಯ ಆಡಳಿತಾಧಿಕಾರಿಯಾದ ಮೋಹನರೆಡ್ಡಿ, ಡಾ.ಮಲ್ಲಿಕಾರ್ಜುನ ಕಾರಾಮುಂಗಿ ಭಾಲ್ಕಿಯ ಇ.ಸಿ.ಓ. ಕುಸುಮಾಕುಮಾರಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here