ಕಲಬುರಗಿ: ಬಹುಜನ ಸಮಾಜ ಪಕ್ಷ ರಾಜ್ಯ ಘಟಕದ ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪಿ ಜೈಭೀಮ ಜನ ಜಾಗೃತಿ ಜಾಥಾ ಅ. 17 ರಂದು ಚಿತ್ತಾಪೂರ ಮೂಲಕ ನಗರಕ್ಕೆ ಆಗಮಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಸುನೀಲ ಇಂಗನಕಲ್ಲ ತಿಳಿಸಿದ್ದಾರೆ
ಈ ಜಾಥಾದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ಅಶೋಕ ಸಿದಾರ್ಥ, ಕರ್ನಾಟಕ ರಾಜ್ಯ ಸಂಯೋಜಕ ದಿನೇಶ ಗೌತಮ, ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪ, ಗೋಪಿನಾಥ, ರಾಜ್ಯಾಧ್ಯಕ್ಷ ಎಮ್.ಕೃಷ್ಣ ಮೂರ್ತಿ, ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಬಿ. ಧನ್ನಿ, ಎಲ್.ಆರ್.ಬೂಸ್ಲೆ, ಮತ್ತು ಇನ್ನಿತರ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.